ನವದೆಹಲಿ,ಆ.10-ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ಸಿಂಹಗಳ ಸಂತತಿ ಹೆಚ್ಚಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಿಂಹಗಳ ಸಂತತಿ ಹೆಚ್ಚಾಗಲು ಕಾರಣಕರ್ತರಾದ ದೇಶದ ಜನರನ್ನು ಅಭಿನಂದಿಸಿದ್ದಾರೆ.
ವಿಶ್ವ ಸಿಂಹಗಳ ದಿನಾಚರಣೆ ದಿನವಾದ ಇಂದು ಟ್ವಿಟ್ ಮಾಡಿರುವ ಅವರು ಭಾರತ ಸಿಂಹಗಳ ತವರು ಮನೆಯಾಗಿ ಪರಿವರ್ತನೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗಿರ್ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಏಷ್ಯಾಟಿಕ್ ಸಿಂಹಗಳ ಸಂಖ್ಯೆ 2020ರಲ್ಲಿ 674 ಇದೆ. ಕಳೆದ ಐದು ವರ್ಷಗಳಿಂದ ಸಿಂಹಗಳ ಸಂತತಿ ಹೆಚ್ಚುತ್ತಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ.
ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಿರ್ ಅರಣ್ಯದಲ್ಲಿದ್ದ ಸಿಂಹಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡಿದ್ದೆ ಎನ್ನುವುದನ್ನು ಮೋದಿ ಉಲ್ಲೇಖಿಸಿದ್ದಾರೆ.