*ಉಗ್ರರ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕೆ ಪಾಕ್‍ಗೆ ಬೂದು ಪಟ್ಟಿಯೇ ಖಚಿತ ಎಫ್‍ಎಟಿಎಫ್ 6 ಸೂಚನೆ ಪೂರೈಸುವಲ್ಲಿ ಪಾಕ್ ವಿಫಲ

ಪ್ಯಾರಿಸ್: ಮೋಸ್ಟ್ ವಾಂಟೆಡ್ ಭಯೋತ್ಪಾದಕರಾದ ಮೌಲಾನ ಮಸೂದ್ ಅಜರ್ ಮತ್ತು ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಹಾಗೂ ತನ್ನ ಅಕೃತ ಪಟ್ಟಿಯಿಂದ ಇದ್ದಕ್ಕಿದ್ದಂತೆ 4,000ಕ್ಕೂ ಹೆಚ್ಚು ಉಗ್ರರನ್ನು ಕೈಬಿಟ್ಟಿರುವುದೂ ಸೇರಿದಂತೆ ಹಣಕಾಸು ಕ್ರಿಯಾ ಕಾರ್ಯ ಪಡೆಯ(ಎಫ್‍ಎಟಿಎಫ್) 6 ಪ್ರಮುಖ ನಿರ್ದೇಶಗಳನ್ನು ನೆರವೇರಿಸುವಲ್ಲಿ ವಿಫಲವಾಗಿರುವುದರಿಂದ ಪಾಕಿಸ್ಥಾನ ಬೂದು ಪಟ್ಟಿಯಲ್ಲೇ ಉಳಿಯುವುದು ಬಹುತೇಕ ಖಚಿತವಾಗಿದೆ.
ಅಕ್ಟೋಬರ್ 21ರಿಂದ 23ರವರೆಗೆ ನಡೆಯಲಿರುವ ಎಫ್‍ಎಟಿಎಫ್‍ನ ವಾಸ್ತವ ಸರ್ವಸದಸ್ಯರ ಸಭೆಯಲ್ಲಿ ಪಾಕಿಸ್ಥಾನವನ್ನು ಬೂದು ಪಟ್ಟಿಗೆ ಸೇರಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಭಯೋತ್ಪಾದನೆಗೆ ಹಣಕಾಸು ಒದಗಿಸುವುದರ ವಿರುದ್ಧದ ಹೋರಾಟದಲ್ಲಿ ಜಾಗತಿಕ ಬದ್ಧತೆ ಪೂರೈಸುವಲ್ಲಿ ಪಾಕಿಸ್ಥಾನದ ಪ್ರದರ್ಶನವನ್ನು ಎಫ್‍ಎಟಿಎಫ್ ಈಗಾಗಲೇ ಅವಲೋಕನ ನಡೆಸಿದೆ.
ಭಯೋತ್ಪಾದಕತೆಗೆ ಹಣಕಾಸು ಒದಗಿಸುವ ಕುರಿತು ಈಗಾಗಲೇ ಪಾಕಿಸ್ಥಾನಕ್ಕೆ ಎಫ್‍ಎಟಿಎಫ್ ಒಟ್ಟು 27 ಕ್ರಿಯಾಯೋಜನೆಯ ನಿರ್ದೇಶನಗಳನ್ನು ನೀಡಿದೆ. ಈ ಪೈಕಿ ಪಾಕಿಸ್ಥಾನ 21 ನಿರ್ದೇಶನಗಳನ್ನು ಪೂರ್ಣಗೊಳಿಸಿದೆಯಾದರೂ 6 ಪ್ರಮುಖ ನಿರ್ದೇಶನಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಅಕೃತ ಮೂಲ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ