ಬಳ್ಳಾರಿ: ಎತ್ತಿನಹೊಳೆ ಯೋಜನೆ ಕುರಿತು ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ಗೋಪಾಲಯ್ಯ ಸೇರಿ ಕೆಲವು ಶಾಸಕರು ಭಾಗವಹಿಸಿದರೆ ಅದನ್ನೇ ರೆಸಾರ್ಟ್ ರಾಜಕೀಯ ಎನ್ನುವುದು ತಪ್ಪು. ಸಚಿವರು ಬಂದಾಗ ನಾಲ್ಕು ಜನ ಸೇರುವುದು ಸಹಜ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮಲ್ಲಿ ಅತೃಪ್ತ ಶಾಸಕ ಅಥವಾ ಸಚಿವರು ಇಲ್ಲ. ಶಾಸಕರ ಸಭೆಗೆ ರೆಸಾರ್ಟ್ ರಾಜಕೀಯ ಎಂದು ಬಣ್ಣ ಹಚ್ಚುವುದು ಸರಿಯಲ್ಲ. ಈಗಾಗಲೇ ಎಲ್ಲರೊಂದಿಗೆ ಮಾತನಾಡಿದ್ದೇನೆ ಎಂದರು.
ಕಾಂಗ್ರೆಸ್ನಿಂದ ವ್ಯಾಪಾರ :
ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಸಿ ದಾಖಲೆ ಬರೆದಿದ್ದಾರೆ. ಆದರೆ, ಕಾಂಗ್ರೆಸ್ನವರು ಅಕಾರ ಚುಕ್ಕಾಣಿ ಹಿಡಿಯಲು ಸದಸ್ಯರ ವ್ಯಾಪಾರ ಪ್ರಾರಂಭಿಸಿದ್ದಾರೆ. ನಮ್ಮ ಸದಸ್ಯರಿಗೆ ನಾನಾ ಆಸೆ, ಆಮಿಷಗಳನ್ನು ತೋರಿಸಿ ನಮ್ಮವರು ಅಧ್ಯಕ್ಷರಾಗುವುದಕ್ಕೆ ತೊಡಕುಂಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
3 ತಿಂಗಳಿಗೊಮ್ಮೆ ಮಹಿಳಾ ಮೋರ್ಚಾ ಸಭೆ:
ಹೊಸಪೇಟೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಪಕ್ಷದ ವಿವಿಧ ಮೋರ್ಚಾಗಳ ಕಾರ್ಯಕಾರಿಣಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು