ಚಿತ್ರದುರ್ಗ ಜೂಲೈ-3: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಪ್ರಶ್ನಾತೀತ ನಾಯಕರು. ಹಾಗಾಗಿ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ಹಿರಿಯೂರಿಗೆ ಕಾರ್ಯಕ್ರಮದ ನಿಮಿತ್ತ ಶನಿವಾರ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ಬಿಎಸ್ವೈ ಅವರೇ ಉಳಿದ ವರೆಗೆ ಮುಖ್ಯಮಂತ್ರಿ ಆಗಿರುತ್ತಾರೆ. ಬಿಜೆಪಿ ಅತೃಪ್ತ ಶಾಸಕರಲ್ಲಿ ಕೆಲವರು ನನ್ನ ಸಂಪರ್ಕದಲ್ಲಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಅವರು ಏನು ಹೇಳುತ್ತಾರೆ ಅನ್ನೋದಕ್ಕಿಂತ ಎರಡು ವರ್ಷ ಸರ್ಕಾರ ಬಿಗಿಯಾಗಿರಲಿದೆ ಎಂದು ತಿರುಗೇಟು ನೀಡಿದರು.
ಯಾರು ಹೊರ ಹೋಗುತ್ತಾರೆ, ಯಾರು ಬಿಡ್ತಾರೆ ಈಗ ಎಲ್ಲವೂ ಗೌಣ. ಉತ್ತಮ ಕೆಲಸ ಮಾಡುವ ಸರ್ಕಾರದ ಅಸ್ಥಿರಕ್ಕೆ ಯಾರು ಕೈ ಹಾಕಬಾರದು. ಮುಖ್ಯಮಂತ್ರಿ ಬಿಎಸ್ವೈ ಈ ವಯಸ್ಸಿನಲ್ಲೂ ನಮ್ಮನ್ನು ಬಡಿದೆಬ್ಬಿಸುವಂತೆ ಕೆಲಸ ಮಾಡುತ್ತಿದ್ದಾರೆ. ಅವರಿಂದ ಸ್ಪೂರ್ತಿ ಪಡೆದ ಇಡೀ ಸಚಿವರು, ಶಾಸಕರು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.