ಲಂಡನ್,ಮೇ 9
ಬ್ಯಾಂಕ್ ಗಳಿಗೆ ಸಾವಿರಾರೂ ಕೋಟಿ ರೂ. ಸಾಲ ವಾಪಸ್ ನೀಡಲಾಗದೇ ಸುಸ್ತೀದಾರರಾಗಿರುವ ಮದ್ಯ ಉದ್ಯಮಿ ವಿಜಯ್ ಮಲ್ಯಗೆ ಭಾರಿ ಹಿನ್ನಡೆಯುಂಟಾಗಿದ್ದು, ಬ್ರಿಟನ್ ನಲ್ಲಿರುವ ಮಲ್ಯ ಆಸ್ತಿಯನ್ನು ಭಾರತೀಯ ಬ್ಯಾಂಕ್ ಗಳು ಮಾರಾಟ(ಹರಾಜು) ಹಾಕುವುದಕ್ಕೆ ಇದ್ದ ಕಾನೂನು ತೊಡಕು ನಿವಾರಣೆಯಾಗಿದೆ.
10,000 ಕೋಟಿ ರೂಪಾಯಿ ಸಾಲದ ಮೊತ್ತವನ್ನು ವಾಪಸ್ ಪಡೆಯುವುದಕ್ಕೆ ಸಂಬಂಧಿಸಿದಂತೆ ಭಾರತದ 13 ಬ್ಯಾಂಕ್ ಗಳು ಬ್ರಿಟನ್ ಹೈಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದವು. ಅರ್ಜಿಯ ವಿಚಾರಣೆ ನಡೆಸಿರುವ ಬ್ರಿಟನ್ ಹೈಕೋರ್ಟ್ ಮಲ್ಯ ಅವರಿಗೆ ಸಂಬಂಧಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದನ್ನು ರದ್ದುಗೊಳಿಸುವ ಆದೇಶ ನೀಡಲು ನಿರಾಕರಿಸಿದ್ದು, ಭಾರತೀಯ ಬ್ಯಾಂಕ್ ಗಳು 1.145 ಬಿಲಿಯನ್ ಪೌಂಡ್ ಗಳಷ್ಟು ಹಣವನ್ನು ವಾಪಸ್ ಪಡೆಯುವುದಕ್ಕೆ ಅರ್ಹತೆ ಹೊಂದಿವೆ ಎಂದು ಬ್ರಿಟನ್ ಹೈಕೋರ್ಟ್ ಹೇಳಿದೆ.
ಈ ಆದೇಶದ ಮೂಲಕ ಬ್ರಿಟನ್ ನಲ್ಲಿರುವ ಮಲ್ಯ ಆಸ್ತಿಯನ್ನು ಭಾರತೀಯ ಬ್ಯಾಂಕ್ ಗಳು ತಮಗೆ ಬರಬೇಕಿರುವ ಸಾಲದ ಮೊತ್ತಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.