
ಟೆಹರಾನ್, ಜ.6-ಅತ್ಯುನ್ನತ ಸೇನಾಧಿಕಾರಿ ಖಾಸಿಮ್ ಸುಲೈಮಾನಿ ಹತ್ಯೆ ನಂತರ ಅಮೆರಿಕ ಮತ್ತು ಇರಾನ್ನ ನಡುವೆ ಯುದ್ಧದ ಕಾರ್ಮೋಡಗಳು ದಟ್ಟವಾಗುತ್ತಿರುವ ನಡುವೆಯೇ ಇರಾಕಿಗಳು ವಾಷಿಂಗ್ಟನ್ ವಿರುದ್ಧ ಸೈಬರ್ ವಾರ್ ಶುರು ಮಾಡಿದ್ದಾರೆ.
ಇದರ ಮೊದಲ ಭಾಗವಾಗಿ ಅಮೆರಿಕದ ಫೆಡರಲ್ ಡಿಪಾಸಿಟರಿ ಲೈಬ್ರರಿ ಪ್ರೊ ವೆಬ್ಸೈಟನ್ನು ಹ್ಯಾಕ್ ಮಾಡಲಾಗಿದೆ. ಇರಾನಿಗಳು ದೇವರ ಹೆಸರಿನಲ್ಲಿ ಈ ವೆಬ್ಸೈಟ್ನ್ನು ಹ್ಯಾಕ್ ಮಾಡುವ ಮೂಲಕ ಅಮೆರಿಕಾಗೆ ಬಿಸಿ ಮುಟ್ಟಿಸಿದ್ದಾರೆ. ಇದು ನಮ್ಮ ಸ್ಯಾಂಪಲ್. ಮುಂದೆ ದೊಡ್ಡ ಮಟ್ಟದಲ್ಲಿ ಅಮೆರಿಕ ವೆಬ್ಸೈಟ್ಗಳನ್ನು ಹ್ಯಾಕ್ ಮಾಡುವುದಾಗಿ ಇರಾನಿ ಹ್ಯಾಕರ್ಗಳು ಕೆಲವು ಸಾಲುಗಳನ್ನು ಬರೆದಿದ್ದಾರೆ.