ಬಾಗಲಕೋಟೆ:ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಗಡ್ಡ ಮತ್ತು ತಲೆಕೂದಲು ಉದ್ದ ಬಿಟ್ಟಿರುವುದು ಭರೀ ಕುತೂಹಲ ಕೆರಳಿಸಿತ್ತು. ಕೊರೋನಾ ಸಂಕಷ್ಟ ಶುರುವಾದ ಬಳಿಕ ಮೋದಿ ಕೇಶಕರ್ತನ ಮಾಡಿಕೊಂಡಿರಲಿಲ್ಲ. ಇದಕ್ಕೆ ಏನಾದರೂ ಕಾರಣ ಇರಬಹುದೇ ಎಂಬ ಚರ್ಚೆಯೂ ನಡೆದಿತ್ತು. ಆದರೆ ಇದೀಗ
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಮೋದಿಯ ನೀಲ ಕೇಶದ ಹಿಂದಿನ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.
ರಾಮಮಂದಿರ ನಿರ್ಮಾಣದವರೆಗೆ ಕೇಶ ತೆಗೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ೀಕ್ಷೆ ಪಡೆದಿರುವ ಕುರಿತು ರಾಮ ಮಂದಿರ ಟ್ರಸ್ಟ್ ಸದಸ್ಯರು ಹಾಗೂ ಉಡುಪಿ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಸುಳಿವು ನೀಡಿದ್ದಾರೆ.
ನಗರದಲ್ಲಿ ಭಾನುವಾರ ಶ್ರೀ ರಾಮಮಂದಿರ ನಿರ್ಮಾಣ ನಿ ಸಮರ್ಪಣಾ ಅಭಿಯಾನದ ಜಿಲ್ಲಾ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಧಾನಿ ಮೋದಿಯವರು ಋಷಿ ವೇಷ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು ನಮ್ಮಲ್ಲಿ ದೇವಸ್ಥಾನದ ಕಾರ್ಯ ಇಂತಹದ್ದೆಲ್ಲಾ ಇದ್ದರೆ ಆ ಹೊತ್ತಿಗೆ ನಾವು ೀಕ್ಷಾ ಬದ್ಧರಾಗೋದು ಅಂತ ಇದೆ. ಮೋದಿ ಅವರು ರಾಮಮಂದಿರಕ್ಕೆ ಶಿಲಾನ್ಯಾಸವನ್ನು ಮಾಡಿದ್ದಾರೆ. ಅವರು ರಾಮಮಂದಿರ ಸಂಪೂರ್ಣ ಜವಾಬ್ದಾರಿ ಹೊತ್ತಂತೆ ಸಹಜವಾಗಿ ಇಂತಹ ಕಾರ್ಯದ ವೇಳೆ ನಮ್ಮಲ್ಲಿ ಕೇಶಾದಿಗಳನ್ನು ತೆಗೆಯುವುದಿಲ್ಲ. ನೈತಿಕ ನೆಲೆಯಲ್ಲಿ ಮಂದಿರ ಆಗುವ ತನಕ ಕೇಶಾದಿಗಳನ್ನು ತೆಗೆಯೋದಿಲ್ಲ. ಪ್ರಾಯಶಃ ಮೋದಿ ಅವರು ಅದನ್ನು ಪಾಲನೆ ಮಾಡಿರಬಹುದು ಅಂತ ಅನ್ನಿಸುತ್ತದೆ. ಅವರು ಮೊದಲಿನಿಂದಲೂ ಹಾಗೆಯೇ ಇದ್ದಾರೆ. ಅವರು ಆಧ್ಯಾತ್ಮಿಕವಾಗಿದ್ದರೆ ತಪ್ಪೇನಿಲ್ಲವಲ್ಲ ಎಂದ ಶ್ರೀಗಳು ಹೇಳಿದರು.
ರಾಮ ಮಂದಿರ ನಿರ್ಮಾಣಕ್ಕೆ ಮೂರೂವರೆ ವರ್ಷ ಅವ ತೆಗೆದುಕೊಳ್ಳಲಾಗಿದೆ. 1,500 ಕೋಟಿ ರೂ. ಅಂದಾಜು ಬಜೆಟ್ ಆಗಲಿದೆ. 500 ಕೋಟಿ ರೂ. ಮಂದಿರ ನಿರ್ಮಾಣಕ್ಕೆ ಹಾಗೂ 1,000 ಕೋಟಿ ರೂ. ಪರಿಸರದ ಅಭಿವೃದ್ಧಿ, ಯಾತ್ರಿ ನಿವಾಸ ಹಾಗೂ ಮಾರ್ಗಗಳ ನಿರ್ಮಾಣಕ್ಕೆ ಬಳಸಲಾಗುವುದು ಎಂದರು.
ಪ್ರಾರಂಭದಲ್ಲಿ ಭೂಮಿ ಪರೀಕ್ಷೆ ಸವಾಲು ಆಗಿ ಹೋಯಿತು ಅಲ್ಲಿ ಕಲ್ಲಿನ ಶಿಲಾಮಂದಿರ ನಿರ್ಮಾಣಕ್ಕೆ ಭೂಮಿ ಸಾಮರ್ಥ್ಯ ಬೇಕು. ಅಂದಾಜು 200 ಅಡಿ ವರೆಗೂ ಮರಳು ಮಿಶ್ರಿತ, ಧೂಳು ಮರಳು ಇದೆ ಎಂದು ಹೇಳಿದರು.