ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ 27ನೇ ಪುಣ್ಯತಿಥಿ:

ನವದೆಹಲಿ, ಮೇ 21-ಇಂದು ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ 27ನೇ ಪುಣ್ಯತಿಥಿ. ಈ ಸಂದರ್ಭದಲ್ಲಿ ಯುಪಿಎ ಅಧ್ಯಕ್ಷೆ ಮತ್ತು ರಾಜೀವ್ ಪತ್ನಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮತ್ತು ಪುತ್ರ ರಾಹುಲ್‍ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಪಕ್ಷದ ಧುರೀಣರಾದ ಮಲ್ಲಿಕಾರ್ಜುನ ಖರ್ಗೆ, ಸುಶೀಲ್ ಕುಮಾರ್ ಶಿಂಧೆ ಗೌರವ ನಮನ ಸಲ್ಲಿಸಿದ್ದಾರೆ.
ರಾಜಧಾನಿ ದೆಹಲಿಯಲ್ಲಿರುವ ವೀರಭೂಮಿಗೆ ತೆರಳಿದ ಗಣ್ಯರು ರಾಜೀವ್ ಸಮಾಧಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಿದರು.  ಈ ಸಂದರ್ಭದಲ್ಲಿ ರಾಹುಲ್ ತಮ್ಮ ತಂದೆಯನ್ನು ಸ್ಮರಿಸಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ಹೇಗೆ ಪ್ರೀತಿ-ಗೌರವಗಳನ್ನು ಸಲ್ಲಿಸಬೇಕೆಂಬುದನ್ನು ನಮಗೆ ತಂದೆ ಹೇಳಿಕೊಟ್ಟಿದ್ದಾರೆ ಎಂದು ಎಐಸಿಸಿ ಅಧ್ಯಕ್ಷರು ಟ್ವಿಟ್ ಮಾಡಿದ್ದಾರೆ.
ದ್ವೇಷ ಸಾಧಿಸಿಕೊಂಡು ಹೋಗುವವರಿಗೆ ಅದು ಜೈಲು ಇದ್ದಂತೆ. ದ್ವೇಷ-ಅಸೂಯೆ ಮುಂದುವರಿಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ಇಂದು ಅವರ ಪುಣ್ಯತಿಥಿ . ಅವರು ನನಗೆ ಹೇಳಿಕೊಟ್ಟ ತತ್ತ್ವಾದರ್ಶಗಳನ್ನು ಪಾಲಿಸಿಕೊಂಡು ಹೋಗುತ್ತಿದ್ದೇನೆ. ಇಂದು ತಂದೆಯಾಗಿ ಮಗನಿಗೆ ಅತ್ಯಮೂಲ್ಯ ಉಡುಗೊರೆ ನೀಡಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಚೆನ್ನೈ ಸಮೀಪದ ಶ್ರೀ ಪೆರಂಬದೂರಿನಲ್ಲಿ ಮೇ 21, 1991ರಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅತ್ಮಹತ್ಯಾ ಬಾಂಬ್ ದಾಳಿಗೆ ಹತರಾದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ