ಟ್ರಿಪೋಲಿ, ಜ.6-ಲಿಬಿಯಾದ ರಾಜಧಾನಿ ಟ್ರಿಪೋಲಿಯ ಮಿಲಿಟರಿ ಶಾಲೆಯ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 23 ವಿದ್ಯಾರ್ಥಿಗಳು ಹತರಾಗಿದ್ದು,ಅನೇಕರು ಗಾಯಗೊಂಡಿದ್ದಾರೆ.
ಈ ಘಟನೆಯಲ್ಲಿ ಇತರೆ ಹಲವಾರು ಜನ ಗಾಯಗೊಂಡಿದ್ದಾರೆ ಎಂದು ಯುಎನ್ ಬೆಂಬಲಿತ ರಾಷ್ಟ್ರೀಯ ಒಪ್ಪಂದದ (ಜಿಎನ್ಎ) ಆರೋಗ್ಯ ಸಚಿವಾಲಯ ತಿಳಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ 23 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯವು ತನ್ನ ಫೇಸ್ಬುಕ್ನಲ್ಲಿ ಬರೆದುಕೊಂಡಿದೆ.
ಈ ನಡುವೆ ಈ ದಾಳಿಯಲ್ಲಿ 28 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್-ಜಜೀರಾ ಟಿವಿ ವರದಿ ಮಾಡಿದೆ.
ಮಿಲಿಟರಿ ಶಾಲೆ ಟ್ರಿಪೋಲಿಯ ದಕ್ಷಿಣ ಅಲ್-ಹಡ್ಬಾ ಅಲï-ಖದ್ರಾ ಜಿಲ್ಲೆಯಲ್ಲಿದ್ದು, ಇದನ್ನು ಪಾಶ್ಚಿಮಾತ್ಯ ಮೂಲದ ಜಿಎನ್ಎ ನಿಯಂತ್ರಿಸುತ್ತದೆ.
ಏಪ್ರಿಲ್ನಿಂದ ಪ್ರತಿಸ್ಪರ್ಧಿ ಪೂರ್ವ ಮೂಲದ ಅಧಿಕಾರಿಗಳನ್ನು ಬೆಂಬಲಿಸುವ ಲಿಬಿಯಾ ರಾಷ್ಟ್ರೀಯ ಸೇನೆ (ಎಲ್ಎನ್ಎ) ಟ್ರಿಪೋಲಿಯನ್ನು ವಶಪಡಿಸಿಕೊಳ್ಳುವ ಆಕ್ರಮಣದಲ್ಲಿ ತೊಡಗಿದೆ. ಮಿಲಿಟರಿ ಕಾರ್ಯಾಚರಣೆ ಈ ಪ್ರದೇಶದಲ್ಲಿ ಹಿಂಸಾತ್ಮಕ ಹೋರಾಟದ ತಾಣವಾಗಿ ಪರಿವರ್ತಿಸಿದ್ದು, ಅಶಾಂತಿಯಿಂದಾಗಿ ಆತಂಕದ ವಾತಾವರಣ ತಲೆದೋರಿದೆ.