ಬೆಂಗಳೂರು,ಅ.28-ಬೆಂಗಳೂರು ಬಂಟರ ಸಂಘವು ಪ್ರತಿ ವರ್ಷದಂತೆ ಈ ವರ್ಷವೂ ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನು ಅದ್ದೂರಿಯಿಂದ ಆಚರಿಸಲಾಯಿತು.
ಬೆಂಗಳೂರಿನ ಬಂಟರ ಸಂಘದ ಆವರಣದಲ್ಲಿ ಕರಾವಳಿ ಸಂಸ್ಕøತಿಯನ್ನು ಬಿಂಬಿಸುವಂತಹ ದೀಪಾವಳಿ ಆಚರಣೆ ನೋಡುಗರ ಕಣ್ಮನ ಸೆಳೆಯಿತು.
ದೀಪಾವಳಿ ಹಬ್ಬದ ಆಚರಣೆಗಳಾದ ಧನ ಲಕ್ಷ್ಮಿ ಪೂಜೆ, ಬಲೀಂದ್ರ ಪೂಜೆ, ಗೋ ಪೂಜೆ, ತುಳಸಿ ಪೂಜೆ ಹಾಗೂ ಆಹಾರ ಮೇಳ ಸೇರಿದಂತೆ ದೀಪಾವಳಿ ಹಬ್ಬದ ಆಚರಣೆಗಳು ವಿಜೃಂಣೆಯಿಂದ ನಡೆಯಿತು.
ಬಲಿ ತೆಲಿಪಾಲೆ ಖ್ಯಾತಿಯ ದೀಪಕ್ ರೈ ಪಾಣಾಜೆ ನೇತೃತ್ವದ ತುಳು ನಗೆ ಕಚಗುಳಿ, ವಿವಿಧ ತಂಡಗಳ ನಡುವಿನ ಸಾಂಸ್ಕøತಿಕ ಸ್ಫರ್ಧೆ, ಯಕ್ಷಗಾನ ಪ್ರಸಾಧನ, ದಿ.ಡಿ.ಕೆ. ಚೌಟ ವಿರಚಿತ ಮೂರು ಹೆಜ್ಜೆ, ಮೂರು ಲೋಕ ನಾಟಕವು ನಾ, ದಾಮೋದರ್ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿ ಬಂತು.ಜೊತೆಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾ ದೀವಿಗೆಯ ಮೂಲಕ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತ್ತು. ಹಾಗೇ ಆಹಾರ ಮೇಳದಲ್ಲಿ ಕರಾವಳಿಯ ವಿವಿಧ ಖಾದ್ಯಗಳು ಗಮನ ಸೆಳೆದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಆರ್.ಉಪೇಂದ್ರ ಶೆಟ್ಟಿ ವಹಿಸಿದ್ದರು. ಕಾನ್ಫಿಡೆಂಟ್ ಡೆಂಟಲ್ ಎಕ್ವಿ ಪ್ ಮೆಂಟ್ ಪ್ರೈವೆಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕಾರದ ಡಾ, ಜಿ. ಸುಭಾಶ್ಚಂದ್ರ ಶೆಟ್ಟಿ ಹಾಗೂ ಸೌತ್ ಫೀಲ್ಮ್ ಪೈಂಟ್ಸ್ ಲಿಮಿಟೆಡ್ನ ಚೇರ್ಮೆನ್ ಎಸ್. ಶಿವರಾಜ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.