ಲಂಡನ್: ಜರ್ಮನಿ ಮೂಲದ ಬಯೋಎನ್ಟೆಕ್ ಸಂಸ್ಥೆಯ ನಂತರ ಬ್ರಿಟನ್ ಮೂಲದ ಆ್ಯಸ್ಟ್ರಜೆನೆಕಾ ಸಂಸ್ಥೆಯು ತನ್ನ ಲಸಿಕೆ ಕೊರೋನಾ ವೈರಾಣುವಿನ ನೂತನ ರೂಪಾಂತರ ನಿಗ್ರಹಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಜತೆಗೆ ನೂತನ ರೂಪಾಂತರದ ಬಗ್ಗೆ ಸಂಸ್ಥೆ ವಿವರವಾದ ಪರೀಕ್ಷೆ ನಡೆಸುತ್ತಿದೆ ಎಂದು ತಿಳಿಸಿದೆ.
ಆ್ಯಸ್ಟ್ರಜೆನೆಕಾ ಅಭಿವೃದ್ಧಿಪಡಿಸಿರುವ ಎಜೆಡ್ಡಿ1222 ಲಸಿಕೆ ಸಾರ್ಸ್ ಕೋವ್-2 ವೈರಾಣು ಸ್ಪೈಕ್ ಪೊಟೀನ್ ಎಂಬ ಅನುವಂಶಿಕ ಅಂಶ ಹೊಂದಿದೆ. ಸದ್ಯ ಕೊರೋನಾ ವೈರಾಣುವಿನ ನೂತನ ತಳಿಯ ಅನುವಂಶಿಕ ಅಂಶದಲ್ಲಿ ಕಂಡುಬಂದಿರುವ ಬದಲಾವಣೆಯು ಲಸಿಕೆಯಲ್ಲಿರುವ ಪೊಟೀನ್ ಅಂಶವನ್ನು ಬದಲಾಯಿಸುವುದಿಲ್ಲಹಾಗೂ ಇದರಿಂದ ಯಾವುದೇ ರೀತಿಯ ತೊಂದರೆಯಿಲ್ಲ. ಹಾಗಾಗಿ ವೈರಾಣುವಿನ ಹೊಸ ತಳಿ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿರಲಿದೆ ಎಂದು ಸಂಸ್ಥೆ ವಿವರಿಸಿದೆ.
ಬ್ರಿಟನ್ನಲ್ಲಿ ಕೊರೋನಾ ವೈರಾಣುವಿನ ನೂತನ ತಳಿ ಪತ್ತೆಯಾದ ಸಮಯದಿಂದಲೂ ವಿವಿಧ ಲಸಿಕೆ ಉತ್ಪಾದನಾ ಸಂಸ್ಥೆಗಳು ತಮ್ಮ ಲಸಿಕೆಗಳು ಹೊಸ ತಳಿ ವಿರುದ್ಧ ಪರಿಣಾಮಕಾರಿಯೋ, ಅಲ್ಲವೋ ಎಂಬುದರ ಕುರಿತು ಪರೀಕ್ಷೆ ನಡೆಸುತ್ತಿವೆ.
ಎಜೆಡ್ಡಿ1222 ಲಸಿಕೆ ದೇಹದ ರೋಗನಿರೋಧಕ ವ್ಯವಸ್ಥೆಗೆ ವಿವಿಧ ಭಾಗಗಳಲ್ಲಿ ಸ್ಪೈಕ್ ಪೊಟೀನ್ ಗುರುತಿಸಲು ಸಹಾಯ ಮಾಡಲಿದ್ದು, ಇದರಿಂದ ದೇಹದಲ್ಲಿ ವೈರಾಣು ಕೊಲ್ಲಲು ಸಾಧ್ಯವಾಗಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಇನ್ನು ಇತ್ತೀಚೆಗಷ್ಟೇ ಯುರೋಪ್ ಔಷ ನಿಯಂತ್ರಣ ಕೇಂದ್ರ, ನೂತನ ತಳಿ ಕೊರೋನಾ ಹರಡುವಿಕೆ ಸಾಮಥ್ರ್ಯವನ್ನು ಹೆಚ್ಚಿಸಿದ್ದು, ಯುವಜನರಲ್ಲಿ ಹಾಗೂ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ ಎಂದು ತಿಳಿಸಿತ್ತು.