ಬಸವ ಸಾಗರ‌ ಜಲಾಶಯ ನೀರು ಬಿಡುಗಡೆ

ಯಾದಗಿರಿ:ಜು-೧೮: ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯ‌ ರಾಜ್ಯದ ಮೂರನೆ ದೊಡ್ಡ ಜಲಾಶಯ. ಇದು ಬೇಸಿಗೆಯಲ್ಲಿ ಬತ್ತಿಹೊಗಿತ್ತು.ಈಗ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಗೆ ಜಲಾಶಯ ಭರ್ತಿಯಾಗಿದೆ. ನಾಲ್ಕು ಜಿಲ್ಲೆಯ ಜೀವನಾಡಿಯಾದ ಯಾದಗಿರಿ ಜಿಲ್ಲೆ ಬಸವಸಾಗರ ಜಲಾಶಯದ ಒಡಲು ಈಗ ಭರ್ತಿಯಾಗಿದೆ.

ನೀರಿನ ಒಳ ಹರಿವು ಹೆಚ್ಚಳದಿಂದ ಬಸವಸಾಗರ ಜಲಾಶಯದ 10 ಗೇಟುಗಳ ಮೂಲಕ 105.000 ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿ ಬಿಡಲಾಗುತ್ತಿದೆ. ನಿನ್ನೆ ನಡೆದ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಲಹಾ ಸಮಿತಿ ಸಭೆಯಲ್ಲಿ ನೀರು ಬಿಡಲು ನಿರ್ಣಯ ಕೈಗೊಳ್ಳಲಾಗಿತ್ತು ಈಗ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. 33 ಟಿಎಂಸಿ ಸಾಮರ್ಥ್ಯ ದ ಜಲಾಶಯದಲ್ಲಿ ಈಗ 28.329 ಟಿಎಂಸಿ ನೀರು ಸಂಗ್ರವಾಗಿದೆ.

ಆಲಮಟ್ಟಿ ಜಲಾಶಯದಿಂದ ಬಸವಸಾಗರ ಜಲಾಶಯಕ್ಕೆ 106036 ಕ್ಯುಸೆಕ್ ನೀರು ಒಳ ಹರಿವು ನೀರು ಬಿಡಲಾಗಿದ್ದು ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಳವಾಗಿದೆ. ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವದರಿಂದ ನದಿ ತೀರದ ಗ್ರಾಮಸ್ಥರು ನದಿ ತೀರಕ್ಕೆ ತೆರಳದಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ನದಿ ನೀರು ಪಂಪಸೆಟ್ಟಗಳಿಂದ, ಕೆಲವು ಕಡೆ ಕಾಲುವೆಗಳಿಂದ ಕೃಷಿ ಚಟುವಟಿಕೆಗಳಿಗೆ ನೀರು ಬಳಕೆ‌ ಮಾಡುವುದರಿಂದ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
Yadagiri, Basavasagara Dam,Water released

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ