ಸೊಮಾಲಿಯಾದಲ್ಲಿ ಉಗ್ರರಿಂದ ಬಾಂಬ್ ಸ್ಫೋಟ: 52 ಜನರು ಸಾವು

ಮೊಗದಿಶು: ಸೊಮಾಲಿಯಾ ರಾಜಧಾನಿ ಮೊಗದಿಶುವಿನಲ್ಲಿ ಉಗ್ರರು ನಡೆಸಿದ ಕಾರ್ ಬಾಂಬ್​ ಸ್ಫೋಟದಲ್ಲಿ 52 ಜನರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೊಗದಿಶುವಿನ ಸಹಾಫಿ ಹೋಟೆಲ್​ ಬಳಿ ಕೇವಲ ಒಂದು ನಿಮಿಷದ ಅವಧಿಯಲ್ಲಿ ಎರಡು ಬಾಂಬ್ ಗಳನ್ನು ಸ್ಫೋಟಿಸಲಾಗಿದೆ. ಈ ಹೋಟೆಲ್​ ಸೋಮಾಲಿಯಾ ಪೊಲೀಸ್​ ಫೋರ್ಸ್​ನ ಸಿಐಡಿ ಮುಖ್ಯಕಚೇರಿ ಸಮೀಪವೇ ಇದ್ದು, ನಾಲ್ವರು ಉಗ್ರರು ಒಮ್ಮೆಲೇ ಹೋಟೆಲ್​ ನ ಮೇಲ್ಛಾವಣಿಗೆ ಹೋಗಿ ಅಲ್ಲಿಂದ ಕೆಳಗೆ ಕುಳಿತಿರುವ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಉಗ್ರರನ್ನು ಹತ್ಯೆಗೈದು ಹೋಟೆಲ್​ ರೂಮಿನಲ್ಲಿದ್ದವರನ್ನು ರಕ್ಷಿಸಿದ್ದಾರೆ.

ಬಳಿಕ ಹೋಟೆಲ್​ ಬಳಿಯೇ ಎರಡು ಬಾಂಬ್ ಗಳು ಸ್ಫೋಟಗೊಂಡಿವೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದು ಅಲ್-ಶಬಾಬ್​ ಉಗ್ರಸಂಘಟನೆಯ ಕೃತ್ಯ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ ಎಂದು ಸೋಮಾಲಿಯಾ ಸರ್ಕಾರ ಹೇಳಿದೆ.

Somalia,terrorist, bomb blasts,52 death

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ