ಚೆನ್ನೈ: ಅನಾರೋಗ್ಯದಿಂದಾಗಿ ರಾಜಕೀಯದಿಂದ ದೂರ ಉಳಿದಿರುವ ತಮಿಳು ಸೂಪರ್‍ಸ್ಟಾರ್ ರಜಿನಿಕಾಂತ್, ಭವಿಷ್ಯದಲ್ಲಿ ರಾಜಕೀಯ ಪ್ರವೇಶಿಸುವ ಯಾವುದೇ ಯೋಜನೆ ತಮಗಿಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಬದಲಿಸುವ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ ಎಂದಿರುವ ಅವರು, ತಮ್ಮ ರಜಿನಿ ಮಕ್ಕಳ್ ಮಂಡ್ರಮ್ ಪಕ್ಷ ವನ್ನು ವರ್ಜಿಸುವ ಮೂಲಕ ರಾಜಕೀಯ ಅಧ್ಯಾಯವನ್ನು ಮುಗಿಸಿರುವುದಾಗಿ ತಿಳಿಸಿದ್ದಾರೆ.
2018ರಲ್ಲಿ ಆರಂಭಿಸಲಾಗಿದ್ದ ರಜಿನಿ ಮಕ್ಕಳ್ ಮಂಡ್ರಮ್ ಅಥವಾ ಜನರ ವೇದಿಕೆಯನ್ನು ವರ್ಜಿಸಿ, ಮುಂದಿನ ದಿನಗಳಲ್ಲಿ ರಜಿನಿಕಾಂತ್ ರಸಿಗರ್ ನರ್ಪಾನಿ ಮಂಡ್ರಮ್ ಅಥವಾ ರಜಿನಿಕಾಂತ್ ಅಭಿಮಾನಿಗಳ ಕಲ್ಯಾಣ ವೇದಿಕೆಯನ್ನು ರಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.