ಜಮ್ಮು, ಫೆ.10-ನಗರದ ಹೊರವಲಯದಲ್ಲಿರುವ ಸಜ್ವಾಂಮ್ ಸೇನಾ ಕ್ಯಾಂಪ್ ಮೇಲೆ ಉಗ್ರರ ತಂಡ ಇಂದು ಮುಂಜಾನೆ ದಾಳಿ ನಡೆಸಿದ್ದು, ಒಬ್ಬ ಯೋಧ ಹುತಾತ್ಮನಾಗಿದ್ದು, ಮೂವರು ಗಾಯಗೊಂಡಿದ್ದಾರೆ.
ಜಯ-ಹಿ-ಮೊಹಮ್ಮದ್ ಉಗ್ರ ಸಂಘಟನೆಯ ಮೂವರಿಂದ ನಾಲ್ವರು ಮುಂಜಾನೆ 4.55ರಲ್ಲಿ ಕ್ಯಾಂಪ್ನ ಸೇನಾ ಸಿಬ್ಬಂದಿ ವಸತಿ ಪ್ರದೇಶದೊಳಗೆ ನುಗ್ಗಿದ್ದು, ಗುಂಡು ಹಾರಿಸಿದ್ದಾರೆ.
ಸೇನಾಪಡೆಯ ವಿಶೇಷ ಕಾರ್ಯಾಚರಣೆ ತಂಡ ಕ್ಯಾಂಪ್ ಸುತ್ತುವರೆದು ಕಾರ್ಯಾಚರಣೆ ಆರಂಭಿಸಿದೆ ಎಂದು ಡಿಜಿಪಿ ಎಸ್ಪಿ ವಾಯ್ಡ್ ತಿಳಿಸಿದ್ದಾರೆ.
ಈ ಪ್ರದೇಶದ ಎಲ್ಲಾ ಶಾಲೆಗಳನ್ನು ಬಂದ್ ಮಾಡಲಾಗಿದೆ. ನಗರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
36ನೇ ಬ್ರಿಗೇಡ್ ಅರೆಸೇನಾಪಡೆಯ ಶಿಬಿರ ಇದಾಗಿದ್ದು, ಉಗ್ರರು ಸೇನಾ ಕುಟುಂಬದ ಮನೆಯೊಂದರ ಒಳಗೆ ನುಗ್ಗಿ ಒತ್ತೆಯಾಳುಗಳನ್ನು ಬೆದರಿಸಿ ಗುಂಡುಹಾರಿಸಿದ್ದಾರೆ.
ಸೇನಾಪಡೆಯ ಅಧಿಕಾರಿ ಪುತ್ರಿ ಸೇರಿ ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
News Credit: Samachar Network, Image Credit: thestatesman.com