ತುಮಕೂರು, ಮೇ 3- ಮುಂದೆ ಹೋಗುತ್ತಿದ್ದ ಟ್ಯಾಂಕರ್ ಲಾರಿ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿ ರಿವರ್ಸ್ ತೆಗೆದುಕೊಂಡು ಸರ್ವೀಸ್ ರಸ್ತೆಗೆ ತಿರುಗಲು ಯತ್ನಿಸಿದಾಗ ಹಿಂದಿನಿಂದ ಬಂದ ಕಾಂಕ್ರಿಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಮೃತಪಟ್ಟಿರುವ ಘಟನೆ ನಗರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಚಿತ್ರದುರ್ಗ ಮೂಲದ ರಾಜು (38) ಮೃತಪಟ್ಟ ಚಾಲಕ.
ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಬಟವಾಡಿ ಸಮೀಪ ಫ್ಲೈ ಓವರ್ ಬಳಿ ಟ್ಯಾಂಕರ್ ಲಾರಿ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿ ಸರ್ವೀಸ್ ರಸ್ತೆಗೆ ತಿರುಗಲು ಯತ್ನಿಸಿದೆ. ಈ ವೇಳೆ ಹಿಂದಿನಿಂದ ಬಂದ ಕಾಂಕ್ರಿಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದಿದೆ.
ಇದರಿಂದಾಗಿ ಕಾಂಕ್ರಿಟ್ ಮಿಕ್ಸರ್ ಲಾರಿಯ ಕ್ಯಾಬಿನ್ ನಜ್ಜುಗುಜ್ಜಾಗಿ ಚಾಲಕ ಸಿಲುಕಿಕೊಂಡಿದ್ದ. ತಕ್ಷಣ ಅಗ್ನಶಾಮಕ ದಳದ ಸಿಬ್ಬಂದಿ, ಸಂಚಾರಿ ಪೆÇಲೀಸರು ಹಾಗೂ ಸಾರ್ವಜನಿಕರು ಸೇರಿ ಕ್ಯಾಬಿನ್ನ ಕಬ್ಬಿಣದ ಸರಳು ಕತ್ತರಿಸಿ ಚಾಲಕ ರಾಜುವನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು. ಆದರೆ, ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಸಂಚಾರಿ ಠಾಣೆ ಸಬ್ಇನ್ಸ್ಪೆಕ್ಟರ್ ಮೋಹನ್ರೆಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವೃತ್ತ ನಿರೀಕ್ಷಕ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲಿಸಿದರು. ಅಪಘಾತದಿಂದಾಗಿ ಒಂದೆರಡು ಗಂಟೆ ಕಾಲ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.