ಚಿಕ್ಕಮಗಳೂರು : ಅರಣ್ಯ ಇಲಾಖೆ ಬಫರ್ ಜೋನ್ ಸಂಬಂಧ ಸಂಪುಟ ಉಪ ಸಮಿತಿಯೊಂದನ್ನು ರಚಿಸಲಾಗಿದೆ. ಅದರ ನಡಾವಳಿಗಳು ನಡೆದ ನಂತರ ಈ ವಿಚಾರದಲ್ಲಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸಂಪುಟ ಉಪ ಸಮಿತಿಯಲ್ಲಿ ಅರಣ್ಯ ಸಚಿವರು, ತಾವು ಸೇರಿದಂತೆ ಐವರು ಸಚಿವರಿರುತ್ತಾರೆ. ಇನ್ನು ಸಮಿತಿಯು ಪ್ರಾಥಮಿಕ ಸಭೆ ಸೇರಿಲ್ಲ. ಆ ಸಭೆ ಬಳಿಕ ವಿವರವಾದ ಮಾಹಿತಿಯನ್ನು ಕಲೆಹಾಕಲಾಗುವುದು ಎಂದರು.
ಕಳೆದ ವಾರವಷ್ಟೇ ಸಮಿತಿ ರಚನೆ:
ಕಳೆದ ಗುರುವಾರವಷ್ಟೇ ಬಫರ್ ಜೋನ್ ಸಂಬಂಧ ಉಪಸಮಿತಿ ರಚನೆಯಾಗಿದೆ. ಅಲ್ಲಿ ಸಲ್ಲಿಕೆಯಾಗುವ ಅಭಿಪ್ರಾಯವನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪೊಲೀಸ್ ಇಲಾಖೆಯು ರಾಜ್ಯಾದ್ಯಂತ ಎಲ್ಲ ಠಾಣೆಗಳಲ್ಲಿ ಜೀರೋ ಎಫ್ಐಆರ್ ದಾಖಲಿಸಬೇಕೆನ್ನುವ ಕಾನೂನಿದ್ದರೂ ಬಹಳಷ್ಟು ಠಾಣೆಗಳು ಅದನ್ನು ಪಾಲಿಸುತ್ತಿಲ್ಲ ಎನ್ನುವ ದೂರುಗಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈ ಸಂಬಂಧ ನಿರ್ದಿಷ್ಟ ದೂರುಗಳಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಯಾರಾದರೂ ದೂರು ಕೊಟ್ಟರೆ ಅದನ್ನು ತೆಗೆದುಕೊಳ್ಳಬೇಕೆನ್ನುವುದು ಕಾನೂನು. ನಂತರ ಅದನ್ನು ಸಂಬಂಸಿದ ಠಾಣೆಗೆ ವರ್ಗಾಯಿಸಬೇಕು. ಈ ಸಂದರ್ಭದಲ್ಲಿ ಯಾವ ಠಾಣೆಯ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಕೇಳಬಾರದು. ಹಾಗೇನಾದರೂ ಕೇಳಿ ದೂರು ಸ್ವೀಕರಿಸದ ಪ್ರಕರಣಗಳಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕೋರ್ಟಿಗೆ ಹೇಳಲು ಸಾಧ್ಯವಿಲ್ಲ:
ಎಲ್ಲ ರಾಜ್ಯಗಳ ಹೈಕೋರ್ಟ್ನಲ್ಲಿ ತೀರ್ಪುಗಳು ಇಂಗ್ಲಿಷ್ನಲ್ಲಿಯೇ ಇರಬೇಕೆಂದು ಸುಪ್ರೀಂ ಕೋರ್ಟ್ನ ಆದೇಶವಾಗಿದೆ. ನಮ್ಮಲ್ಲಿ ಕನ್ನಡದಲ್ಲೇ ಆಗಬೇಕೆಂದು ನಾವು ಕೇಳಲು ಬರುವುದಿಲ್ಲ. ಇದು ಕೇವಲ ಕರ್ನಾಟಕದ ನ್ಯಾಯಾೀಶರಿಗೆ ಮಾತ್ರ ಸಂಬಂಸಿದ್ದಲ್ಲ. ಬೇರೆ ಯಾವುದೇ ರಾಜ್ಯದ ನ್ಯಾಯಾೀಶರು ಇನ್ನೊಂದು ರಾಜ್ಯಕ್ಕೆ ವರ್ಗಾವಣೆಯಾಗಬಹುದು ಎಂದು ತೀರ್ಮಾನಿಸಿ ಹೈಕೋರ್ಟ್ ವ್ಯವಹಾರ ಇಂಗ್ಲಿಷ್ನಲ್ಲೇ ಆಗಬೇಕೆಂದು ಸುಪ್ರೀಂ ಕೋರ್ಟ್ ಹೇಳಿರುವಾಗ ಕಾನೂನು ಸಚಿವನಾಗಿ ನಾನು ಈ ವಿಚಾರದಲ್ಲಿ ಏನು ಹೇಳಲು ಸಾಧ್ಯ ,
ಇದರ ನಡುವೆಯೂ ನಮ್ಮಲ್ಲಿ ಕೆಲವು ನ್ಯಾಯಾೀಶರು ಕನ್ನಡದಲ್ಲೇ ತೀರ್ಪನ್ನು ಪ್ರಕಟಿಸುತ್ತಾರೆ. ಅಂತಹವರಿಗೆ ನಾವು ಪ್ರತಿ ವರ್ಷ ಗೌರವಿಸುತ್ತಿದ್ದೇವೆ ಎಂದರು.