ಟ್ರಂಪ್​ ವಾಗ್ದಂಡನೆ ವಿಚಾರಣೆಗೆ ನಿಯಮ ರೂಪಿಸಿದ ಅಮೆರಿಕಾ ಮೇಲ್ಮನೆ​: ಶೀಘ್ರದಲ್ಲೇ ಸಾಕ್ಷಿಗಳ ವಿಚಾರಣೆ

ವಾಷಿಂಗ್ಟನ್ಅಮೆರಿಕದ ಸೆನೆಟ್ (ಮೇಲ್ಮನೆ) ಟ್ರಂಪ್​ ವಿರುದ್ಧದ ವಾಗ್ದಂಡನೆ ವಿಚಾರಣೆಯನ್ನು ಸತತ 13 ಗಂಟೆಗಳಿಂದ ಆಲಿಸಿತ್ತು. ಡೆಮಾಕ್ರಟಿಕ್​ ಪಕ್ಷ, ರಿಪಬ್ಲಿಕನ್​ ಪಕ್ಷ ಮತ್ತು ಅಧ್ಯಕ್ಷರ ಪರ ವೈಟ್​ಹೌಸ್​ ಕೌನ್ಸೆಲ್​ಗಳ ತಂಡದ ವಾದ – ಪ್ರತಿವಾದ ಆಲಿಸಿದ ಸೆನೆಟ್​ ವಾಗ್ದಂಡನೆ ವಿಚಾರಣೆಗೆ ನಿಯಮ ರೂಪಿಸಿದೆ. ಜತೆಗೆ ಸಾಕ್ಷಿಗಳ ವಿಚಾರಣೆಯನ್ನು ಶೀಘ್ರದಲ್ಲೇ ನಡೆಸಲಿದೆ. ಅಧಿಕಾರ ದುರುಪಯೋಗ ಆರೋಪಕ್ಕೆ ಗುರಿಯಾಗಿರುವ ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಬೇಕು ಎಂದು ಡೆಮಾಕ್ರಟಿಕ್ ಪಕ್ಷ ಆಗ್ರಹಿಸಿ, ವಾಗ್ದಂಡನೆ ಮಂಡಿಸಿತ್ತು.

ಅಧಿಕಾರ ದುರುಪಯೋಗ ಮತ್ತು ಸಂಸತ್​ ತನಿಖೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಡೆಮಾಕ್ರಟಿಕ್ ಪಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ ವಿಧಿಸಿತ್ತು. ಹೀಗಾಗಿ, ಈ ವಿಚಾರ ಸೆನೆಟ್​ನಲ್ಲಿ ವಿಚಾರಣೆಗೆ ಬಂದಿತ್ತು.  ಅಧ್ಯಕ್ಷ ಟ್ರಂಪ್ ಅವರ ಕಾನೂನು ತಂಡವು ಅಧ್ಯಕ್ಷರು ತಪ್ಪೇನೂ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಜೊತೆಗೆ ಡೆಮಾಕ್ರಟಿಕ್ ಪಕ್ಷದ ವಾಗ್ದಂಡನೆ ದುರ್ಬಲ ಮತ್ತು ಸಂವಿಧಾನದ ಅಪಾಯಕಾರಿ ಕೃತ್ಯ ಎಂದು ಪ್ರತಿಪಾದಿಸಿ, ಈ ವಾಗ್ದಂಡನೆ ತಿರಸ್ಕರಿಸುವಂತೆ ಒತ್ತಾಯಿಸಿತ್ತು. ಅಲ್ಲದೇ, ಡೆಮಾಕ್ರಟಿಕ್​ಗಳು ಒತ್ತಾಯಿಸುತ್ತಿರುವ ಸಾಕ್ಷ್ಯ ಅಥವಾ ಹೆಚ್ಚುವರಿ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ಎಂದು ಟ್ರಂಪ್ ಕಾನೂನು ತಂಡ ಸೋಮವಾರ ಸೆನೆಟ್​ ಮುಂದೆ ವಾದಿಸಿತ್ತು.

ಸತತ 13 ಗಂಟೆಗಳ ಕಾಲ ಸೆನೆಟ್​ನಲ್ಲಿ ವಾದ-ಪ್ರತಿವಾದ ನಡೆದವು. ಈ ವೇಳೆ ಟ್ರಂಪ್​ ವಿರುದ್ಧದ ವಾಗ್ದಂಡನೆ ವಿಧಿಸಲು ಸೆನೆಟ್​ ನಿರಾಕರಿಸಿದೆ. ಅಲ್ಲದೆ, ಡೆಮಾಕ್ರಟಿಕ್​ಗಳು ಒತ್ತಾಯಿಸುತ್ತಿರುವ ಸಾಕ್ಷ್ಯ ಅಥವಾ ಹೆಚ್ಚುವರಿ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ಎಂದು ಹೇಳಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ