ಕಾಶ್ಮೀರ ಕಣಿವೆಯಲ್ಲಿ ಕದನ ವಿರಾಮ ಉಲ್ಲಂಘಿಸಿ, ಗುಂಡಿನ ದಾಳಿ

ಜಮ್ಮು, ಮೇ 21-ಕಾಶ್ಮೀರ ಕಣಿವೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪದೇ ಪದೇ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಪಾಕಿಸ್ತಾನ ಯೋಧರಿಗೆ ಭಾರತೀಯ ಸೇನೆ ತಕ್ಕ ಪಾಠ ಕಲಿಸುತ್ತಿದ್ದರೂ, ಪಾಕ್ ರೇಂಜರ್‍ಗಳ ಪುಂಡಾಟ ಮುಂದುವರಿದಿದೆ.
ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್‍ನ ಹಲವು ಸ್ಥಳಗಳಲ್ಲಿನ ಗಡಿ ಔಟ್‍ಪೆÇೀಸ್ಟ್ ಗಳ ಮೇಲೆ ಇಂದು ಪಾಕ್ ಸೈನಿಕರು ಮಾರ್ಟರ್ ಷೆಲ್‍ಗಳ ದಾಳಿ ನಡೆಸಿದರು. ಅಂತಾರಾಷ್ಟ್ರೀಯ ಗಡಿಯಲ್ಲಿ ಪಹರೆಯಲ್ಲಿರುವ ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ ಎಂದು ಉನ್ನತಾ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅರ್ನಿಯಾ ವಲಯದಲ್ಲಿ ಬೆಳಗ್ಗೆ 7 ಗಂಟೆಯಿಂದ ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದು ಕೊನೆ ವರದಿ ಸ್ವೀಕರಿಸುವವರೆಗೂ ಅದು ಮುಂದುವರೆದಿತ್ತು. ನಮ್ಮ ಯೋಧರು ಪ್ರತಿದಾಳಿ ಮೂಲಕ ಸೂಕ್ತ ಪ್ರತ್ಯುತ್ತರ ನೀಡಿದ್ದಾರೆ ಎಂದು ಬಿಎಸ್‍ಎಫ್ ಅಧಿಕಾರಿ ಹೇಳಿದ್ದಾರೆ.
ಪಾಕ್ ರೇಂಜರ್‍ಗಳ ದಾಳಿಯಲ್ಲಿ ಮೂರು ಗಡಿ ಔಟ್‍ಪೆÇೀಸ್ಟ್‍ಗಳು ಜಖಂಗೊಂಡಿವೆ. ನಮ್ಮ ಯೋಧರೂ ನಡೆಸಿದ ಪ್ರತಿದಾಳಿಯಲ್ಲಿ ಪಾಕ್ ಕಡೆಯೂ ಹಾನಿಯಾಗಿದೆ. ಆದರೆ ಸಾವು ನೋವಿನ ವರದಿಗಳಿಲ್ಲ.  ಭಾರತೀಯ ಯೋಧರ ದಾಳಿಗೆ ಪಾಕಿಸ್ತಾನ ಕಂಗಲಾಗಿದೆ. ಇದರಿಂದ ಬೆಚ್ಚಿಬಿದ್ಧ ಪಾಕ್ ರೇಂಜರ್‍ಗಳು ದಯವಿಟ್ಟು ಗುಂಡಿನ ದಾಳಿ ನಿಲ್ಲಿಸಿ ಎಂದು ಬಿಎಸ್‍ಎಫ್ ಕಚೇರಿಗೆ ಕರೆ ಮಾಡಿ ಕೋರಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ