ಕೋಲ್ಕತಾ, ಮೇ 14- ಮನೆಗೆ ಬೆಂಕಿ ಹಚ್ಚಿ ಸಿಪಿಐ-ಎಂ ಕಾರ್ಯಕರ್ತ ಮತ್ತು ಅವರ ಪತ್ನಿಯನ್ನು ಜೀವಂತ ದಹನ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಇಂದು ರಾಜ್ಯದಲ್ಲಿ ಪಂಚಾಯಿತಿ ಚುನಾವಣೆ ನಡೆಯುತ್ತಿದ್ದು, ಅದಕ್ಕೆ ಮುನ್ನವೇ ಈ ಕೃತ್ಯ ನಡೆದಿದೆ.
ದೆಬೋ ದಾಸ್ ಮತ್ತು ಉಷಾ ದಾಸ್ ಹತ್ಯೆಯಾದ ದಂಪತಿ ಎಂದು ಪೆÇಲೀಸರು ತಿಳಿಸಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆ ಕಕ್ದ್ವೀಪ್ನಲ್ಲಿ ಇಂದು ನಸುಕಿನಲ್ಲಿ ಈ ಘಟನೆ ನಡೆದಿದೆ. ಕಚರಿ ಬರಿ ನಿವಾಸಿ ದೆಬೊ ದಾಸ್ ಮೆನೆಗೆ ಮಧ್ಯರಾತ್ರಿ 1 ಗಂಟೆ ನಂತರ ಬೆಂಕಿ ಬಿದ್ದಿರುವುದನ್ನು ಸ್ಥಳೀಯ ಗಮನಿಸಿದರು. ಪೆÇಲೀಸರು ಸ್ಥಳಕ್ಕೆ ಆಗಮಿಸುವ ಮುನ್ನವೇ ದಂಪತಿ ಸುಟ್ಟು ಕರಕಲಾಗಿದ್ದರು.
ಇದೊಂದು ರಾಜಕೀಯ ದ್ವೇಷದ ಕಗ್ಗೊಲೆ ಎಂದು ಹೇಳಲಾಗಿದ್ದು, ಪೆÇಲೀಸರು ತನಿಖೆ ಮುಂದುವರಿಸಿದ್ದಾರೆ.
ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ