ಕೊರೋನಾ ಮುಕ್ತರ ಅನುಭವ ಕೊರೋನಾ ಬಗ್ಗೆ ಭೀತಿ ಬೇಡ : ವೈದ್ಯರ ಸೂಚನೆ ಪಾಲಿಸಿ

ಹೊಸದಿಲ್ಲಿ : ವಿಶ್ವಾದ್ಯಂತ ಕೊರೋನಾ ವೈರಸ್ ಸೋಂಕಿತ ಪಾಸಿಟಿವ್ ರೋಗಿಗಳ ಸಂಖ್ಯೆ ದಿನೇ ದಿನೇ ಒಂದೇ ರೀತಿ ಏರುತ್ತಲೇ ಇರುವಾಗ ವೈರಸ್ ಪಾಸಿಟಿವ್ ರೋಗಿಗಳು 14 ದಿನಗಳ ಚಿಕಿತ್ಸೆ ಪಡೆದು ಗುಣಮುಖರಾಗಿ ತಮ್ಮ ಮನೆಗಳಿಗೆ ತೆರಳಿ ತಮ್ಮ ಅನುಭವಗಳನ್ನು ವೈರಸ್ ಬಗ್ಗೆ ಆತಂಕಿತರಾದವರೊಂದಿಗೆ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ತಾವು ಚಿಕಿತ್ಸೆ ಪಡೆಯುತ್ತಿದ್ದಾಗ ಹೇಗೆ ತಾವು ಸಮಯವನ್ನು ಸದುಪಯೋಗಿಸಿಕೊಂಡೆವು ಎನ್ನುವ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.

ಕೋವಿಡ್-19 ಸೋಕಿನಿಂದ ಪಾಸಿಟಿವ್ ರೋಗಿಗಳಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸಂಖ್ಯಾತ ಜನರಲ್ಲಿ 14 ದಿನಗಳ ಚಿಕಿತ್ಸೆಯಿಂದ ಸಹಸ್ರಾರು ಮಂದಿ ಗುಣಮುಖರಾಗಿ ತಮ್ಮ ಮನೆಗಳಿಗೆ ತೆರಳಿದ್ದಾರೆ. ತಮಗೆ ಚಿಕಿತ್ಸೆ ನೀಡಿದ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಕೊರೋನಾ ವೈರಸ್ ವ್ಯಾ ಬಗ್ಗೆ ಅವರಿತ್ತ ಅನುಭವದ ಮಾತುಗಳಿವು.

1.ಕೊರೋನಾ ವೈರಸ್ ಬಗ್ಗೆ ಭಯ ಬೇಡ, ಜಾಗೃತರಾಗಿರಿ. ಕರಾಳ ವ್ಯಾ ಸೋಂಕು ಪೀಡಿತನೆಂಬ ಭಯಬೇಡ. ಧೈರ್ಯವಂತರಾಗಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಹೇಳಿದ ಎಚ್ಚರಿಕೆಯ ಸಾಂತ್ವನದ ನುಡಿಗಳಂತೆ ನಡೆದು ಚಿಕಿತ್ಸೆ ಹೊಂದಿರಿ ಎಂದು ಕೊರೋನಾ ಪಾಸಿಟಿವ್ ವ್ಯಾಯಿಂದ ಚಿಕಿತ್ಸೆ ಪಡೆದ 35 ವರ್ಷ ಪ್ರಾಯದ ಪಂಜಾಬಿನ ಫತೇಸಿಂಗ್ ಹೇಳಿದ್ದಾರೆ. ಅವರು ಏ.4 ಮತ್ತು 5ರಂದು ಎರಡು ಬಾರಿಯ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶದ ಬಳಿಕ ಮನೆಗೆ ತೆರಳಿದ ಮೇಲೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಪಂಜಾಬಿನ ನವಾನ್ ಶಹರ್ ಜಿಲ್ಲಾಸ್ಪತ್ರೆಗೆ ಮಾ.19ರಂದು ಫತೇಸಿಂಗ್ ಮತ್ತು ಅವರ ಕುಟುಂಬ ಸದಸ್ಯರು ದಾಖಲಾಗಿತ್ತು. ಸಿಂಗ್ ಅವರ 70 ವರ್ಷ ಪ್ರಾಯದ ತಂದೆಯವರು ಇತ್ತೀಚೆಗೆ ಕೊರೋನಾ ವೈರಸ್‍ಗೆ ಬಲಿಯಾಗಿದ್ದರು.

2.ಮಹಾಮಾರಿ ಎಂಬ ದಿಗಿಲು ಬೇಡ. ಮುಂಜಾಗ್ರತೆ ಅಗತ್ಯ : ಕೊರೋನಾ ವೈರಸ್ ಔಷಧ ರಹಿತ ಮಹಾಮಾರಿ ಎಂಬ ಭೀತಿಗೊಳಗಾಗಿ ಕುಗ್ಗದಿರಿ. ಈ ಮಹಾಮಾರಿ ಕೂಡ 14 ದಿನಗಳ ಅಥವಾ 28 ದಿನಗಳ ಚಿಕಿತ್ಸೆಗೆ ಗುಣಮುಖವಾಗಲಿದೆ. ಕೊರೋನಾ ವೈರಾಣು ಪಾಸಿಟಿವ್ ಪ್ರಕರಣ ಚಿಕಿತ್ಸೆಯ ಬಳಿಕ ನೆಗೆಟಿವ್ ಫಲಿತಾಂಶ ನೀಡಲಿದೆ ಎಂಬುದಕ್ಕೆ ನಾನೇ ಜ್ವಲಂತ ನಿದರ್ಶನ ಎಂದು ಫತೇ ಸಿಂಗ್ ಕೊರೋನಾ ಪಾಸಿಟಿವ್ ರೋಗಿಗಳಲ್ಲಿ ಧೈರ್ಯ ತುಂಬಿದ್ದಾರೆ. ನಿಮ್ಮಲ್ಲಿರುವ ಧೈರ್ಯ ಮತ್ತು ಆತ್ಮಸ್ಥೈರ್ಯವೇ ನಿಮ್ಮನ್ನು ಆರೋಗ್ಯವಂತನನ್ನಾಗಿ ಮಾಡಲಿದೆ. ಒಟ್ಟಿನಲ್ಲಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಮಾರ್ಗದರ್ಶನದಂತೆ ನಡೆದುಕೊಳ್ಳಿ. ರೋಗಿ ಎಂಬ ಚಿಂತೆ ಬೇಡ. ಧೈರ್ಯವಂತರಾಗಿ ರೋಗವನ್ನು ಗೆಲ್ಲುವ ಆತ್ಮಸ್ಥೈರ್ಯ ಹೊಂದಿರಿ ಎಂದು ಫತೇ ಸಿಂಗ್ ಕೊರೋನಾ ಪಾಸಿಟಿವ್ ರೋಗಿಗಳಿಗೆ ಸಲಹೆ ಮಾಡಿದ್ದಾರೆ.

3.ನೈರ್ಮಲ್ಯವನ್ನು ರಕ್ಷಿಸಿಕೊಳ್ಳಿ, ಕೈಗಳನ್ನು ತೊಳೆದು ಸ್ವಚ್ಛವಾಗಿರಿ. ಕೊರೋನಾ ವೈರಸ್ ಸೋಂಕನ್ನು ನಮ್ಮಿಂದ ದೂರವಿರಿಸಲು ನಾವು ನೈರ್ಮಲ್ಯ ರಕ್ಷಿಸೋಣ ಮತ್ತು ನಮ್ಮ ಕೈಗಳನ್ನು ಆಗಾಗ ತೊಳೆದು ಸ್ವಚ್ಛವಾಗಿರಿಸೋಣ ಎನ್ನುವ ಕಿವಿಮಾತನ್ನು ಫತೇ ಸಿಂಗ್ ಹೇಳಿದ್ದಾರೆ.

4.ಏಕಾಂತವಾಸ ಕೋವಿಡ್-19 ವ್ಯಾಯನ್ನು ಸೋಲಿಸುತ್ತದೆ. ಕೊರೋನಾ ವೈರಸ್ ಸೋಂಕಿನಿಂದ ಪಾರಾಗಲು ಏಕಾಂತವಾಸವೇ ಉತ್ತಮ ಉಪಾಯ. ಈ ವೇಳೆ ನೀವು ಖಿನ್ನತೆಗೊಳಗಾಗದಿರಲು ಪತ್ನಿಗೆ ವಿಡಿಯೋ ಕರೆ ಅಥವಾ ಮೂವಿಗಳ ಮೂಲಕ ಕ್ರಿಯಾಚೈತನ್ಯ ಪಡೆಯಿರಿ ಎಂದೂ ಫತೇ ಸಿಂಗ್ ಸಲಹೆ ಕೊಟ್ಟಿದ್ದಾರೆ.

ಹರ್ಯಾಣ ಗುರುಗ್ರಾಮದ ಪೊರ್ಟಿಸ್ ಸ್ಮಾರಕ ಆಸ್ಪತ್ರೆಯಿಂದ ಅನಾಮಿಕನಾಗಿ ಉಳಿಯಲಿಚ್ಛಿಸಿದ ಇನ್ನೋರ್ವ ಕೊರೋನಾ ವೈರಸ್ ಪಾಸಿಟಿವ್ ರೋಗಿ 14 ದಿನಗಳ ಚಿಕಿತ್ಸೆ ಬಳಿಕ ಎರಡು ಬಾರಿ ನೆಗೆಟಿವ್ ಫಲಿತಾಂಶ ಬಂದ ನಂತರ ಏ.1ರಂದು ಗುಣಮುಖರಾಗಿ ತನ್ನ ಮನೆಗೆ ತೆರಳಿದ್ದಾರೆ. ಈತ ಬ್ರಿಟನಿಗೆ ಪ್ರವಾಸಕ್ಕೆ ತೆರಳಿದಾಗ ಕೊರೋನಾ ಸೋಂಕಿತರಾಗಿ ಭಾರತಕ್ಕೆ ವಾಪಸಾದ ಕೂಡಲೇ ನೇರವಾಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸಾ ಸಮಯದಲ್ಲಿ ತನ್ನ ಏಕಾಂತವಾಸದ ಖಿನ್ನತೆಯಿಂದ ಪಾರಾಗಲು ಟಿವಿ ಸೀರಿಯಲ್ ಮತ್ತು ಇತ್ತೀಚಿನ ಮೂವಿಗಳನ್ನು ನೋಡುತ್ತಿದ್ದೆ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ