ಉತ್ತರ ಕೊಡಿ: ಸರಣಿ ಟ್ವೀಟ್​​​ ಮೂಲಕ ಮೋದಿಗೆ ಪ್ರಶ್ನೆಗಳ ಸವಾಲ್​ ಎಸೆದ ಕಾಂಗ್ರೆಸ್​​

ಬೆಂಗಳೂರು: ರೈತ ಸಮಾವೇಶದಲ್ಲಿ ಭಾಗಿಯಾಗಲು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು, ಹೊತ್ತಿನಲ್ಲಿ ಕಾಂಗ್ರೆಸ್ಸರಣಿ ಟ್ವೀಟ್ಮೂಲಕ ಮೋದಿ ಮುಂದೆ ಅನೇಕ ಪ್ರಶ್ನೆಗಳನ್ನು ಮುಂದಿಟ್ಟಿದೆ. ಉತ್ತರ ಕೊಡಿ ಎನ್ನುವ ಹ್ಯಾಷ್ಟ್ಯಾಗ್ಮೂಲಕ  ಟ್ವೀಟ್ಮಾಡಿರುವ ಕಾಂಗ್ರೆಸ್ ಮೂಲಕ​  ಮೋದಿ ಮೇಲೆ ಒತ್ತಡ ಹೇರಿದೆ

ಇಂದು ತುಮಕೂರಿಗೆ  ಆಗಮಿಸುತ್ತಿರುವ ನೀವು ಇದಕ್ಕೂ ಮುನ್ನ ಸಿದ್ದಗಂಗಾ ಮಠದ ಗದ್ದುಗೆಗೆ ದರ್ಶನ ಪಡೆಯುತ್ತಿದ್ದೀರಾ. ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ‘ಶಿವಕುಮಾರ ಸ್ವಾಮೀಜಿ’ ಅವರು ಲಿಂಗೈಕ್ಯರಾದಾಗ ಏಕೆ ತುಮಕೂರಿಗೆ ಭೇಟಿ ನೀಡಲಿಲ್ಲ. ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ನೀಡಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬಂದಿತು. ಅಲ್ಲದೇ ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದರೂ, ಅವರಿಗೆ ಇನ್ನು ಯಾಕೆ ಭಾರತ ರತ್ನ ನೀಡಿಲ್ಲ? ಇದಕ್ಕೆ ಉತ್ತರ ಕೊಡಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್​ ಟ್ವೀಟ್​ ಮಾಡಿದ್ದಾರೆ.

ರಾಜ್ಯ ಭೀಕರ ಪ್ರವಾಹಕ್ಕೆ ತುತ್ತಾಗಿ, 1 ಲಕ್ಷ ಕೋಟಿಗೂ ಹೆಚ್ಚು ನಷ್ಟವಾದರೂ ರಾಷ್ಟ್ರೀಯ ವಿಪತ್ತು ಎಂದು ಯಾಕೆ ಘೋಷಿಸಲಿಲ್ಲ. ಅಲ್ಲದೇ ನೆರೆಯಿಂದ ರಾಜ್ಯದಲ್ಲಿ 35.300 ಕೋಟಿ ನಷ್ಟವಾದರೂ, ಕೇವಲ 1200 ಕೋಟಿ ನೀಡಿ ಸುಮ್ಮನಾದ್ದೀರಿ. ಮಧ್ಯಂತರ ಪರಿಹಾರ ಏಕೆ ನೀಡಲಿಲ್ಲ ಎಂದು ಪ್ರಶ್ನಿಸಲಾಗಿದೆ.

ಇನ್ನು ರಾಜ್ಯಕ್ಕೆ ಕೇಂದ್ರದಿಂದ ನೀಡಬೇಕಾದ ತೆರಿಗೆಯ (ಜಿ.ಎಸ್.ಟಿ) ಪಾಲು ಸಮರ್ಪಕವಾಗಿ ನೀಡುತ್ತಿಲ್ಲ ಏಕೆ? ರಾಜ್ಯಕ್ಕೆ ಬರಬೇಕಾದ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಬಾಕಿಯನ್ನು ಇದುವರೆಗೂ ಏಕೆ ನೀಡಿಲ್ಲ? ಅನುದಾನ ಹಂಚಿಕೆಯಲ್ಲಿ‌ ಕರ್ನಾಟಕವನ್ನು ಕಡೆಗಣಿಸಲಾಗಿದೆ.


Karnataka Congress

✔@INCKarnataka

@narendramodi ಅವರೆ,
ಈ ಹಿಂದೆ ತುಮಕೂರಿಗೆ ಭೇಟಿ ನೀಡಿ,
ಹೇಮಾವತಿ-ನೇತ್ರಾವತಿ ನದಿ ಜೋಡಣೆ ಮಾಡಿ 8 ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದಿರಿ,
ನದಿ ಜೋಡಣೆ ಪ್ರಕ್ರಿಯೆ ಆರಂಭವಾಗಿದೆಯೇ?
ಈಗ ಯಾವ ಹಂತದಲ್ಲಿದೆ?
ಆಗಿರುವ ಖರ್ಚು ವೆಚ್ಚಗಳೇನು?
ಯೋಜನೆ ಪೂರ್ಣಗೊಳ್ಳುವುದು ಯಾವಾಗ?#ಉತ್ತರಕೊಡಿಮೋದಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ