ಭಾರತೀಯ ಸೇನಾ ಬತ್ತಳಿಕೆಗೆ ಮತ್ತೊಂದು ಬ್ರಹ್ಮಾಸ್ತ್ರ ಸೇರ್ಪಡೆ

ಬಾಲಸೋರ್, ಡಿ.17- ಭಾರತೀಯ ಸೇನಾ ಬತ್ತಳಿಕೆಗೆ ಮತ್ತೊಂದು ಬ್ರಹ್ಮಾಸ್ತ್ರ ಸೇರ್ಪಡೆಯಾಗಿದೆ.

ಚಾಂದಿಪುರ್ ಉಡಾವಣಾ ಕ್ಷೇತ್ರದಿಂದ ಸೂಪರ್‍ಸಾನಿಕ್ ಬ್ರಹ್ಮೋಸ್ ಕ್ಷಿಪಣಿ ಪಾಡ್-ಐಐಐಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

200 ಕೆಜಿ ತೂಕದ ಶಸ್ತ್ರಾಸ್ತ್ರಗಳನ್ನು 290 ಕಿಲೋ ಮೀಟರ್ ಹೊತ್ತೊಯ್ದು ಶತ್ರು ನೆಲೆಗಳ ಮೇಲೆ ನಿಖರ ದಾಳಿ ನಡೆಸುವ ಸಾಮಥ್ರ್ಯ ಹೊಂದಿರುವ ಬ್ರಹ್ಮೋಸ್ ಪಾಡ್-ಐಐಐ ಕ್ಷಿಪಣಿಯ ಯಶಸ್ವಿ ಉಡಾವಣೆಯಿಂದ ಭಾರತೀಯ ಸೇನಾ ಬತ್ತಳಿಕೆಗೆ ಮತ್ತೊಂದು ಬ್ರಹ್ಮಾಸ್ತ್ರ ಸೇರ್ಪಡೆಯಾದಂತಾಗಿದೆ.

ಬ್ರಹ್ಮೋಸ್ ಏರೋಸ್ಪೇಸ್ ಮತ್ತು ಡಿಆರ್‍ಡಿಒ ಸಿದ್ಧಪಡಿಸಿರುವ ಬ್ರಹ್ಮೊಸ್ ಕ್ಷಿಪಣಿಯನ್ನು ಭೂಮಿ, ಆಕಾಶ ಮತ್ತು ಸಮುದ್ರದಿಂದಲೂ ಉಡಾಯಿಸಬಹುದಾಗಿದೆ.

ರಷ್ಯಾ ಮತ್ತು ಭಾರತದ ಸಹಭಾಗಿತ್ವದಲ್ಲಿ ರೂಪಿಸಲಾಗಿರುವ ಈ ಕ್ಷಿಪಣಿಗೆ ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮೊಸ್ಕಾವಾ ನದಿಯ ಹೆಸರುಗಳನ್ನು ಸಮೀಕರಿಸಿ ಬ್ರಹ್ಮೋಸ್ ಕ್ಷಿಪಣಿ ಎಂದು ನಾಮಕರಣ ಮಾಡಲಾಗಿದೆ.

2007ರಲ್ಲಿ ಭೂಮಿಯಿಂದ ಭೂಮಿಗೆ ಉಡಾಯಿಸಬಲ್ಲ ಕ್ಷಿಪಣಿ ಭಾರತೀಯ ಸೇನಾ ಬತ್ತಳಿಕೆಗೆ ಸೇರ್ಪಡೆಯಾಗಿತ್ತು. 2014ರಲ್ಲಿ ನೀರಿನಿಂದ ಉಡಾಯಿಸಬಲ್ಲ ಕ್ಷಿಪಣಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿತ್ತು.

ಇದೀಗ 290 ಕಿಮೀ ದೂರದಲ್ಲಿರುವ ಶತ್ರು ನೆಲೆಗಳ ಮೇಲೆ ನಿಖರ ದಾಳಿ ನಡೆಸುವ ಸಾಮಥ್ರ್ಯ ಹೊಂದಿರುವ ಬ್ರಹ್ಮೋಸ್ ಪಾಡ್-ಐಐಐ ಕ್ಷಿಪಣಿ ಯಶಸ್ವಿ ಉಡಾವಣೆಯಾಗಿದ್ದು, ಡಿಆರ್‍ಡಿಒ ಬ್ರಹ್ಮೋಸ್ ಸಾಮಥ್ರ್ಯವನ್ನು 800ಕಿಮೀ ದೂರದವರೆಗೂ ಕ್ರಮಿಸುವ ಸಾಮಥ್ರ್ಯದ ಕ್ಷಿಪಣಿ ಉಡಾವಣೆಗೂ ಸಿದ್ಧತೆ ನಡೆಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ