ಬೀದರ್, ಏ. 26- ಔರಾದ್ ಕ್ಷೇತ್ರದ ಸಂಗಂಮ್ ಗ್ರಾಮದ ಶಾಲಿವಾನ ಪಟಿಲ್ ತಂಡ ಹಾಗೆ ಹಲವರು ಬಿಜೆಪಿಗೆ ಸೇರ್ಪಡೆಯಾದರು. ಕಾಂಗ್ರೆಸ್, ಜೆಡಿಎಸ್ ಸೇರಿ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರಿದರು.
ಪಕ್ಷದ ಧ್ವಜ ನೀಡಿ ಬರಮಾಡಿಕೊಂಡ ಕ್ಷೇತ್ರದ ಅಭ್ಯರ್ಥಿ ಪ್ರಭು ಚವ್ಹಾಣ್ ಅವರ ನೇತ್ರತ್ವದಲ್ಲಿ ಹಲವರು ಬಿಜೆಪಿ ಸೇರ್ಪಡೆಯಾಗಿದ್ದು ಖುಷಿ ತಂದಿದೆ. ಇನ್ನೂ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಸೇರಲಿದ್ದಾರೆ. ನಾವೇ ಅಭ್ಯರ್ಥಿ ಎಂದು ತಿಳಿದು ಕೆಲಸ ಮಾಡಬೇಕು ಎಂದು ಹೇಳಿದರು.
ಕ್ಷೇತ್ರದ ಎಲ್ಲೆಡೆ ಬಿಜೆಪಿ ಪರ ಹವಾ ಇದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮೇ 12 ರವರೆಗೆ ಹಗಲಿರುಳು ಶ್ರಮಿಸಬೇಕು. ಎಲ್ಲ ಸಮುದಾಯದ ಜನರಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ನಡೆಸಿ. ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಒಂದೇ ಆಯ್ಕೆ ಇದೆ ಎಂದು ಹೇಳಿದರು.
ಆಡಳಿತರೂಢ ಕಾಂಗ್ರೆಸ್ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ ರಾಜ್ಯದಲ್ಲಿ ಯವುದೇ ಹೇಳಿಕೊಳ್ಳುವಂಥ ಅಭಿವೃದ್ಧಿ ಕೆಲಸ ಆಗಿಲ್ಲ. ಕ್ಷೇತ್ರದ ಜನ ಮತ್ತೆ ಕಮಲಕ್ಕೆ ಜೈ ಎಂದಿದ್ದಾರೆ .