ಮುಂಬೈ: ಸುಧಾರಿತ ಶಬ್ದಸಂವೇದಿ ಗ್ರಹಿಕೆ ತಂತ್ರ ಉತ್ಕøಷ್ಟ ರಹಸ್ಯ ತಂತ್ರಗಳನ್ನು ಒಳಗೊಂಡಿರುವ ಭಾರತೀಯ ನೌಕಾಪಡೆಯ ಐದನೇ ಸ್ಕಾರ್ಪಿನ್ ವರ್ಗಕ್ಕೆ ಸೇರಿದ ವಾಗಿರ್ ಜಲಾಂತರ್ಗಾಮಿಗೆ ಗುರುವಾರ ದಕ್ಷಿಣ ಮುಂಬೈನ ಮಜಗಾಂವ್ ಹಡಗುಕಟ್ಟೆಯಲ್ಲಿ ಚಾಲನೆ ನೀಡಲಾಯಿತು.
ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಅವರ ಪತ್ನಿ ವಿಜಯಾ ವಿಡಿಯೋ ಕಾನರೆನ್ಸ್ ಮೂಲಕ ಜಲಾಂತರ್ಗಾಮಿಗೆ ಚಾಲನೆ ನೀಡಿದರು.
ವಾಗಿರ್, ಭಾರತದ ಆರು ಕಲ್ವಾರಿ ದರ್ಜೆಯ ಜಲಾಂತರ್ಗಾಮಿ ನೌಕೆಗಳ ಭಾಗವಾಗಿದೆ. ಈ ಜಲಾಂತರ್ಗಾಮಿಗಳನ್ನು ಭಾರತೀಯ ನೌಕಾಪಡೆಗಳ ಯೋಜನೆ-75ರ ಭಾಗವಾಗಿ ಫ್ರಾನ್ಸ್ ನೌಕಾಪಡೆ ಮತ್ತು ಡಿಸಿಎನ್ಎಸ್ ಇಂಧನ ಕಂಪನಿ ನಿರ್ಮಾಣ ಮಾಡುತ್ತಿವೆ.
ಹಿಂದೂ ಮಹಾಸಾಗರದ ಆಳಲ್ಲಿರುವ ಸ್ಯಾಂಡ್ಫಿಶ್ಗೆ ವಾಗಿರ್ ಎಂದು ಹೆಸರು.ರಷ್ಯಾದಿಂದ ಬಂದ ಮೊದಲ ಜಲಾಂತರ್ಗಾಮಿ ನೌಕೆಯಾದ ವಾಗಿರ್ನನ್ನು 1973ರ ಡಿಸೆಂಬರ್ನಲ್ಲಿ ಭಾರತೀಯ ನೌಕಾಪಡೆಗೆ ನಿಯೋಜಿಸಲಾಯಿತು. ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ ಬಳಿಕ 2001ರ ಜೂನ್ನಲ್ಲಿ ವಾಗಿರ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಭಾರತೀಯ ನೌಕಾಪಡೆಯ ಯೋಜನೆಯಲ್ಲಿ ಐಎನ್ಎಸ್ ಕಲ್ವಾರಿ, ಖಂಡೇರಿ, ಕರಂಜ್, ವೇಲಾ ಹಾಗೂ ವಾಗಿರ್ ಪ್ರಮುಖವಾದವು.
6 ಸ್ಕಾರ್ಪಿನ್ ಶ್ರೇಣೀಯ ಜಲಾಂತರ್ಗಾಮಿಗಳ ಪೈಕಿ 2017 ರಲ್ಲಿ ಐಎನ್ಎಸ್ ಕಲ್ವಾರಿಯನ್ನು ಲೋಕಾರ್ಪಣೆಗೊಳಿಸಲಾಗಿತ್ತು.