ಹೊಸದಿಲ್ಲಿ: ಮುಂದಿನ ವರ್ಷದಿಂದ ದೇಶದಲ್ಲಿ 5ಜಿ ನೆಟ್ವರ್ಕ್ ಸೇವೆ ಆರಂಭಿಸುವ ಕುರಿತು ಘೋಷಿಸಿದ್ದ ರಿಲಯನ್ಸ್ ಜಿಯೋ, ಇದೀಗ ಅತಿ ಕಡಿಮೆ ದರದಲ್ಲಿ 5ಜಿ ಸ್ಮಾರ್ಟ್ ಪೊನ್ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ. 5,000 ರೂ.ಗೂ ಕಡಿಮೆ ದರದಲ್ಲಿ ಪೊನ್ ಲಭ್ಯಗೊಳಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದ್ದು, ಕ್ರಮೇಣವಾಗಿ ಈ ದರವನ್ನು 2500- 3000 ರೂ.ಗೆ ಇಳಿಸಲು ಯೋಜನೆ ರೂಪಿಸಿದೆ.
ದೇಶದಲ್ಲಿ ಈಗಲೂ 2ಜಿ ನೆಟ್ವರ್ಕ್ ಪೊನ್ ಬಳಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು, ಈ ಯೋಜನೆ ಜಾರಿಗೆ ಚಿಂತನೆ ನಡಸುತ್ತಿದೆ. ಏಕೆಂದರೆ 4ಜಿ ಯುಗದಲ್ಲೂ ದೇಶದ 20-30 ಕೋಟಿ ಜನರು 2ಜಿ ಪೊನ್ ಬಳಸುತ್ತಾರೆ ಎಂದು ತಿಳಿದುಬಂದಿದೆ. ಹಾಗಾಗಿಯೇ 5,000 ರೂ.ಗೂ ಕಡಿಮೆ ದರದಲ್ಲಿ ಪೊನ್ ಬಿಡುಗಡೆಗೊಳಿಸಲಾಗುತ್ತಿದೆ. ಒಮ್ಮೆ ಪೊನ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದರೆ, ಕ್ರಮೇಣವಾಗಿಪೊನ್ ದರವನ್ನು ಇಳಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಇನ್ನು ಸದ್ಯ ದೇಶದಲ್ಲಿ 5ಜಿ ಪೊನ್ಗಳು ಕನಿಷ್ಠ 27,000 ರೂ.ಗೆ ಮಾರಾಟವಾಗುತ್ತಿವೆ. ಅಲ್ಲದೇ ಜಿಯೋ ದೇಶದಲ್ಲಿ 4ಜಿ ನೆಟ್ವರ್ಕ್ ಸೇವೆ ಒದಗಿಸುವ ಮೊದಲ ದೂರಸಂಪರ್ಕ ಸಂಸ್ಥೆಯಾಗಿದ್ದು, ಕ್ರಾಂತಿ ಸೃಷ್ಟಿಸಿತ್ತು.ಈ ಹಿಂದೆಯೂ ಜಿಯೋ ಅತ್ಯಂತ ಕಡಿಮೆ ದರದ 4ಜಿ ಪೊನ್ ಬಿಡುಗಡೆಗೊಳಿಸಿತ್ತು.