ಉತ್ತರಕಂಡ ಪೊಲೀಸರಿಂದ ನಿಮಯ ಮೀರಿದ 10 ವಿದೇಶಿಯರಿಗೆ ವಿನೂತನರೀತಿಯ ಪಾಠ ಲಾಕ್‍ಡೌನ್ ಮೀರಿ, 500 ಬಾರಿ ಸಾರಿ ಬರೆದ ವಿದೇಶಿಯರು

ಡೆಹರದೂನ್ :ದೇಶದಲ್ಲಿ ಲಾಕ್‍ಡೌನ್ ಘೋಷಿಸಲಾಗಿದ್ದರೂ, ಉತ್ತರಕಂಡದ ರಿಷಿಕೇಶ್‍ನಲ್ಲಿ ಲಾಕ್‍ಡೌನ್ ನಿಯಮ ಮೀರಿ ಹೊರಬಂದ ವಿದೇಶಿಯರಿಗೆ 500 ಬಾರಿ ಸಾರಿ ಎಂದು ಬರೆಯುವ ಶಿಕ್ಷೆಯನ್ನು ಪೋಲೀಸರು ನೀಡಿದ್ದಾರೆ.

ಕೊರೋನಾ ಹರಡುವಿಕೆ ತಗ್ಗಿಸಲು ದೇಶಾದ್ಯಂತ ಲಾಕ್‍ಡೌನ್‍ಘೋಷಣೆಯಾಗಿದೆ. ಆದರೂ ವಿವಿಧ ರಾಷ್ಟ್ರಗಳಿಂದ ಬಂದಿರುವ ಸುಮಾರು 10 ವಿದೇಶಿಯರು ರಿಷಿಕೇಶ್‍ನ ಗಂಗಾ ನದಿ ದಂಡೆಯ ಬಳಿ ಗುಂಪು ಸೇರಿದ್ದರು. ಇವರೆಲ್ಲರೂ ಗಂಗಾ ನದಿ ತೀರದ ತಪೋವನ ಪ್ರದೇಶದಲ್ಲಿ ಒಟ್ಟಿಗೆ ಅಡ್ಡಾಡುತ್ತಿದ್ದಾಗ ಪೋಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಪ್ರತಿದಿನವೂ ಲಾಕ್‍ಡೌನ್ ನಿಯಮ ಪಾಲಿಸುವಂತೆ ಎಷ್ಟೇ ಸರ್ಕಾರ ಮನವಿ ಮಾಡಿದರೂ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಓಡಾಡುತ್ತಿದ್ದಕಾರಣ ಪಾಠ ಕಲಿಸಲಾಗಿದೆಎಂದು ಎಸ್‍ಐ ವಿನೋದ್‍ಕುಮಾರ್ ಶರ್ಮಾ ತಿಳಿಸಿದ್ದಾರೆ.

ನಿಯಮ ಮೀರಿದ ಪ್ರತಿಯೊಬ್ಬ ವಿದೇಶಿಯರಿಗೆ, ನನಗೆ ಲಾಕ್‍ಡೌನ್ ನಿಯಮಗೊತ್ತಿರಲಿಲ್ಲ. ಹಾಗಾಗಿ ತಪ್ಪಾಗಿದೆ ಸಾರಿ ಎಂದು 500 ಬಾರಿ ಬರೆಯುವ ಶಿಕ್ಷೆ ನೀಡಲಾಗಿತ್ತು. ರಿಷಿಕೇಶ್‍ನ ತಪೋವನದ ಬಳಿ ಹಲವಾರು ವಿದೇಶಿಯರು ತಂಗಿದ್ದಾರೆ. ಎಷ್ಟೇ ಎಚ್ಚರಿಕೆ ಈ ಹಿಂದೆ ನೀಡಿದ್ದರೂ, ಉದ್ದೇಶ ಪೂರ್ವಕವಾಗಿಯೇ ಇವರು ನಿಯಮ ಮೀರುತ್ತಿದ್ದದ್ದೂ ಗಮನಕ್ಕೆ ಬಂದಿತ್ತು. ಹಾಗಾಗಿ ಇವರೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ, ಇವರ ಮೂಲಕ ನಿಯಮ ಮೀರುವ ಎಲ್ಲರಿಗೂ ಕಠಿಣ ಸಂದೇಶ ರವಾನಿಸುವ ಪ್ರಯತ್ನ ಮಾಡಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ