ನಾರಾಯಣಪುರ ಜಲಾಶಯದಯಲ್ಲಿ 20 ಟಿಎಂಸಿ ನೀರು ಸಂಗ್ರಹ

ಯಾದಗಿರಿ:ಜೂ-22: ಹೈದ್ರಾಬಾದ ಕರ್ನಾಟಕ ಭಾಗದ ರೈತರ ಜೀವನಾಡಿಯಾಗಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಜಲಾಶಯದಲ್ಲಿ ಕಳೆದ ವರ್ಷ 11.716 ಟಿಎಂಸಿ ನೀರಿತ್ತು. ಈ ವರ್ಷ 20.489 ಟಿಎಂಸಿ ನೀರಿನ ಸಂಗ್ರಹವಿದ್ದು, ಇದರಿಂದ ಅನ್ನದಾತರ ಮುಖದಲ್ಲಿ ಸಂತಸ ಮೂಡಿದೆ.

ಈ ವರ್ಷ ಮುಂಗಾರು ಹಂಗಾಮಿನಲ್ಲಿ ಬೇಗನೆ ಮಳೆಯಾಗಿದೆ. ನಾರಾಯಣಪುರ ಜಲಾಶಯದ ಗರಿಷ್ಠ ಸಾಮರ್ಥ್ಯ 492.23 ಮೀಟರ್ ಇದ್ದು, ಇಂದಿನ ನೀರಿನ ಮಟ್ಟ 489.00 ಮೀಟರ್ ಇದೆ. ಗರಿಷ್ಠ 33.33 ಟಿಎಂಸಿ ಇದ್ದರೆ, ಇಂದಿನ ನೀರಿನ ಮಟ್ಟ 20.489 ಟಿಎಂಸಿ ಇದೆ. ಒಳಹರಿವು ಇಲ್ಲ. ಹೊರ ಹರಿವು 50ಕ್ಯೂಸೆಕ್‌ ಇದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ  ಈ ಬಾರಿ ಜಲಾಶಯದಲ್ಲಿ ನೀರಿನ ಸಂಗ್ರಹ ಶೇ. 9ರಷ್ಟು ಹೆಚ್ಚಿದೆ. ಆಲಮಟ್ಟಿ ಮಳೆಯಾಶ್ರಿತ ಪ್ರದೆಶದಲ್ಲಿ ಮಳೆಯಾಗುತ್ತಿದ್ದು, ಇದು ಹೀಗೆ ಮುಂದುವರೆದರೆ ಜಲಾಶಯ ಭರ್ತಿಯಾಗುತ್ತದೆ. ಇದನ್ನು ಅಲ್ಲಗಳೆಯುವಂತಿಲ್ಲ. ಈ ವರ್ಷ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

Narayanapura Dam,Yadagiri

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ