ಪಾಕ್ ಮದರಸಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅವ್ಯಾಹತ

An undated photo of Pakistani children studying the Quran at a religious school in Lahore, Pakistan. Pakistan's religious schools, or madrassas, face renewed scrutiny following the recent London bombings, with Western leaders alleging that many serve as breeding grounds for violent extremists. The defiant heads of some schools, however, say they are easy targets in a campaign against Islam. (AP Photo/K.M. Chaudary)

ಪಾಕ್‍ಪಠಾಣ್(ಪಾಕಿಸ್ಥಾನ):ಮುಹಿಮ್ಮಾನ್ ಮದರಸದಲ್ಲಿ ಕಲಿಯುತ್ತಿರುವ 11ಹ ಬಾಲಕ. ತನ್ನ ಹೆಸರನ್ನು ನಿಧಾನವಾಗಿ ಬರೆಯಲಾರಂಭಿಸಿದ್ದ. ವೈದ್ಯನಾಗಬೇಕೆಂಬ ಕನಸನ್ನು ಕಂಡಿದ್ದ ಬಾಲಕನಿಗೀಗ ಶಾಲೆ ಎಂದರೆ ಒಂದು ದುಃಸ್ವಪ್ನದಂತೆ ಬೆಚ್ಚಿ ಬೀಳುತ್ತಾನೆ. ಈ ವರ್ಷಾರಂಭದಲ್ಲಿ ಮದರಸದಲ್ಲಿ ಮೌಲ್ವಿಯೊಬ್ಬ ಈತನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು ಇದಕ್ಕೆ ಕಾರಣ.ಇದು ಕೇವಲ ಪಾಕಿಸ್ಥಾನದ ದಕ್ಷಿಣ ಪಂಜಾಬ್ ನಗರ ಪಾಕ್‍ಪಠಾಣ್ ಒಂದರ ಕಥೆ ಅಲ್ಲ.

ಮುಹಿಮ್ಮಾನ್‍ನ ಚಿಕ್ಕಮ್ಮ ಶಝಿಯಾ ಹೇಳುವಂತೆ, ಪಾಕಿಸ್ಥಾನದ ಮತೀಯ ಶಾಲೆ, ಮದರಸಗಳಲ್ಲಿ ಸಣ್ಣ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅವ್ಯಾಹತವಾಗಿ ನಡೆಯುತ್ತಿದೆ. ತಾನು ಬಾಲಕಿಯಾಗಿದ್ದಾಗ ಮದರಸದಲ್ಲಿದ್ದ ಮೊಯೀದ್ ಶಾ ಎಂಬ ಶಿಕ್ಷಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದುದು ಸಾಮಾನ್ಯವಾಗಿತ್ತು ಎಂದು ಆಕೆ ಹೇಳುತ್ತಾಳೆ. ಹೆಣ್ಣು ಮಕ್ಕಳಿಗೆ ಅವರ ಬಟ್ಟೆಯನ್ನು ಮೇಲಕ್ಕೆತ್ತುವಂತೆ ಹೇಳುವುದು ಮತ್ತು ದೌರ್ಜನ್ಯವೆಸಗುವುದು ನಡೆಯುತ್ತಿದ್ದುದು ಸಾಮಾನ್ಯವಾಗಿತ್ತು ಎನ್ನುತ್ತಾಳೆ.

ಈ ಬಗ್ಗೆ ದ ಅಸೋಸಿಯೇಟೆಡ್ ಪ್ರೆಸ್ ಶೋಧ ಕಾರ್ಯಾಚರಣೆಗಿಳಿದಾಗ , ಇಂತಹ ಡಜನ್‍ಗಟ್ಟಲೆ ಪ್ರಕರಣಗಳು ಪೋಲೀಸ್ ವರದಿಯಲ್ಲಿ ದಾಖಲಾಗಿರುವುದು ಕಂಡುಬಂದಿದೆ. ಪಾಕಿಸ್ಥಾನದಾದ್ಯಂತ ಮದರಸ ಅಥವಾ ಇತರ ಇಸ್ಲಾಮಿಕ್ ಶಾಲೆಗಳಲ್ಲಿ ಇಸ್ಲಾಮಿಕ್ ಶಿಕ್ಷಕರು ನಡೆಸುವ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ದೈಹಿಕ ದೌರ್ಜನ್ಯಗಳ ಬಗ್ಗೆ ಪ್ರಥಮ ಮಾಹಿತಿ ವರದಿಗಳನ್ನು ಕಂಡು ಆಘಾತ ವ್ಯಕ್ತಪಡಿಸಿದೆ. ಈ ಪ್ರಕರಣಗಳ ಬಗ್ಗೆ ಅದು ಕಾನೂನು ಜಾರಿ ನಿರ್ದೇಶನಾಲಯಗಳ ಅಕಾರಿಗಳು, ದೌರ್ಜನ್ಯಕ್ಕೀಡಾದ ಸಂತ್ರಸ್ತರು ಮತ್ತು ಅವರ ಪೋಷಕರ ಸಂದರ್ಶನಗಳ ಸಹಿತವಾಗಿ ಡಾಕ್ಯುಮೆಂಟ್‍ನ್ನೇ ತಯಾರಿಸಿದೆ.

ಪಾಕಿಸ್ಥಾನದಲ್ಲಿ 22ಕ್ಕೂ ಅಕ ಸಾವಿರ ನೋಂದಾಯಿತ ಮದರಸಗಳಿವೆ. ಅಲ್ಲಿ ಸುಮಾರು 20ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.ಆದರೆ ಇದಕ್ಕಿಂತ ಹೆಚ್ಚು ಅನಕೃತ ಮದರಸಗಳು ಅಲ್ಲಿದ್ದು, ಈ ಮದರಸಗಳನ್ನು ಮುಲ್ಲಾಗಳು ಬಡಜನರಿರುವ ಪ್ರದೇಶಗಳಲ್ಲಿ ಆರಂಭಿಸುತ್ತಾರೆ. ಉಚಿತ ಊಟ ಮತ್ತು ವಸತಿಯ ಆಮಿಷವೊಡ್ಡಿ ಮಕ್ಕಳನ್ನು ಅವರು ಆಕರ್ಷಿಸುತ್ತಾರೆ. ಅಲ್ಲಿ ಮದರಸಗಳ ಆಡಳಿತಕ್ಕಾಗಿ ಯಾವುದೇ ಮದರಸ ಶಿಕ್ಷಕರ ಕೇಂದ್ರೀಯ ಮಂಡಳಿ ಇಲ್ಲ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೇನೋ ಮದರಸಗಳ ಆಧುನೀಕರಣ ಮತ್ತು ಮದರಸ ಪಠ್ಯಕ್ರಮಗಳ ಸುಧಾರಣೆ ಹಾಗೂ ಮದರಸಗಳನ್ನು ಹೆಚ್ಚು ಹೊಣೆಗಾರಿಕೆಯುಕ್ತವನ್ನಾಗಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಆಗಿರುವುದೇನೂ ಇಲ್ಲ. ಮದರಸ ಶಿಕ್ಷಕರಿಂದ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಸಮಸ್ಯೆ ವ್ಯಾಪಕವಾಗಿದೆ. ಈಗ ವರದಿಯಾಗಿರುವುದು ಮಂಜುಗಡ್ಡೆಯ ತುದಿ ಮಾತ್ರ. ಅನೇಕ ಪ್ರಕರಣಗಳು ದಾಖಲಾಗುವುದೇ ಇಲ್ಲ.ಪಾಕಿಸ್ಥಾನದಲ್ಲಿ ಮತೀಯ ಮುಲ್ಲಾಗಳ ಪ್ರಬಲ ಲಾಬಿ ಗುಂಪು ಇದ್ದು, ತಮ್ಮಲ್ಲಿನ ಶಿಕ್ಷಕನೊಬ್ಬ ಇಂತಹ ಕೃತ್ಯಗಳಲ್ಲಿ ಸಿಲುಕಿಕೊಂಡಾಗ ಯಾರು ಇಂತಹ ಆರೋಪ ಮಾಡಿರುತ್ತಾರೋ ಅಂತಹವರ ಮೇಲೆ ದೇವನಿಂದೆ ಅಥವಾ ಇಸ್ಲಾಮಿಗೆ ಕಳಂಕ ತರುವ ಯತ್ನ ಎಂಬ ಗುಲ್ಲೆಬ್ಬಿಸಿ ಅದನ್ನು ಮುಚ್ಚಿಹಾಕುತ್ತಾರೆ ಎನ್ನುತ್ತಾರೆ ಪೋಲೀಸರು.ಅಲ್ಲದೆ , ಇಂತಹ ಪ್ರಕರಣಗಳು ಹೊರಬಂದಾಗ , ಮುಲ್ಲಾಗಳನ್ನು “ಕ್ಷಮಿಸಿ”ಎಂಬುದಾಗಿ ಅಂತಹ ಮಕ್ಕಳ ಕುಟುಂಬದವರ ಮೇಲೆ ಒತ್ತಡ ತರಲಾಗುತ್ತದೆ ಎನ್ನುತ್ತಾರೆ ಡೆಪ್ಯುಟಿ ಪೋಲೀಸ್ ಸೂಪರಿಂಟೆಂಡೆಂಟ್ ಸಾದಿಖ್ ಬಲೂಚ್ .

ಇದೆಲ್ಲಕ್ಕಿಂತ ಹೆಚ್ಚಾಗಿ ಇಂತಹ ದೌರ್ಜನ್ಯಕ್ಕೀಡಾದ ಮಕ್ಕಳ ಹೆತ್ತವರು ಕಳಂಕ , ಅವಮಾನಕ್ಕೀಡಾಗುವ ಆತಂಕದಲ್ಲಿ ಪ್ರಕರಣಗಳ ಬಗ್ಗೆ ದೂರು ನೀಡಲು ಹಿಂಜರಿಯುತ್ತಾರೆ. ಇದರಿಂದಾಗಿ ಅನೇಕ ಪ್ರಕರಣಗಳು , ಹೆತ್ತವರು ಆರೋಪಿ ಮದರಸ ಶಿಕ್ಷಕರನ್ನು “ಕ್ಷಮಿಸುವ “ಕ್ರಮದೊಂದಿಗೆ ಮುಕ್ತಾಯ ಕಾಣುತ್ತವೆ ಎಂಬುದಾಗಿಯೂ ಸಾದಿಖ್ ಹೇಳುತ್ತಾರೆ. ನೀಳ ಗಡ್ಡ ಬಿಟ್ಟ ಮುಲ್ಲಾಗಳ ಮತಾಚಾರಗಳ ನಿಷ್ಠೆಯ ಬೂಟಾಟಿಕೆಗಳ ನಡುವೆ ಇಂತಹ ಬರ್ಬರ ಕೃತ್ಯಗಳು ಮುಚ್ಚಿದ ಕೋಣೆಗಳ ನಡುವೆಯೇ ಹೂತುಹೋಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಇವರನ್ನು ಗಲ್ಲಿಗೇರಿಸಬೇಕು …
ಪಾಕಿಸ್ಥಾನದ ಮದರಸಗಳಲ್ಲಿ ಇಂತಹ ಎಷ್ಟು ಕೃತ್ಯಗಳು ನಡೆಯುತ್ತಿವೆ ಎಂಬ ಬಗ್ಗೆ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಪಾಕಿಸ್ಥಾನವಿನ್ನೂ ಅತ್ಯಂತ ಕಂದಾಚಾರನಿಷ್ಠ ಸಮಾಜಡವಾಗಿಯೇ ನಿರ್ಬಂತವಾಗಿದೆ.ಎಷ್ಟೆಂದರೆ ಇನ್ನೂ ಪ್ರೌಢಾವಸ್ಥೆ ತಲುಪದೆ ಇರುವ ಸಣ್ಣ ಹುಡುಗರು ಹುಡುಗಿಯರ ಜೊತೆ ಮಾತನಾಡುವುದನ್ನೂ ಈ ಮುಲ್ಲಾಗಳು ವಿರೋಸಿ ಅಂತಹ ಹುಡುಗರನ್ನು ಗುರಿ ಮಾಡುತ್ತಿರುತ್ತಾರೆ. ಪುರುಷರು ಮಹಿಳೆಯರ ಜೊತೆ ಮಾತನಾಡುವುದನ್ನು ಇವರು ಸ್ವೀಕರಿಸುವುದಿಲ್ಲ. ಇದೇ ವೇಳೆ ಇವರು ಹುಡುಗರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುತ್ತಾರೆ. ಇದರಿಂದಾಗಿ ಅವರು ಇಂತಹ ಕೃತ್ಯಗಳ ಬಗ್ಗೆ ಬಾಯಿಬಿಡದಿರುವ ಸಂದರ್ಭಗಳೂ ಹೆಚ್ಚಿವೆ ಎಂಬುದಾಗಿ ಪೋಲೀಸ್ ಅಕಾರಿಗಳು ಸಮಸ್ಯೆಯ ಮುಖಗಳನ್ನು ತೆರೆದಿಡುತ್ತಾರೆ.

ಇದಕ್ಕೆ ನಿದರ್ಶನವೆಂಬಂತೆ, ಉತ್ತರದ ಹಿಂದುಳಿದ ಕೊಹಿಸ್ತಾನ್ ವಲಯದ ಯಾವೂಸ್ ಎಂಬ ಎಂಟರ ಹರೆಯದ ಬಾಲಕನನ್ನು ಉದಾಹರಿಸುತ್ತಾರೆ. ಈತನ ತಂದೆ ಬಡ ಕಾರ್ಮಿಕನಾಗಿದ್ದು, ಯಾವುದೇ ಶಿಕ್ಷಣ ಪಡೆದಿಲ್ಲ. ಕೇವಲ ಸ್ಥಳೀಯ ಭಾಷೆ ಮಾತ್ರ ಬಲ್ಲ ವ್ಯಕ್ತಿಯಾಗಿದ್ದಾನೆ.ಈತ ಈತನ ಊರಿನ ಇತರ ಮಕ್ಕಳ ಜೊತೆ ಮನ್ಸೇಹ್ರಾ ಎಂಬ ದೂರದ ಮದರಸವೊಂದರಲ್ಲಿ ಕಲಿಯುವುದಕ್ಕೆ ಹೋಗಿದ್ದಾನೆ.ತಂದೆಯಲ್ಲಿ ಪೋನ್ ಕೂಡಾ ಇಲ್ಲ. ತಿಂಗಳುಗಟ್ಟಲೆ ಮಗನ ಸಂಪರ್ಕವಿಲ್ಲ. ಕಳೆದ ಡಿಸೆಂಬರ್ ಅಂತ್ಯಕ್ಕೆ ರಜೆಯಲ್ಲಿ ಮದರಸದ ಬಹುತೇಕ ವಿದ್ಯಾರ್ಥಿಗಳು ಊರಿಗೆ ತೆರಳಿದ್ದರು. ಯಾವೂಸ್ ಮತ್ತು ಇತರ ಕೆಲವೇ ಬಡ ವಿದ್ಯಾರ್ಥಿಗಳು ಊರಿಗೆ ಹೋಗುವುದು ವೆಚ್ಚದಾಯಕವಾದ ಕಾರಣ ಅಲ್ಲಿ ಉಳಿದುಕೊಂಡಿದ್ದರು. ಒಂದು ದಿನ ಇತರ ವಿದ್ಯಾರ್ಥಿಗಳು ಬಟ್ಟೆ ಒಗೆಯಲೆಂದು ಹೋಗಿದ್ದಾಗ ಯಾವೂಸ್ ಮಾತ್ರ ಉಳಿದಿದ್ದ. ಆಗ ಖಾರಿ ಶಂಸುದ್ದೀನ್ ಎಂಬ ಶಿಕ್ಷಕ ಈತನ ಮೇಲೆ ಹಠಾತ್ ಆಗಿ ಲೈಂಗಿಕ ದೌರ್ಜನ್ಯವೆಸಗಿದ್ದು ಮಾತ್ರವಲ್ಲದೆ ಬೊಬ್ಬಿಟ್ಟಾಗ ಥಳಿಸಿದ್ದಾನೆ. ಎರಡು ದಿನಗಳ ಕಾಲ ಬಾಲಕನನ್ನು ಕೈದಿಯಂತೆ ಕೂಡಿಹಾಕಿದ್ದಾನೆ.ಮತ್ತೆ ಮತ್ತೆ ಲೈಂಗಿಕ ಅತ್ಯಾಚಾರವೆಸಗಲಾಗಿದೆ. ಕೊನೆಗೆ ಈತ ಅನಾರೋಗ್ಯಕ್ಕೀಡಾದಾಗ ಭಯಗೊಂಡ ಮದರಸ ಶಿಕ್ಷಕ ಈತನನ್ನು ಆಸ್ಪತ್ರೆಗೆ ಒಯ್ದಿದ್ದಾನೆ.

ಅಲ್ಲಿನ ವೈದ್ಯರಾದ ಡಾ.ಫೈಸಲ್ ಮನಾನ್ ಸಲಾರ್‍ಝಾಯಿ ಬಾಲಕನ ಮೈಮೇಲೆ ಇಂತಹ ದೌರ್ಜನ್ಯದ ಗುರುತುಗಳಿರುವುದನ್ನು ಪತ್ತೆ ಹಚ್ಚಿದ್ದಾರೆ. ಅನುಮಾನಗೊಂಡ ವೈದ್ಯರು ಬಾಲಕನನ್ನು ಪ್ರತ್ಯೇಕ ವಾರ್ಡ್ ಒಂದಕ್ಕೆ ಸ್ಥಳಾಂತರಿಸಿ ಆತನನ್ನು ಪರೀಕ್ಷಿಸುತ್ತಾರೆ. ಲೈಂಗಿಕ ದೌರ್ಜನ್ಯದ ಅನುಮಾನದ ಮೇರೆಗೆ ಪರಿಶೀಲಿಸಿದಾಗ ಆಘಾತಕಾರಿ ಮಾಹಿತಿಗಳು ಲಭಿಸುತ್ತವೆ.ಆದರೆ ಬಾಲಕ ಯಾವೂಸ್‍ನ ಚಿಕ್ಕಪ್ಪ, ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂಬುದನ್ನು ಒಪ್ಪಲೇ ಸಿದ್ಧವಿಲ್ಲ.ಇದರ ಬದಲಾಗಿ ಬಾಲಕ ಬಿದ್ದು ಏಟಾಗಿರಬಹುದು ಎಂದೇ ವಾದಿಸುತ್ತಾನೆ. ಕೊನೆಗೂ ಈ ಬಗ್ಗೆ ವೈದ್ಯರು ಚಿಕ್ಕಪ್ಪನಿಗೆ ಮನವರಿಕೆ ಮಾಡಿದಾಗ ,ಮದರಸ ಶಿಕ್ಷಕನಿಂದ ಈ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಸುದ್ದಿ ನಮ್ಮ ಊರಿನಲ್ಲಿ ಹರಡಿದ್ದೇ ಆದರೆ ಅಲ್ಲಿ ನಮಗೆ ಬದುಕಲೂ ಕಷ್ಟವಾಗಬಹುದು ಎಂಬ ಭೀತಿಯನ್ನು ಬಾಲಕನ ಚಿಕ್ಕಪ್ಪ ವ್ಯಕ್ತಪಡಿಸುತ್ತಾನೆ. ಆದ ಕಾರಣ ಬಾಲಕನ ಚಿಕ್ಕಪ್ಪ ಈ ವಿಷಯದ ಬಗ್ಗೆ ಮಾತನಾಡುವುದು ಬಿಡಿ, ಯೋಚಿಸಲೂ ಹಿಂಜರಿಯುತ್ತಾನೆ ಎನ್ನುತ್ತಾರೆ ಡಾ.ಫೈಸಲ್ ಮನಾನ್.ಕೊನೆಗೆ ಈ ಬರ್ಬರ ಕೃತ್ಯದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪಡೆದ ಡಾ.ಫೈಸಲ್ ಈ ಬಗ್ಗೆ ಪೋಲೀಸರನ್ನು ಸಂಪರ್ಕಿಸಿ ದೂರು ನೀಡುತ್ತಾರೆ. ಇದೀಗ ಮದರಸದ ಶಿಕ್ಷಕ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಸುದೈವವಶಾತ್ ಪೋಲೀಸರು ಯಾವೂಸ್‍ನ ಡಿಎನ್‍ಎ ಮಾದರಿಯನ್ನು ಪಡೆದು ಪ್ರಕರಣವನ್ನು ದೃಢಪಡಿಸಲು ಶಕ್ತರಾಗುತ್ತಾರೆ. ಆದಾಗ್ಯೂ ಅಲ್ಲಿ ಈ ಮುಲ್ಲಾನ ಬೆಂಬಲಿಗರು ಮತ್ತು ಮದ್ರಸಾ -ಇ-ತಾಲೀಮ್-ಉಲ್-ಕುರಾನ್ ಮಸೀದಿಯಲ್ಲಿನ ಮುಸ್ಲಿಂ ಗುಂಪು ವೈದ್ಯರು ಮತ್ತು ಕೇಸು ದಾಖಲಿಸಿದ ಪೋಲೀಸರ ಕ್ರಮಕ್ಕೆ ತಕರಾರೆತ್ತಿ, ಮುಲ್ಲಾ ಶಂಸುದ್ದೀನ್ ಅಮಾಯಕ. ದೇಶದಲ್ಲಿ ನಡೆಯುತ್ತಿರುವ ಇಸ್ಲಾಮ್ ವಿರೋ ಶಕ್ತಿಗಳ ಹುನ್ನಾರಕ್ಕೆ ಆತ ಬಲಿಪಶು ಎಂದು ಹುಯಿಲೆಬ್ಬಿಸುತ್ತಾರೆ. ಇದು ಪಾಕಿಸ್ಥಾನದ ಮತೀಯ ನಾಯಕರ ವರ್ಚಸ್ಸು ಕೆಡಿಸುವ ಸಂಚು ಎಂದು ಆರೋಪಿಸುತ್ತಾರೆ. ಆದರೆ ಇದೀಗ ಬಾಲಕನ ತಂದೆ ಅಬ್ದುಲ್ ಖಯ್ಯೂಮ್ ಮಾತ್ರ ತನ್ನ ಮಗನ ಮೇಲಾಗಿರುವ ಬರ್ಬರ ದೌರ್ಜನ್ಯದಿಂದ ತೀವ್ರ ಆಕ್ರೋಶಗೊಂಡು, ಮುಲ್ಲಾನನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರೂ, ಯಾರೂ ಏನೂ ಮಾಡಿಲ್ಲ, ತನ್ನದು ಅರಣ್ಯ ರೋದನ ಎಂದು ದುಃಖ, ಅಸಹಾಯಕತೆಯಿಂದ ಹೇಳುವುದನ್ನು ವರದಿ ಬೊಟ್ಟು ಮಾಡುತ್ತದೆ.

ಇದು ಕೇವಲ ಬಾಲಕರ ದುರಂತ ಕಥೆಯಲ್ಲ, ದಕ್ಷಿಣ ಪಂಜಾಬ್‍ನ ಬಸ್ತಿ ಖಾಸಿ ಗ್ರಾಮದ ಮಿಸ್ಬಾಳಂತಹ ಅನೇಕ ಹೆಣ್ಣುಮಕ್ಕಳ ಹೃದಯ ವಿದ್ರಾವಕ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಈಕೆಯ ತಂದೆ ಮೊಹಮ್ಮದ್ ಇಕ್ಬಾಲ್ ಹೇಳುವಂತೆ, ಮನೆಯ ಪಕ್ಕದಲ್ಲೇ ಇರುವ ಮದರಸದಲ್ಲಿ ಮೂರು ವರ್ಷ ಕಾಲ ಕುರಾನ್ ಕಲಿಯಲೆಂದು ಹೋಗುತ್ತಿದ್ದ ಮಗಳ ಮೇಲೆ ಇಂತಹ ಲೈಂಗಿಕ ದೌರ್ಜನ್ಯ ನಡೆದಿದೆ. ಈ ಸಂದರ್ಭ ಆಕೆಯ ಮಾವ ಮೊಹಮ್ಮದ್ ತನ್ವೀರ್ ಕೊನೆಗೂ ಆಕೆಯನ್ನು ರಕ್ಷಿಸಿದರೂ, ಬಂತ ಮುಲ್ಲಾ ಜಾಮೀನಿನ ಮೇಲೆ ಹೊರಬರಲು ಶಕ್ತವಾಗಿರುವುದನ್ನು ಉಲ್ಲೇಖಿಸಿ ಅಸಹಾಯಕತೆ ವ್ಯಕ್ತಪಡಿಸುವುದನ್ನು ವರದಿ ಬೊಟ್ಟು ಮಾಡುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ