ವಾರಣಾಸಿ,ಜ.2- ಪೌರತ್ವ ಕಾಯ್ದೆ ವಿರುದ್ಧದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ಎರಡು ವಾರಗಳ ಕಾಲ ಜೈಲು ವಾಸ ಅನುಭವಿಸಿದ್ದ ಇನ್ನೂ 56 ಮಂದಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.
ಹವಾಮಾನ ಅಜೆಂಡಾ ಎಂಬ ಎನ್ಜಿಒ ನಡೆಸುತ್ತಿರುವ ಪರಿಸರ ಕಾರ್ಯಕರ್ತೆ ಏಕ್ತಾ (32) ಮತ್ತು ರವಿಶೇಖರ್ (36) ಅವರಿಗೆ ನಿನ್ನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಜಾಮೀನು ನೀಡಿದ್ದು. ಇಂದು ಇನ್ನೂ 56 ಮಂದಿಗೆ ಜಾಮೀನು ನೀಡಲಾಗಿದೆ.
ಡಿಸೆಂಬರ್ 19 ರಂದು ಬೆನಿಯಾ ಬಾಗ್ ಪ್ರದೇಶದಲ್ಲಿ ಜನರು ಜಮಾಯಿಸಿ, ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ವಿರೋಧಿಸಿದ್ದರು. ಸೆಕ್ಷನ್ 144ನ್ನು ಧಿಕ್ಕರಿಸಿ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹಲವಾರು ಮಂದಿಯನ್ನು ಬಂಧಿಸಲಾಗಿತ್ತು. ಬಂಧನಕ್ಕೊಳಗಾಗಿ ಎರಡು ವಾರಗಳ ನಂತರ 56 ಮಂದಿಗೆ ಈಗ ನೀಡಿ ಬಿಡುಗಡೆಗೊಳಿಸಲಾಗಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ವಿಷಯದ ಬಗ್ಗೆ ಬಿಜೆಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದಕ್ದರು.
ಸಿಎಎ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಪೋಷಕರನ್ನು ಬಂಧಿಸಲಾಗಿರುವ ಬಗ್ಗೆ ಖಂಡಿಸಿ 14 ತಿಂಗಳ ಪುಟ್ಟ ಮಗುವಿನ ದುಃಸ್ಥಿತಿಯನ್ನು ಎತ್ತಿ ತೋರಿಸಿದ್ದರು. ಮಗುವಿನ ತಾಯಿಗೆ ಹೋಗಲು ಅವಕಾಶ ನೀಡುವುದು ಸರ್ಕಾರದ ನೈತಿಕ ಕರ್ತವ್ಯವಾಗಿದೆ ಎಂದು ಆಗ್ರಹಿಸಿದ್ದರು.