ರಾಜ್ಯದಲ್ಲಿಂದು 12 ಕೊರೋನಾ ಪ್ರಕರಣ ಪತ್ತೆ; ಸೋಂಕಿತರ ಸಂಖ್ಯೆ 175ಕ್ಕೆ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಹೊಸದಾಗಿ 12 ಪ್ರಕರಣಗಳು ಪತ್ತೆಯಾಗಿದ್ದು, ಅವರಲ್ಲಿ 7 ಮಂದಿ ದೆಹಲಿಯ ನಿಜಾಮುದ್ದೀನ್ ಜಮಾತ್​ ಸಭೆಯ ನಂಟು ಹೊಂದಿದವರಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮೂರು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

ಬಾಗಲಕೋಟೆ, ಮಂಡ್ಯ, ಗದಗ, ಬೆಂಗಳೂರು ಮತ್ತು ಕಲಬುರ್ಗಿಯಲ್ಲಿ ಇಂದು ಒಟ್ಟು 12 ಕೊರೋನಾ ಪ್ರಕರಣಗಳು ಕಂಡು ಬಂದಿವೆ.

ಸೋಂಕಿತರ ಟ್ರಾವೆಲ್ ಹಿಸ್ಟರಿ ಹೀಗಿದೆ.

ರೋಗಿ-164: 33 ವರ್ಷದ ವ್ಯಕ್ತಿಗೆ ಮುಧೋಳ ಬಾಗಲಕೋಟೆಯ ನಿವಾಸಿಯಾಗಿದ್ದು, ಮಾರ್ಚ್ 13-18 ರವರೆಗೆ ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸದ್ಯ ಬಾಗಲಕೋಟೆಯ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ-165: 41ವರ್ಷದ ಮಹಿಳೆ ಬಾಗಲಕೋಟೆ ನಿವಾಸಿಯಾಗಿದ್ದು, ರೋಗಿ 125 ರ ನೆರೆಯವರಾಗಿರುತ್ತಾರೆ. ಬಾಗಲಕೋಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ..

ರೋಗಿ-166: ಗದಗ ಮೂಲದ 80 ವರ್ಷದ ವೃದ್ಧೆಗೆ ಸೋಂಕು ತಗುಲಿದ್ದು, ತೀವ್ರ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದಾರೆ. ಗದಗ್​​ನಲ್ಲಿ ಚಿಕಿತ್ಸೆ ಮುಂದುವರಿದೆ.‌

ರೋಗಿ-167: ಬೆಂಗಳೂರು ನಿವಾಸಿ 29 ವರ್ಷದ ವ್ಯಕ್ತಿಗೆ ಸೋಂಕು ತಗಲಿದ್ದು, ಇವರು ದೆಹಲಿಯ ನಿಜಾಮುದ್ದೀನಾ ಜಮಾತ್​​ ಧರ್ಮಸಭೆಯಲ್ಲಿ ಭಾಗಿಯಾಗಿದ್ದಾರೆ.. ಮಾರ್ಚ್ 13-18 ರಂದು ದೆಹಲಿಗೆ ತೆರಳಿದ್ದು, ಸದ್ಯ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ.ರೋಗಿ-168 :ಬೆಂಗಳೂರಿನ 50 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಮಾರ್ಚ್ 13-18ರಂದು ದೆಹಲಿಯ ಧರ್ಮಸಭೆಯಲ್ಲಿ ಭಾಗಿಯಾಗಿದರು. ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿದೆ.

ರೋಗಿ-169: ಬೆಂಗಳೂರು ಗ್ರಾಮಾಂತರ 35 ವರ್ಷ ವ್ಯಕ್ತಿ, ಇವರು ಮಾರ್ಚ್ 13-18ರಂದು ನವದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು. ಬೆಂಗಳೂರು ಗ್ರಾಮಾಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ.

ರೋಗಿ-170: ಬೆಂಗಳೂರಿನ 68 ವರ್ಷದ ವ್ಯಕ್ತಿಯು ದುಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ.‌

ರೋಗಿ-171: ಮಂಡ್ಯದ 32 ವರ್ಷದ ವ್ಯಕ್ತಿಗೆ ಸೋಂಕು P-134,135,136,137,138, ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರ ಸಂಪರ್ಕ ಹೊಂದಿದ್ದಾರೆ.‌ ಮಂಡ್ಯದಲ್ಲಿ ಚಿಕಿತ್ಸೆ ಮುಂದುವರಿದೆ.

ರೋಗಿ-172: ಮಂಡ್ಯದ 36 ವರ್ಷದ ವ್ಯಕ್ತಿಗೆ ಸೋಂಕು ಇದ್ದು, P-134, 135,136,137,138, ಟಿ ಜೆ ಹಿನ್ನೆಲೆ ಇರುವ ಪ್ರಕರಣಗಳ ಸಂಪರ್ಕ ಹೊಂದಿದ್ದಾರೆ.‌ ಮಂಡ್ಯದಲ್ಲಿ ಚಿಕಿತ್ಸೆ ಮುಂದುವರಿದೆ.

ರೋಗಿ-173: ಮಂಡ್ಯದ 65 ವರ್ಷದ ವ್ಯಕ್ತಿಗೆ P-134, 135,136,137,138, ಟಿ ಜೆ ಹಿನ್ನೆಲೆ ಇರುವ ಪ್ರಕರಣಗಳ ಸಂಪರ್ಕ ಹೊಂದಿದ್ದಾರೆ.‌ ಮಂಡ್ಯದಲ್ಲಿ ಚಿಕಿತ್ಸೆ ಮುಂದುವರಿದೆ.

ರೋಗಿ-174: ಕಲರ್ಬುಗಿಯ 28 ವರ್ಷದ ಮಹಿಳೆಗೆ ಸೋಂಕು ತಗಲಿದ್ದು, P-124 ರ ಸಂಪರ್ಕಿತ ಸೊಸೆ) ಕಲರ್ಬುಗಿ ಚಿಕಿತ್ಸೆ ಮುಂದುವರಿದೆ..

ರೋಗಿ-175: ಕಲರ್ಬುಗಿ ಯ 57 ವರ್ಷದ ವ್ಯಕ್ತಿಗೆ ಸೋಂಕು ಇದ್ದು, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ.‌ ಕಲರ್ಬುಗಿ ಚಿಕಿತ್ಸೆ ಮುಂದುವರಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ