ಹೊಸದಿಲ್ಲಿ: ಕೊರೊನಾ ವೈರಸ್ ಸೋಂಕಿನಿಂದಾಗಿ ಲಾಕ್ಡೌನ್ ಘೋಷಣೆ ಮಾಡಿದಾಗಿನಿಂದ ಕುಸಿಯುತ್ತಲೇ ಸಾಗಿದ್ದ ಷೇರು ಮಾರುಕಟ್ಟೆ ಮಂಗಳವಾರದ ವಹಿವಾಟಿಲ್ಲಿ ಕೊಂಚ ಚೇತರಿಸಿಕೊಂಡಿದೆ. ಇದರಂತೆ, ಮುಂಬೈ ಶೇರು ಮಾರುಕಟ್ಟೆ 2476 ಅಂಕಗಳಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ 569 ಪಾಯಿಂಟ್ಸ್ ಏರಿಕೆ ಕಂಡಿದೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್), ಮಂಗಳವಾರ 29,605ರಷ್ಟಿದ್ದು, ಶೇ. 7.3ರಷ್ಟು ಏರಿಕೆ ಕಂಡಿತ್ತು. ರಾಷ್ಟ್ರೀಯ ಸಂವೇದಿ ಸೂಚ್ಯಂಕವು (ನಿಫ್ಟಿ) 8,652ರಷ್ಟಿದೆ.ಲಾಕ್ಡೌನ್ ಘೋಷಣೆ ಬೆನ್ನಲ್ಲೇ ಭಾರೀ ನಷ್ಟ ಅನುಭವಿಸಿದ್ದ ಹೂಡಿಕೆದಾರರು, ಇದೀಗ ಕೊಂಚ ನಿರಾಳರಾಗಿದ್ದಾರೆ. ಮಂಗಳವಾರ ಹೂಡಿಕೆದಾರರಿಗೆ 6.63 ಲ.ರೂ.ಲಾಭ ಗಳಿಸಿದ್ದಾರೆ.
ಷೇರುಪೇಟೆ ಮೇಲೆ ಕೊರೊನಾ ಎಫೆಕ್ಟ್ ಕಂಟಿನ್ಯೂ, ಪಾತಾಳಕ್ಕೆ ಸೆನ್ಸೆಕ್ಸ್-ನಿಫ್ಟಿ, ಯೆಸ್ ಬ್ಯಾಂಕ್ಗೆ ಬಂಪರ್
ಕಳೆದ ಎರಡು ವಾರಗಳಿಂದ ನಿರಂತರ ಕುಸಿತದ ಹಾದಿಯಲ್ಲಿದ್ದ ಷೇರು ಸೂಚ್ಯಂಕಗಳು ಇಂದು ಮತ್ತೆ ಪಾತಾಳಕ್ಕೆ ಇಳಿದಿತ್ತು. ಕೊರೊನಾ ವೈರಸ್ ಭೀತಿಯಿಂದ ಸದ್ಯಕ್ಕೆ ಷೇರುಪೇಟೆ ಚೇತರಿಸಿಕೊಳ್ಳುವ ಯಾವ ಸಾಧ್ಯತೆಯೂ ಸದ್ಯಕ್ಕೆ ಕಾಣುತ್ತಿಲ್ಲ ಎನ್ನಲಾಗಿತ್ತು. ಆದರೆ, ಮಂಗಳವಾರ ವಹಿವಾಟಿನಲ್ಲಿ ಕೊಂಚ ಏರಿಕೆ ಕಂಡಿದೆ.
ಬ್ಯಾಂಕ್ ಆದಾಯ ಖೋತಾ: ಹಣ ಕಟ್ಟುವವರೇ ಇಲ್ಲ, ವಿತ್ ಡ್ರಾ ಹೆಚ್ಚು!
ದೇಶೀಯ ಹೂಡಿಕೆದಾರರಿಗೂ ಷೇರುಪೇಟೆ ಧನಾತ್ಮಕವಾಗಿದೆ. ದೇಶಿಯ ಹೂಡಿಕೆದಾರರು ಸುಮಾರು 1.3 ಮಿಲಿಯನ್ ಡಾಲರ್ (9,900 ಕೋಟಿ ರೂಪಾಯಿ) ಬಂಡವಾಳ ಆಕರ್ಷಿಸುವಲ್ಲಿ ಸಫಲರಾಗಿದ್ದಾರೆ. ಫಾರಿನ್ ಪೋರ್ಟ್ಪೋಲಿಯೋ ಇನ್ವೆಸ್ಟ್ಮೆಂಟ್ ಮಿತಿಯನ್ನು ಹೆಚ್ಚಿಸಿದ ನಂತರ ಬಂಡವಾಳದ ಹರಿವು ಕೂಡ ಹೆಚ್ಚಾಗಿದೆ.
ಔಷಧ ರಫ್ತು ನಿಷೇಧ ತೆರವುಗೊಳಿಸಿದ ಭಾರತ
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಎಲ್ಲ ರಫ್ತುಗಳ ಮೇಲೆ ನಿಷೇಧ ಹೇರಲಾಗಿತ್ತು. ಇದೀಗ 24 ಬಗೆಯ ಔಷಧಗಳ ಮೇಲಿನ ರಫ್ತು ನಿರ್ಭಂಧವನ್ನು ತೆರವುಗೊಳಿಸಲಾಗಿದೆ. ಆದರೆ, ಪ್ಯಾರಸಿಟಮಾಲ್ ಔಷಧ ರಫ್ತಿನ ಮೇಲಿನ ನಿಷೇಧ ಮುಂದುವರಿದಿದೆ.