ಬೀದರ್ ನಲ್ಲಿ ರಾಜಕೀಯ ಲೇಕ್ಕಾಚಾರಗಳೆಲ್ಲವೂ ಬುಡಮೇಲು: ಹೊಸ ಮುಖಗಳಿಗೆ ಮತದಾರ ಮಣೆ

ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ರಾಜಕೀಯ ಲೇಕ್ಕಾಚಾರಗಳೆಲ್ಲವೂ ಬುಡಮೇಲೆ ಮಾಡುವಂತೆ ಮಾಡಿದ್ದು ಘಟಾನುಘಟಿ ನಾಯಕರು ತಮ್ಮ ಕ್ಷೇತ್ರದಲ್ಲಿ ಅಧಿಪತ್ಯ ಸಾಧನೆ ಮಾಡಿದ್ರೆ… ಹೊಸ ಮುಖಗಳಿಗೆ ಮತದಾರ ಮಣೆ ಹಾಕಿದ್ದಾನೆ. ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಅಶೋಕ ಖೇಣಿ ಹಿನಾಯ ಸೋಲುಂಡಿದ್ದರೆ, ಬಸವಕಲ್ಯಾಣದಲ್ಲಿ ಅನೀರಿಕ್ಷಿತವಾಗಿ ಕಾಂಗ್ರೇಸ್ ನ ಬಿ.ನಾರಾಯಣರಾವ್ ಎಂಬಾತರು ಶಕ್ತಿ ಕೇಂದ್ರಕ್ಕೆ ಕಾಲಿಟ್ಟಿದ್ದಾರೆ.

ಬೀದರ್ ಜಿಲ್ಲೆಯ ಒಟ್ಟು 6 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೇಸ್ 4, ಬಿಜೆಪಿ-1 ಮತ್ತು ಜೆಡಿಎಸ್ 1 ಸ್ಥಾನದಲ್ಲಿ ಗೆಲುವಿನ ನಗೆ ಭಾರಿ ಫಲಿತಾಂಶ ಹೊರ ಬಿದ್ದಿದೆ. ನಗರದ ಬಿವಿಬಿ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಕೇಂದ್ರದಲ್ಲಿ 19 ರೌಂಡ್ಸ್ ಗಳಲ್ಲಿ 14 ಟೇಬಲಗಳಲ್ಲಿ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಹೀಗಿದೆ.

ಔರಾದ್(ಮೀಸಲು)- ಪ್ರಭು ಚವ್ಹಾಣ- ಬಿಜೆಪಿ- 75061 ಮತಗಳು ಪಡೆದಿದ್ದಾರೆ. ಗೆಲುವಿನ ಅಂತರ 10592 ಮತಗಳಿಂದ ಪ್ರತಿಸ್ಪರ್ಧಿ ಕಾಂಗ್ರೇಸ್ ನ ವಿಜಯಕುಮಾರ ಕವಡ್ಯಾಳೆ ಅವರನ್ನು ಸೋಲಿಸಿದ್ದಾರೆ.

ಹುಮನಾಬಾದ್: ರಾಜಶೇಖರ ಪಾಟೀಲ್-ಕಾಂಗ್ರೇಸ್-74441 ಮತಗಳು ಪಡೆಯುವ ಮೂಲಕ ಪ್ರತಿಸ್ಪರ್ಧಿ ಸುಭಾಷ್ ಕಲ್ಲೂರ ಅವರಿಗಿಂದ 31814 ಮತಗಳ ಅಂತರದಿಂದ ಗೆಲುವಿನ ಪತಾಕೆ ಹಾರಿಸಿದ್ದಾರೆ.

ಬಸವಕಲ್ಯಾಣದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಬಿ.ನಾರಾಯಣ ಅವರು 61211 ಮತಗಳು ಪಡೆಯುವ ಮೂಲಕ ಪ್ರತಿಸ್ಪರ್ಧಿ ಬಿಜೆಪಿಯ ಮಲ್ಲಿಕಾರ್ಜುನ್ ಖೂಬಾ ವಿರುದ್ಧ 17272 ಮತಗಳ ಅಂತರದಿಂದ ಗೆದ್ದಿದ್ದಾರೆ.

ಬೀದರ್ ಉತ್ತರ ಕ್ಷೇತ್ರದಲ್ಲಿ ಕಾಂಗ್ರೇಸ್ ನ ರಹಿಂ ಖಾನ 730270 ಮತಗಳು ಪಡೆಯುವ ಮೂಲಕ ಪ್ರತಿಸ್ಪರ್ಧಿ ಬಿಜೆಪಿಯ ಸುರ್ಯಕಾಂತ ನಾಗಮಾರಪಳ್ಳಿ ಅವರನ್ನು 10245 ಮತಗಳಿಂದ ಸೋಲಿಸಿದ್ದಾರೆ.

ಭಾಲ್ಕಿ: ಕಾಂಗ್ರೇಸ್ನ ಈಶ್ವರ ಖಂಡ್ರೆ ಅವರು 75077 ಮತಗಳು ಪಡೆಯುವ ಮೂಲಕ ಪ್ರತಿಸ್ಪರ್ಧಿ ಬಿಜೆಪಿಯ ಡಿ.ಕೆ ಸಿದ್ರಾಮ್ ಅವರನ್ನು 21438 ಮತಗಳ ಅಂತರದಿಂದ ಪರಾಭವಗೊಳಿಸಿ ಗೆಲುವಿನ ನಗೆ ಚೆಲ್ಲಿದ್ದಾರೆ.

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್ ನ ಬಂಡೆಪ್ಪ ಕಾಶೆಂಪೂರ 55107 ಮತಗಳು ಪಡೆಯುವ ಮೂಲಕ ಪ್ರತಿಸ್ಪರ್ಧಿ ಬಿಜೆಪಿಯ ಡಾ,ಶೈಲೇಂದ್ರ ಬೇಲ್ದಾಳೆ ಅವರನ್ನು 12756 ಮತಗಳ ಅಂತರದಿಂದ ಪರಾಭವ ಗೊಳಿಸಿದ್ದಾರೆ.ಈ ಕ್ಷೇತ್ರದಲ್ಲಿ ಶಾಸಕರಾಗಿದ್ದ ಕಾಂಗ್ರೇಸ್ ನ ಅಶೋಕ ಖೇಣಿ ಮೂರನೇ ಸ್ಥಾನಕ್ಕೆ ಕುಸಿದು ಬಿದ್ದು ಹಿನಾಯ ಸೋಲುಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ