ಬೆಂಗಳೂರು, ಮೇ 11-ನಾಳೆ ನಡೆಯಲಿರುವ ಚುನಾವಣೆಯ ಮತ ಎಣಿಕೆ ಮೇ 15 ರಂದು ನಡೆಯಲಿದ್ದು, ಬೆಂಗಳೂರಿನ ಐದು ಮತ ಎಣಿಕೆ ಕೇಂದ್ರಗಳೂ ಸೇರಿದಂತೆ ರಾಜ್ಯದಲ್ಲಿ 283 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಬಿಎಂಎಸ್ ವುಮೆನ್ಸ್ ಕಾಲೇಜು, ಮೌಂಟ್‍ಕಾರ್ಮೆಲ್ ಪಿಯು ಕಾಲೇಜು ಹಾಗೂ ಮಹಾರಾಣಿ ಆಟ್ರ್ಸ್ ಅಂಡ್ ಕಾಮರ್ಸ್ ಕಾಲೇಜು ಮತ್ತು ಎಸ್‍ಎಸ್‍ಎಂಆರ್‍ವಿ ಕಾಲೇಜು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ, ಸರ್ಕಾರಿ ಆರ್.ಸಿ.ಕಾಲೇಜಿನಲ್ಲಿ ಸೇರಿದಂತೆ ಐದು ಕಡೆ ಮತ ಎಣಿಕೆ ನಡೆಯಲಿದೆ.
ಉಳಿದಂತೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮತದಾನ ಮುಗಿಯುತ್ತಿದ್ದಂತೆ ವಿದ್ಯುನ್ಮಾನ ಮತ ಯಂತ್ರಗಳನ್ನು ಎಣಿಕೆ ಕೇಂದ್ರಗಳಿಗೆ ತಂದು ಭದ್ರತೆಯಲ್ಲಿಡಲಾಗುತ್ತದೆ.
ಮೇ 15 ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ನಿಗದಿತ ಕೇಂದ್ರಗಳಲ್ಲಿ ಪ್ರಾರಂಭವಾಗಲಿದೆ. ಮತಯಂತ್ರಗಳನ್ನು ಭದ್ರವಾಗಿಡಲು ಸ್ಟ್ರಾಂಗ್ ರೂಂಗಳ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಭದ್ರತೆ ಕಲ್ಪಿಸಲಾಗಿದೆ.