ಚೆನ್ನೈ : ತಮಿಳುನಾಡಿನ ಚೆನ್ನೈ ಮೂಲದ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಸಂಸ್ಥೆಯೊಂದಕ್ಕೆ ಸಂಬಂಸಿದಂತೆ ಆದಾಯ ಮತ್ತು ತೆರಿಗೆ (ಐಟಿ)ಇಲಾಖೆ ಅಕಾರಿಗಳು ಚೆನ್ನೈ ಹಾಗೂ ಮಧುರೈ ಸೇರಿ 5 ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದು, 1 ಸಾವಿರ ಕೋಟಿ ರೂ. ಲೆಕ್ಕವಿಲ್ಲದ ಹಣ ಪತ್ತೆಮಾಡಿರುವುದಾಗಿ ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಈ ಸಂಸ್ಥೆಗೆ ಮತ್ತೂ ಎರಡು ಮೂಲಗಳಿಂದ ಹೂಡಿಕೆ ಮಾಡಲಾಗಿದ್ದು, ಒಂದು ಸಿಂಗಾಪುರ್ ಮೂಲದ ಸಂಸ್ಥೆ ಮತ್ತೊಂದು ಐಟಿ ಸಂಸ್ಥೆಯ ಅಂಗಸಂಸ್ಥೆ ಎಂತಲೂ ತಿಳಿದುಬಂದಿದೆ. ಜತೆಗೆ 7 ಕೋಟಿ ಸಿಂಗಪೂರ್ಡಾಲರ್ ಗಳ ಲಾಭ ಪಡೆದಿರುವ ಸಂಸ್ಥೆ ,ಅದರಲ್ಲಿ 200 ಕೋಟಿ ರೂ. ಗಳಿಗೆ ಲೆಕ್ಕ ನೀಡಿಲ್ಲ.ಹೀಗೆ ಸಂಸ್ಥೆ , ಒಟ್ಟು 1 ಸಾವಿರ ಕೋಟಿ ರೂ.ಗಳ ಹಣಕ್ಕೆ ಲಕ್ಕ ನೀಡಿಲ್ಲ ಎಂದು ಅಕಾರಿಗಳು ಹೇಳಿದ್ದಾರೆ.