ಡೆಹ್ರಡೂನ್: ತ್ರಿವಳಿ ತಲಾಖ್ ವಿರೋಸಿ ಸುಪ್ರೀಂಕೋರ್ಟ್ನಲ್ಲಿ ಮೊಟ್ಟ ಮೊದಲ ಬಾರಿಗೆ ದಾವೆ ಹೂಡಿದ್ದ, ಇತ್ತೀಷೆಗಷ್ಟೇ ಬಿಜೆಪಿ ಸೇರ್ಪಡೆಗೊಂಡಿದ್ದ ಶರಾಯಬಾನು ಅವರಿಗೆ ಉತ್ತರಾಖಂಡ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಲಾಗಿದೆ.
ಮುಸ್ಲಿಂ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಲು ಹಾಗೂ ಉನ್ನತ ಶಿಕ್ಷಣದಿಂದ ಮಹಿಳೆಯರು ವಂಚಿತರಾಗದಂತೆ ಜವಾಬ್ದಾರಿ ಹೊರುವ ನಿಟ್ಟಿನಲ್ಲಿ ಪಕ್ಷ ಸೇರ್ಪಡೆಗೊಂಡಿದ್ದ ಬಾನು ಅವರಿಗೆ ಸರ್ಕಾರ, ರಾಜ್ಯ ಮಹಿಳಾ ಆಯೋಗಕ್ಕೆ ಉಪಾಧ್ಯಕ್ಷರಾಗಿ ನೇಮಕಗೊಳಿಸಿದ್ದು,ಇದು ರಾಜ್ಯ ಸಚಿವೆ ಸ್ಥಾನಮಾನ ಹೊಂದಿರುವ ಹುದ್ದೆಯಾಗಿದೆ.
ಆಯೋಗಕ್ಕೆ ಒಟ್ಟು ಮೂವರು ಉಪಾಧ್ಯಕ್ಷರಿದ್ದು , ಜ್ಯೋತಿ ಷಾ ಮತ್ತು ಪುಷ್ಪ ಪಾಸ್ವಾನ್ ಅವರನ್ನೂ ನೇಮಿಸಲಾಗಿದೆ. ನವರಾತ್ರಿ ಸಮಯದಲ್ಲಿ ಮಹಿಳೆಯರಿಗೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಈ ಉಡುಗೊರೆ ನೀಡಿದ್ದಾರೆಂದು ರಾವತ್ ಮಾಧ್ಯಮ ಸಂಯೋಜಕ ದರ್ಶನ್ ಸಿಂಗ್ ಹೇಳಿದ್ದಾರೆ.
ತ್ರಿವಳಿ ತಲಾಖ್ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಮೊಟ್ಟ ಮೊದಲ ಬಾರಿಗೆ ದಾವೆ ಹೂಡಿದ್ದ ಶರಾಯಬಾನು,ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷ ಬನ್ಸಿಂದ್ಭಗತ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆಗೊಂಡಿದ್ದರು.