ಯಾದಗಿರಿ : ಶುಕ್ರವಾರ ಸಂಜೆ ರ ಸುಮಾರಿಗೆ ಜಿಲ್ಲೆಯ ಬಸವಸಾಗರ ಜಲಾಸಯದಿಂದ ಕೃಷ್ಣಾ ನದಿಗೆ 2.17 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗಿದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಅದಿಕಾರಿಗಳು ತಿಳಿಸಿದ್ದಾರೆ.
ಆಲಿಮಟ್ಟಿ ಜಲಾಶಯದಿಂದ ಸುಮಾರು 2 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಟ್ಟ ಕಾರಣ ನಾರಾಯಣಪೂರದ ಬಸವಸಾಗರ ಜಲಾಶಯದ ಒಳ ಹರಿವು 1.90 ಲಕ್ಷ ಕ್ಯೂಸೆಕ ಇದೆ. ಕಾರಣ ಜಲಾಶಯದಿಂದ 29 ಗೇಟುಗಳ ಮೂಲಕ ನದಿಗೆ ಹರಿವಿಡಲಾಗುತ್ತಿದ್ದು ಪ್ರವಾಹ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ.
ಜಿಲ್ಲೆಯ ಭೀಮಾ ನದಿಯಲ್ಲಿ ಅಪಯಮಟ್ಟ ಮೀರಿ ನೀರು ಹರಿಯುತ್ತಿದ್ದು ಸುಮಾರು 45 ಗ್ರಾಮಗಳಿಗೆ ಜಲಾವೃತದ ಭೀತಿಯನ್ನು ಹುಟ್ಟಿಸಿದೆ. ಜಿಲ್ಲಾಡಳಿತ ಕಾಳಜಿ ಕೇಂದ್ರಗಳನ್ನು ತೆರೆದಿದ್ದು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ. ಕಾಳಜಿ ಕೇಂದ್ರದ ನಿರ್ವಹಣೆಯನ್ನು ಜಿಲ್ಲಾಮಟ್ಟದ ಅಕಾರಿಗಳಿಗೆ ವಹಿಸಲಾಗಿದೆ ಎಂದು ಜಿಲ್ಲಾಕಾರಿ ಡಾ. ರಾಗಪ್ರಿಯಾ ತಿಳಿಸಿದ್ದಾರೆ.
ಅವರು ವಡಗೇರಾದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಅಕಾರಿಗಳಿಗೆ ಸೂಚಿಸಿದರು.