ರಾಯ್ಪುರ, ಫೆ.20-ಛತ್ತೀಸ್ಗಢದ ನಕ್ಸಲರ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಮಾವೋವಾದಿಗಳ ನಿಗ್ರಹ ಕಾರ್ಯಾಚರಣೆಯನ್ನು ಜಂಟಿ ಪಡೆ ಮುಂದುವರಿಸಿವೆ. ಭೆಜ್ಜಿ ಮತ್ತು ಎಲರಮಡಗು ನಡುವಣ ಅರಣ್ಯದಲ್ಲಿ ನಡೆದ ಭೀಕರ ಗುಂಡಿನ ಕಾಳಗದಲ್ಲಿ 20 ನಕ್ಸಲರು ಹತರಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಪೆÇಲೀಸರು ಹುತಾತ್ಮರಾಗಿದ್ದು, ನಾಗರಿಕನೊಬ್ಬ ಬಲಿಯಾಗಿದ್ದಾನೆ.
ಛತ್ತೀಸ್ಗಢದ ಮಾವೋವಾದಿಗಳ ಪ್ರಾಬಲ್ಯವಿರುವ ಸ್ಥಳಗಳಲ್ಲಿ ಬಂಡುಕೋರರಿಂದ ಭಾರೀ ದಾಳಿ ನಡೆಯಲಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ಆದರ ಬೆನ್ನಲ್ಲೇ ನಕ್ಸಲರು ಭೆಜ್ಜಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ರಸ್ತೆ ನಿರ್ಮಾಣ ಕಾಮಗಾರಿ ಮೇಲೆ ದಾಳಿ ನಡೆಸಿದರು.
ಈ ಬಗ್ಗೆ ಮಾಹಿತಿ ತಿಳಿದ ವಿಶೇಷ ಕಾರ್ಯಪಡೆ, ಜಿಲ್ಲಾ ಮೀಸಲು ಗಾರ್ಡ್ ಮತ್ತು ಸ್ಥಳೀಯ ಪೆÇಲೀಸರ ಜಂಟಿ ತಂಡ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಇಳಿಯಿತು. ಇದೇ ಸಂದರ್ಭದಲ್ಲಿ ಮಾವೋವಾದಿಗಳು ಗುಂಡು ಹಾರಿಸಿದಾಗ ಭಾರೀ ಎನ್ಕೌಂಟರ್ ನಡೆಯಿತು.
ಈ ಗುಂಡಿನ ಕಾಳಗದಲ್ಲಿ 20ಕ್ಕೂ ಹೆಚ್ಚು ನಕ್ಸಲರು ಹತರಾದರು. ಇಬ್ಬರು ಪೆÇಲೀಸರು ಹುತಾತ್ಮರಾಗಿದ್ದು, ಮತ್ತೊಬ್ಬ ನಾಗರಿಕ ಬಲಿಯಾಗಿದ್ದಾನೆ ಎಂದು ವಿಶೇಷ ಪೆÇಲೀಸ್ ಮಹಾ ನಿರ್ದೇಶಕ (ನಕ್ಸಲ್ ನಿಗ್ರಹ ಕಾರ್ಯಾಚರಣೆ) ಡಿ.ಎಂ.ಅವಸ್ಥಿ ತಿಳಿಸಿದ್ದಾರೆ.