ಬಾಡಿ ಬಿಲ್ಡರ್‍ಗಳು, ಪೈಲ್ವಾನರಿಗೂ 56 ಇಂಚಿನ ಎದೆ ಇರುತ್ತದೆ! – ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಮೇ 9-ಬಾಡಿ ಬಿಲ್ಡರ್‍ಗಳು, ಪೈಲ್ವಾನರಿಗೂ 56 ಇಂಚಿನ ಎದೆ ಇರುತ್ತದೆ. ಅದರಲ್ಲಿ ವಿಶೇಷವೇನಿದೆ. ಆದರೆ ಈ ಎದೆಯಲ್ಲಿ ಬಡವರಿಗಾಗಿ ಮಿಡಿಯುವ ಹೃದಯವಿರಬೇಕಷ್ಟೇ. ಅದು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಡವರಿಗಾಗಿ ಮಿಡಿಯುವ ಹೃದಯವಿರಬೇಕು. ಅದು ಎಷ್ಟು ಇಂಚು ಇದ್ದರೇನು ಫಲ ಎಂದು ಹೇಳಿದರು.
ಮುಧೋಳ ನಾಯಿಗಳಿಗಿರುವ ನಿಯತ್ತು ಕಾಂಗ್ರೆಸ್‍ನವರಿಗಿಲ್ಲ ಎಂದು ಮೋದಿಯವರು ಹೇಳುತ್ತಾರೆ. ತಮ್ಮನ್ನು ರಾಜಕೀಯವಾಗಿ ಬೆಳೆಸಿದ ಗುರು ಅಡ್ವಾಣಿ ಅವರನ್ನೇ ಮೂಲೆ ಗುಂಪು ಮಾಡಿದವರಿಂದ ನಾವು ನಿಯತ್ತಿನ ಪಾಠ ಕಲಿಯಬೇಕೇ ಎಂದು ಅವರು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ದಲಿತರ ದೌರ್ಜನ್ಯ ಹೆಚ್ಚಾಗಿದೆ. ಈ ಬಗ್ಗೆ ಅವರು ಸೂಕ್ತ ಕ್ರಮಕೈಗೊಳ್ಳುವುದನ್ನು ಬಿಟ್ಟು ಇನ್ನೊಂದು ಸರ್ಕಾರದ ವಿರುದ್ಧ ಆರೋಪ ಮಾಡುತ್ತಾರೆ. ಇದು ಎಷ್ಟು ಸಮಂಜಸ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ