ಉತ್ತರಪ್ರದೇಶ ಎಟಿಎಸ್ ಕಾರ್ಯಾಚರಣೆ: ಇಬ್ಬರು ಅಲ್‍ಖೈದಾ ಉಗ್ರರ ಬಂಧನ ಉಗ್ರರು ಯೋಜಿಸಿದ್ದ ಪ್ರಮುಖ ದಾಳಿ ವಿಫಲ

ಲಖನೌ : ಪಾಕಿಸ್ಥಾನ ಪ್ರೇರಿತ ಉಗ್ರಸಂಘಟನೆ ಅಲ್ ಖೈದಾ ಉತ್ತರ ಪ್ರದೇಶದಲ್ಲಿ ಯೋಜಿಸಿದ್ದ ಪ್ರಮುಖ ಭಯೋತ್ಪಾದಕ ದಾಳಿಯನ್ನು ಭಯೋತ್ಪಾದನಾ ನಿಗ್ರಹದಳ (ಎಟಿಎಸ್) ವಿಫಲಗೊಳಿಸಿದ್ದು, ಕುಕ್ಕರ್‍ನಲ್ಲಿ ಬಾಂಬ್ ಇಟ್ಟು ಸಿಡಿಸಲು ಯೋಜಿಸಿದ್ದ ಇಬ್ಬರು ಉಗ್ರರನ್ನು ಬಂಧಿಸಿದೆ.

ಕಾಶ್ಮೀರದೊಂದಿಗೆ ನಂಟು ಹೊಂದಿರುವ ಈ ಉಗ್ರರು ರಾಜ್ಯದಲ್ಲಿ ಭಾರಿ ಭಯೋತ್ಪಾದಕ ಕೃತ್ಯ ನಡೆಸಲು ಯೋಜಿಸಿದ್ದರೆಂದು ತಿಳಿದುಬಂದಿದೆ ಅಲ್ಲದೇ, ಭಯೋತ್ಪಾದನೆ ಸಂಬಂಸಿದಂತೆ ಪಾಕ್ ಭಯೋತ್ಪಾದಕರ ಜತೆಗೆ ಸಂವಾದಕ್ಕಾಗಿ ಟೆಲಿಗ್ರಾಂ ಬಳಸಿದ್ದಾರೆಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೋಲೀಸರು ಹೇಳಿದ್ದಾರೆ.

ಬಂಧಿತರನ್ನು ಮಸೀರುದ್ದೀನ್, ಮಿನ್ಹಾಜ್ ಎಂದು ಗುರುತಿಸಲಾಗಿದೆ. ಜತೆಗೆ ಈ ಇಬ್ಬರೂ ಉಗ್ರರು ಅಲ್‍ಖೈದಾದ ಅನ್ಸರ್ ಅಫ್ಜತ್ ಉಲ್ ಹಿಂದ್ ಭಯೋತ್ಪಾದಕ ಸಂಘಟನೆಯ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಇಬ್ಬರ ಮನೆಯ ಮೇಲೂ ಶೋಧ ಕಾರ್ಯಾಚರಣೆಯನ್ನೂ ನಡೆಸಲಾಗಿದೆ ಎಂದು ಎಡಿಜಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ಇನ್ನು ಪಶ್ಚಿಮ ಉತ್ತರ ಪ್ರದೇಶದಲ್ಲಿಯೂ ದಾಳಿಗೆ ಯೋಜಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿರುವ ಹಿನ್ನೆಲೆ ಲಖನೌ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಹೈ ಅಲರ್ಟ್ ನೀಡಲಾಗಿದೆ ಎಂದಿದ್ದಾರೆ.

ಕಣಿವೆಯಲ್ಲಿ 6 ಉಗ್ರರ ಬಂಧನ
ಭಯೋತ್ಪಾದಕ ಕೃತ್ಯಗಳಿಗೆ ಧನಸಹಾಯ ಸಂಬಂಸಿದಂತೆ ಭಾನುವಾರ ಮುಂಜಾನೆ ದಕ್ಷಿಣ ಕಾಶ್ಮೀರ ಹಾಗೂ ಶ್ರೀನಗರ ಮತ್ತು ಅನಂತ್ ನಾಗ್ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಶೋಧ ಕಾರ್ಯಾಚರನೆ ನಡೆಸಿದ್ದು, ಈ ಸಂಬಂಸಿದಂತೆ 6 ಭಯೋತ್ಪಾದಕರನ್ನು ಬಂಸಿದೆ. ಎನ್‍ಐಎ ಶೋಧಕ್ಕೆ ಕೇಂದ್ರ ಮೀಸಲು ಪೋಲೀಸ್ ಪಡೆ (ಸಿಆರ್‍ಪಿಎಫ್) ಕೂಡ ಜತೆಯಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ಬಂತರನ್ನು ಉಮರ್ ಭಟ್, ಓವೈಸ್ ಭಟ್, ತನ್ವಿರ್ ಭಟ್ , ಜಾವೇದ್ ಮೀರ್, ಜೀಶನ್ ಮಲ್ಲಿಕ್ ಎಂದು ಗುರುತಿಸಲಾಗಿದೆ.

ಎಲ್ಲಿಲ್ಲಿ ಕಾರ್ಯಾಚರಣೆ ?
ಶಂಗಾಸ್ ವಿಧಾನಸಭಾ ಕ್ಷೇತ್ರದ ಅನಂತ್ ನಾಗ್ ಅಚಬಲ್, ಸಂಸುಮಾ ಮತ್ತು ಪುಶ್ರೂ ನೌಗಮ್ ಪ್ರದೇಶಗಳಲ್ಲಿನ ವಸತಿ ನಿಲಯಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯು ದಾಳಿ ನಡೆಸಿದೆ. ಅಲ್ಲದೇ, ನವಾಬ್ ಬಜಾರ್ ಪ್ರದೇಶದ ದಾರುಲ್ ಉಲೂಮ್ (ಇಸ್ಲಾಮಿಕ್ ಶಿಕ್ಷಣ ಸಂಸ್ಥೆ) ಮೇಲೂ ದಾಳಿ ನಡೆಸಿದ್ದು, ಈ ವೇಳೆ ಶೋಧ ಸ್ಥಳಗಳಿಂದ ಮೊಬೈಲ್ ಪೋನ್ , ಲ್ಯಾಪ್ ಟಾಪ್, ಆಧಾರ್ ಕಾರ್ಡ್ ಮುಂತಾದ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ