ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ವಶಪಡೆ

ಬಂಗಾರಪೇಟೆ, ಫೆ.20- ಅಕ್ರಮ ಮರಳು ದಂಧೆ ನಡೆಯುತ್ತಿರುವ ಖಚಿತ ಮಾಹಿತಿ ಪಡೆದ ಜಿಲ್ಲಾಧಿಕಾರಿ ಜಿ.ಸತ್ಯವತಿ ದಿಢೀರ್ ಭೇಟಿ ನೀಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ವಶಕ್ಕೆ ಪಡೆದಿದ್ದಾರೆ.

ಅಕ್ರಮ ಮರಳು ರವಾನೆಗೆ ಖ್ಯಾತಿಗೊಂಡಿರುವ ತಾಲ್ಲೂಕಿನ ಗಡಿ ಭಾಗವಾದ ದೊಡ್ಡಪೆÇನ್ನಾಂಡಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ಪಿ ನಂಬರ್ ಜಮೀನುಗಳಲ್ಲಿ ರಾಶಿ ರಾಶಿಯಾಗಿ ಗುಡ್ಡೆ ಮಾಡಿರುವ ಮರಳನ್ನು ವಶಪಡಿಸಿಕೊಳ್ಳಲಾಗಿದೆ.

ಹಲವಾರು ವರ್ಷಗಳ ಹಿಂದೆ ಈ ದಂಧೆ ರಾಜಾರೋಷವಾಗಿ ನಡೆದುಕೊಂಡು ಬರುತ್ತಿದ್ದರೂ, ಸ್ಥಳೀಯವಾಗಿ ತಾಲ್ಲೂಕು ಆಡಳಿತ ಅಕ್ರಮ ಮರಳು ದಂಧೆಯನ್ನು ಹತೋಟಿಗೆ ತರುವಲ್ಲಿ ವಿಫಲವಾಗಿದ್ದರಿಂದ ಜಿಲ್ಲಾಧಿಕಾರಿ ಈ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿಯಲ್ಲಿ ತಮಿಳುನಾಡಿನಿಂದ ತರುವ ಮರಳನ್ನು ಮೊದಲು ದೊಡ್ಡಪೆÇನ್ನಾಂಡಹಳ್ಳಿ ಗ್ರಾಮದ ಪಿ.ನಂಬರ್ ಜಮೀನುಗಳಲ್ಲಿ ಗುಡ್ಡೆ ಮಾಡಲಾಗುತ್ತದೆ.ಹಗಲಲ್ಲಿ ರಾಜಾರೋಷವಾಗಿ ತಮಿಳುನಾಡಿನಿಂದ ಮರಳನ್ನು ಸಾಗಿಸಲಾಗುವುದು.ರಾಶಿ ರಾಶಿಯಾಗಿ ಗುಡ್ಡೆ ಮಾಡಿದ ನಂತರ ರಾತ್ರಿ ವೇಳೆಯಲ್ಲಿ ಬೆಂಗಳೂರು ನಗರಕ್ಕೆ ಲಾರಿಗಳಲ್ಲಿ ಸಾಗಾಣೆಕೆ ಮಾಡಲಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ದೊಡ್ಡಪೆÇನ್ನಾಂಡಹಳ್ಳಿಯಲ್ಲಿ ಶೇಖರಣೆ ಮಾಡಿರುವ ಮರಳನ್ನು ಎರಡು ಮಾರ್ಗಗಳಾಗಿ ರವಾನೆ ಮಾಡಲಾಗುತ್ತಿದ್ದು, ಮಾಲೂರು ತಾಲ್ಲೂಕು ಮಾಸ್ತಿ ಮತ್ತು ಬಂಗಾರಪೇಟೆ ಮೂಲಕ ಬೆಂಗಳೂರು ನಗರದ ಸ್ಥಳಗಳಿಗೆ ಸಾಗಾಣೆ ಮಾಡುವ ದಂಧೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಎಂದು ತಿಳಿದು ಬಂದಿದೆ.
ರಾತ್ರಿ 11 ಗಂಟೆಯಿಂದ ಮುಂಜಾನೆ 4 ಗಂಟೆಯೊಳಗೆ ಲಾರಿಗಳಲ್ಲಿ ತುಂಬಿಸಿಕೊಂಡು ಬರುವ ಮರಳನ್ನು ಸುರಕ್ಷಿತವಾಗಿ ಕೋಲಾರದ ಚೆಕ್‍ಪೆÇೀಸ್ಟ್‍ವರೆಗೆ ಕಾರುಗಳಲ್ಲಿ ರಕ್ಷಣೆ ನೀಡಿ ಸಾಗಿಸುವ ತಂಡ ಅಧಿಕಾರಿಗಳಿಗೆ ಗೊತ್ತಿದ್ದರೂ ಯಾವುದೇ ರೀತಿಯಲ್ಲಿ ಕಾನುನು ಕ್ರಮಕ್ಕೆ ಮುಂದಾಗಿಲ್ಲ ಎಂದರೆ ಯಾವ ರೀತಿಯಲ್ಲಿ ಮರಳು ದಂದೆ ನಡೆಯುತ್ತಿದೆ ಎಂಬುದು ಊಹೆಗೂ ಮೀರಿದ್ದಾಗಿದೆ.

ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಟಿಪ್ಪರ್‍ಗಳಲ್ಲಿ ತುಂಬಿದ್ದ ಮರರಳನ್ನು ದೊಡ್ಡಪೆÇನ್ನಾಂಡಹಳ್ಳಿ ಗ್ರಾಮದ ಪಿ.ನಂಬರ್ ಜಮೀನುಗಳಲ್ಲಿ ಶೇಖರಣೆ ಮಾಡಿ ತಮಿಳುನಾಡು ಕಡೆ ವಾಹನ ಸಮೇತ ಮರಳು ದಂಧೆ ಕೋರರು ಪರಾರಿಗೊಂಡರು.ಕೊನೆಗೆ ಒಂದು ಲಾರಿಯನ್ನು ಮತ್ತು ಶೇಖರಣೆ ಮಾಡಿರುವ ಮರಳನ್ನು ಜಿಲ್ಲಾಧಿಕಾರಿಗಳು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
ಈ ಬಗ್ಗೆ ದೂರು ದಾಖಲಿಸಿರುವ ಜಿಲ್ಲಾಧಿಕಾರಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ