ಸಮಿ-ಸಬಿನ್ಸಾ ಗ್ರೂಪ್ ಕರ್ನಾಟಕದ ಹಾಸನದಲ್ಲಿ ತಯಾರಿಕಾ ಘಟಕ ಪ್ರಾರಂಭಿಸಲಿದೆ

  • ಸಮಿ-ಸಬಿನ್ಸಾ ಗ್ರೂಪ್ ಕರ್ನಾಟಕದ ಹಾಸನದಲ್ಲಿ ತನ್ನ ತಯಾರಿಕಾ ಘಟಕಕ್ಕೆ 200 ಕೋಟಿಗಳ ಹೂಡಿಕೆ ಮಾಡಲಿದೆ.
  • ಮೊದಲ ಹಂತದ ಈ ಘಟಕ 2021 ರಲ್ಲಿ ಕಾರ್ಯರೂಪಕ್ಕೆ ಬರಲಿದೆ ಮತ್ತು ಅಸ್ತಿತ್ವದಲ್ಲಿರುವ ಇತರ ಘಟಕಗಳ ಬೆಳವಣಿಗೆಯನ್ನು ವಿಸ್ತರಿಸಲು ಮತ್ತು ನವೀನ ಉತ್ಪನ್ನಗಳತ್ತ ಗಮನ ಹರಿಸುವ ಕಾರ್ಯತಂತ್ರದ ಭಾಗವಾಗಿದೆ.
  • ಹಾಸನ ಈ ಸ್ಥಾವರವು ಸಮಿ-ಸಬಿನ್ಸಾದ ಆರನೇ ಜಾಗತಿಕ ಉತ್ಪಾದನಾ ಘಟಕ ಸೌಲಭ್ಯವಾಗಲಿದೆ.
  • ಕರ್ನಾಟಕ ಮೂಲದ ಸಮಿ-ಸಬಿನ್ಸಾ, ನ್ಯೂಟ್ರಾಸುಟಿಕಲ್ಸ್, ಕಾಸ್ಮೆಸುಟಿಕಲ್ಸ್, ಸ್ಟ್ಯಾಂಡರ್ಡೈಸ್ಡ್ ಗಿಡಮೂಲಿಕೆಗಳ ಸಾರಗಳು, ಉತ್ತಮ ರಾಸಾಯನಿಕಗಳು, ವಿಶೇಷ ರಾಸಾಯನಿಕಗಳು ಮತ್ತು ಪ್ರೋಬಯಾಟಿಕ್‌ ಆರೋಗ್ಯ-ವಿಜ್ಞಾನ ಪ್ರಮುಖ ಉದ್ಯಮದಲ್ಲಿ ಬಹುರಾಷ್ಟ್ರೀಯ ಮತ್ತು ಜಾಗತಿಕ ಪ್ರವರ್ತಕ ಸಂಸ್ಥೆಯಾಗಿದೆ.
  • ಸಮಿ-ಸಬಿನ್ಸಾದ ಪ್ರಸ್ತುತ ಘಟಕಗಳು ಡಾಬಾಸ್ ಪೇಟೆ, ಕುಣಿಗಲ್, ಹೈದರಾಬಾದ್, ನೆಲಮಂಗಲ ಮತ್ತು ಅಮೇರಿಕಾ ಗಳಲ್ಲಿಯೂ ಇದೆ.
  • ಸಮಿ-ಸಬಿನ್ಸಾ ಜನರ ಜೀವನವನ್ನು ಆರೋಗ್ಯಕರ ಮತ್ತು ಉತ್ತಮಗೊಳಿಸುವ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಕಡೆಗೆ ಸಂಶೋಧನಾ-ಆಧಾರಿತ, ವಿಜ್ಞಾನ-ಆಧಾರಿತ ವಿಧಾನವನ್ನು ಕಂಡುಕೊಂಡಿದೆ.
  • ಭಾರತೀಯ ನ್ಯೂಟ್ರಾಸುಟಿಕಲ್ಸ್ ನ ಮಾರುಕಟ್ಟೆ ಉದ್ಯಮ 2022 ರ ವೇಳೆಗೆ 8.1 ಶತಕೋಟಿ ಡಾಲರ್ ಗೆ ಬೆಳೆಯುವ ನಿರೀಕ್ಷೆಯಿದೆ.

ಬೆಂಗಳೂರು, ಜನವರಿ 29, 2020: ಆರೋಗ್ಯ ವಿಜ್ಞಾನ ಮತ್ತು ನ್ಯೂಟ್ರಾಸುಟಿಕಲ್ಸ್‌ನ ಪ್ರವರ್ತಕ ಮತ್ತು ಜಾಗತಿಕ ನಾಯಕರಾದ ಸಮಿ-ಸಬಿನ್ಸಾ ಗ್ರೂಪ್ ತನ್ನ ಹೊಸ ಉತ್ಪಾದನಾ ಸೌಲಭ್ಯವನ್ನು ಕರ್ನಾಟಕದ ಹಾಸನದ ಫಾರ್ಮಾ ಎಸ್‌ಇಝೆಡ್ ಕೈಗಾರಿಕಾ ಪ್ರದೇಶದಲ್ಲಿ ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಮೊದಲ ಹಂತದ ಸ್ಥಾವರವು 40,000 ಚದರ ಮೀಟರ್ ವಿಶ್ವ ದರ್ಜೆಯ ಸಕ್ರಿಯ ನ್ಯೂಟ್ರಾಸುಟಿಕಲ್ ಪದಾರ್ಥಗಳು (ಎಎನ್‌ಐ) ವಾರ್ಷಿಕ 300 ಟನ್‌ಗಳಷ್ಟು ಉತ್ಪಾದಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ. ಜಾಗತಿಕ ಮಟ್ಟದ ಈ ಸ್ಥಾವರ 2021 ರ ವೇಳೆಗೆ ಕಾರ್ಯರೂಪಕ್ಕೆ ಬರಲಿದೆ. ರೂ. 200 ಕೋಟಿ ಹೂಡಿಕೆ ಹೊಂದಿರುವ ಈ ಘಟಕವು ಸಮಿ-ಸಬಿನ್ಸಾ ಸಮೂಹದ ಯೋಜಿತ ಬೆಳವಣಿಗೆಯ ಭಾಗವಾಗಿದೆ.

ಇಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿ-ಸಬಿನ್ಸಾ ಗ್ರೂಪ್‌ನ ಸ್ಥಾಪಕ ಮತ್ತು ಅಧ್ಯಕ್ಷರಾದ, ಡಾ.ಮುಹಮ್ಮದ್ ಮಜೀದ್, ಅವರು ಮಾತನಾಡುತ್ತಾ : “ವಿಶ್ವದಾದ್ಯಂತ, ಗ್ರಾಹಕರು ಉತ್ತಮ ಆರೋಗ್ಯಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಮತ್ತು ಅವರ ಎಲ್ಲಾ ಪೌಷ್ಠಿಕಾಂಶದ ಅಗತ್ಯಗಳನ್ನು ಪೂರೈಸುವ ಆಹಾರ ಮತ್ತು ಪಾನೀಯಗಳನ್ನು ಹುಡುಕುತ್ತಿದ್ದಾರೆ. ನಾವು ಆರೋಗ್ಯ ಕ್ಷೇತ್ರದಲ್ಲಿ (ಬೌಧಿಕ ಹಕ್ಕು) ಪೇಟೆಂಟ್ ಪಡೆದ ಸೂತ್ರೀಕರಣಗಳಿಗಾಗಿ ಜಾಗತಿಕ ಮಾರುಕಟ್ಟೆಯನ್ನು ಸೃಷ್ಟಿಸಿದ ಪ್ರವರ್ತಕರಾಗಿದ್ದು, ಮತ್ತು ಭಾರತೀಯ ಅಗ್ರಗಣ್ಯ ಕಂಪನಿಗಳಲ್ಲಿ ನಮ್ಮ ಸಂಸ್ಥೆ ಒಂದಾಗಿದೆ. ನಾವು ಜನರ ಜೀವನವನ್ನು ಆರೋಗ್ಯಕರ ಮತ್ತು ಉತ್ತಮಗೊಳಿಸುವ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಕಡೆಗೆ ಸಂಶೋಧನಾ-ಆಧಾರಿತ, ವಿಜ್ಞಾನ-ಆಧಾರಿತ ವಿಧಾನವನ್ನು ಕಂಡುಕೊಂಡಿದ್ದೇವೆ. ಹಾಸನದಲ್ಲಿ ಬರಲಿರುವ ಘಟಕವೂ ಕೂಡ ಈ ಸೌಲಭ್ಯದಿಂದ ಬಲವರ್ಧನೆಯಾಗಲಿದೆ. ಹೊಸ ಘಟಕದ ಉತ್ಪಾದನೆ ಪ್ರಾರಂಭವಾದಾಗ ನಮ್ಮ ರಫ್ತುಗಳನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಮತ್ತು ನಮ್ಮ ಆದಾಯವನ್ನು ದ್ವಿಗುಣಗೊಳಿಸಲು ಸಹಾಯ ಮಾಡುವಲ್ಲಿ ಈ ಘಟಕ ಪ್ರಮುಖ ಪಾತ್ರ ವಹಿಸುತ್ತದೆ. ಮೊದಲ ಹಂತವಾಗಿ 2021 ರಲ್ಲಿ ಒಮ್ಮೆ ಕಾರ್ಯರೂಪಕ್ಕೆ ಬಂದರೆ, ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ಪ್ರದೇಶವಾದ ಹಾಸನದಲ್ಲಿ ಸುಮಾರು 400 ಅರ್ಹ ಉದ್ಯೋಗಿಗಳಿಗೆ ಉದ್ಯೋಗವನ್ನು ಒದಗಿಸುತ್ತದೆ ”.ಎಂದು ಹೇಳಿದರು.

 

ಸಮಿ-ಸಬಿನ್ಸಾ ಗ್ರೂಪ್‌ನ ನಿರ್ದೇಶಕರು ವಿ.ಜಿ.ನಾಯರ್ ಅವರು ಮಾತನಾಡುತ್ತಾ , “ಸಮಿ-ಸಬಿನ್ಸಾದ ಈ ಹೊಸ ಸ್ಥಾವರವು ಅಂತಾರಾಷ್ಟ್ರೀಯ ಗುಣಮಟ್ಟ ಮತ್ತು ಮಾನದಂಡಗಳನ್ನು ಹೊಂದಿರುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಈ ಘಟಕ ವಿಶೇಷ ಶಕ್ತಿ-ಸಾಮಾರ್ಥ್ಯ ದಕ್ಷತೆಯನ್ನು ಖಾತ್ರಿಪಡಿಸುವ ಉತ್ತಮ ಗುಣಮಟ್ಟದ, ಪರಿಸರ-ಸ್ನೇಹಿ ಜೀರೋ ಲಿಕ್ವಿಡ್ ಡಿಸ್ಚಾರ್ಜ್ ( ಝೆಡ್‌ಎಲ್‌ಡಿ) ಸೌಲಭ್ಯವನ್ನು ಹೊಂದಿದೆ. ವಿಶೇಷ ಕಾಳಜಿ-ಜವಾಬ್ದಾರಿಯುತ ನೀರಿನ ನಿರ್ವಹಣೆ ಮತ್ತು ಜೀವ-ವೈವಿಧ್ಯ ಅಭಿವೃದ್ಧಿ. ಎಪಿಐ ಸೌಲಭ್ಯವು 100% ಇದ್ದು, ಸಿಜಿಎಂಪಿ ಮತ್ತು ನಿಯಂತ್ರಕ ಅನುಸರಣೆ ಹೊಂದಿದೆ. ” ಎಂದು ಹೇಳಿದರು.

ಹಾಸನ ಸ್ಥಾವರವು ಸಮಿ-ಸಬಿನ್ಸಾ ಗ್ರೂಪ್‌ನ ಆರನೇ ಜಾಗತಿಕ ಉತ್ಪಾದನಾ ಸೌಲಭ್ಯವಾಗಿದೆ, ಇದಲ್ಲದೇ ಘಟಕಗಳಾದ ಪೀಣ್ಯ, ಡಾಬಾಸ್ ಪೇಟೆ, ಕುಣಿಗಲ್, ಹೈದರಾಬಾದ್, ನೆಲಮಂಗಲ ಮತ್ತು ಅಮೇರಿಕಾಗಳಲ್ಲಿಯೂ ಸಹ ಇದರ ಘಟಕಗಳು ಇವೆ. ಸಂಪೂರ್ಣವಾಗಿ ಕಾರ್ಯನಿರ್ವಹಿಸಿದಾಗ, ಈ ಹೊಸ ಸ್ಥಾವರವು ಸಮೂಹದ ಒಟ್ಟಾರೆ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವುದಲ್ಲದೆ, ಈ ಘಟಕ ಕಾರ್ಯಾರಂಭಿಸಿದರೆ, ಕೇವಲ ಸಮಿ-ಸಬಿನ್ಸಾ ಸಮೂಹದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದಲ್ಲದೇ, ಸಮೂಹದ ಶ್ರೇಯಾಂಕವನ್ನು ಭಾರತದ ಹಾಗೂ ಜಾಗತಿಕವಾಗಿಯೂ ನ್ಯೂಟ್ರಾಸುಟಿಕಲ್ಸ್ ವಲಯದಲ್ಲಿ ಮುಂಚೂಣಿಯಲ್ಲಿರುವಂತೆ ಮಾಡುತ್ತದೆ.

ಇತ್ತೀಚಿನ ಉದ್ಯಮದ ವರದಿಗಳ ಪ್ರಕಾರ, ನ್ಯೂಟ್ರಾಸುಟಿಕಲ್‌ಗಳ ಜಾಗತಿಕ ಮಾರುಕಟ್ಟೆಯು ಸಧೃಢವಾದ ಬೆಳವಣಿಗೆ ಕಂಡು ಬಂದಿದೆ. ಪಿಎಂಎಂಐ ಬಿಸಿನೆಸ್ ಇಂಟೆಲಿಜೆನ್ಸ್‌ನ ಹೊಸ ಅಧ್ಯಯನದ ಪ್ರಕಾರ, ಮಾರುಕಟ್ಟೆಯು 2025 ರಲ್ಲಿ 337 ಬಿಲಿಯನ್‌ ಡಾಲರ್ ಗೆ ಬೆಳೆಯಲಿದ್ದು, 7.5% ನಷ್ಟು ಸಿಎಜಿಆರ್‌ನಲ್ಲಿ ಬೆಳೆಯಲಿದೆ. ಭಾರತೀಯ ನ್ಯೂಟ್ರಾಸುಟಿಕಲ್ಸ್ ಉದ್ಯಮ ಮಾರುಕಟ್ಟೆ 3 ಬಿಲಿಯನ್ ಡಾಲರ್ ಗೆ ಪ್ರವರ್ಧಮಾನಕ್ಕೆ ಬಂದಿದೆ ಮತ್ತು 2022 ರ ವೇಳೆಗೆ 8.1 ಬಿಲಿಯನ್ ಶತಕೋಟಿ ಡಾಲರ್ ಗೆ ಬೆಳೆಯುವ ನಿರೀಕ್ಷೆಯಿದೆ.

ಸಮಿ-ಸಬಿನ್ಸಾ ಗ್ರೂಪಿನ ಬಗ್ಗೆ:
ಸಮಿ-ಸಬಿನ್ಸಾ ಗ್ರೂಪ್ ಜಾಗತಿಕ ಉದ್ಯಮದ ಪ್ರವರ್ತಕ ಮತ್ತು ಭಾರತದ ಪ್ರಮುಖ ಬಹುರಾಷ್ಟ್ರೀಯ ಆರೋಗ್ಯ ವಿಜ್ಞಾನ ಕಂಪನಿಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯಲ್ಲಿ ನ್ಯೂಟ್ರಾಸುಟಿಕಲ್ಸ್, ಕಾಸ್ಮೆಸುಟಿಕಲ್ಸ್, ಸ್ಟ್ಯಾಂಡರ್ಡೈಸ್ಡ್ ಗಿಡಮೂಲಿಕೆಗಳ ಸಾರಗಳು, ಉತ್ತಮ ರಾಸಾಯನಿಕಗಳು ಮತ್ತು ಪ್ರೋಬಯಾಟಿಕ್‌ಗಳನ್ನು ಒದಗಿಸುತ್ತದೆ. ಪರ್ಯಾಯ ಔಷಧ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ವಿಜ್ಞಾನಿ ಮತ್ತು ಉದ್ಯಮಿ ಡಾ.ಮುಹಮ್ಮದ್ ಮಜೀದ್ ಅವರು 1988 ರಲ್ಲಿ ಸ್ಥಾಪಿಸಿದ ಸಮಿ-ಸಬಿನ್ಸಾ ಸಮೂಹವು ನೈಸರ್ಗಿಕ ಔಷಧಗಳು, ದ್ಯುತಿ ರಸಾಯನಶಾಸ್ತ್ರ, ಸಂಶ್ಲೇಷಿತ ರಸಾಯನಶಾಸ್ತ್ರ, ಅಂಗಾಂಶ ಸಂಸ್ಕೃತಿ, ಜೈವಿಕ ತಂತ್ರಜ್ಞಾನ, ವಿಶ್ಲೇಷಣಾತ್ಮಕ ಆರ್ & ಡಿ, ಜೈವಿಕ ಸೇರಿದಂತೆ ಸ್ವತಂತ್ರ ಸಂಶೋಧನಾ ವಿಭಾಗಗಳನ್ನು ಹೊಂದಿದೆ. ಸಂಶೋಧನೆ, ಮೈಕ್ರೋಬಯಾಲಜಿ ಮತ್ತು ಫಾರ್ಮುಲೇಶನ್ಸ್ ಆರ್ & ಡಿ, ಇವೆಲ್ಲವೂ ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸುವ ಉತ್ಪನ್ನಗಳನ್ನು ರಚಿಸಲು ಸಿನರ್ಜಿಸ್ಟಿಕ್ ಕೆಲಸದ ಮಾದರಿಯಲ್ಲಿ ಸಮನ್ವಯಗೊಳಿಸುತ್ತವೆ. ಡಾ. ಮಜೀದ್ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಸಮಿ-ಸಬಿನ್ಸಾ ಸಹ ಇಂದು 40,000 ಎಕರೆ ಭೂಮಿಯನ್ನು ನಿಯೋಜಿಸುವ ಗುತ್ತಿಗೆ ಕೃಷಿ ಮಾದರಿಯಲ್ಲಿ ಪ್ರವರ್ತಕವಾಗಿದ್ದು, ಸುಸ್ಥಿರ ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತದೆ. 120 ಸಂಶೋಧನಾ ವಿಜ್ಞಾನಿಗಳ ತಂಡವು ಜಗತ್ತಿನಾದ್ಯಂತ ಉದಯೋನ್ಮುಖ ಪೌಷ್ಠಿಕಾಂಶ ಮತ್ತು ಆರೋಗ್ಯ ಅಗತ್ಯಗಳಿಗೆ ಪರ್ಯಾಯ ಚಿಕಿತ್ಸೆಯನ್ನು ಒದಗಿಸುವ ಪ್ರಮಾಣೀಕೃತ ನೈಸರ್ಗಿಕ ಸಾರಗಳನ್ನು ಕಂಡುಹಿಡಿಯಲು ಮತ್ತು ಅಭಿವೃದ್ಧಿಪಡಿಸಲು ಸತತವಾಗಿ ಕೆಲಸ ಮಾಡುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ