ಸಕಾಲ ಯೋಜನೆ-ದ 7 ವರ್ಷದಲ್ಲಿ 20 ಕೋಟಿಗೂ ಹೆಚ್ಚು ಅರ್ಜಿಗಳವಿಲೇವಾರಿ-ಸಚಿವ ಎಸ್.ಸುರೇಶ್‍ಕುಮಾರ್

ಬೆಂಗಳೂರು,ಅ.28-ಸಕಾಲ ಯೋಜನೆಯಲ್ಲಿ  ಕಳೆದ 7 ವರ್ಷದಲ್ಲಿ  20 ಕೋಟಿಗೂ ಹೆಚ್ಚು  ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ  ರಾಜ್ಯದಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ತಾಲ್ಲೂಕು ಮೊದಲ ಸ್ಥಾನ ಪಡೆದಿವೆ ಎಂದು ಸಕಾಲ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿಂದು ಸಕಾಲ ಸೇವೆಗಳ ಸೆಪ್ಟೆಂಬರ್ ಮಾಹೆಯ ರಾಜ್ಯ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಸೆ.26ಕ್ಕೆ  ಸಕಾಲ ಯೋಜನೆಯಡಿ 20,09,94,713 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 20,02,84,447 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.

2012ರ ಏಪ್ರಿಲ್  2ರಂದು 11 ಇಲಾಖೆಗಳ 151  ಸೇವೆಗಳನ್ನು ರಾಜ್ಯಾದ್ಯಂತ ಸಕಾಲ ಯೋಜನೆಯಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಈಗ 91 ಇಲಾಖೆಯ 1033 ಸೇವೆಗಳನ್ನು ಸಕಾಲ ಯೋಜನೆಯಡಿ ನೀಡಲಾಗುತ್ತಿದೆ ಎಂದರು.

ಸೆಪ್ಟೆಂಬರ್ ತಿಂಗಳಿನಲ್ಲಿ 25,76,030 ಅರ್ಜಿಗಳನ್ನು ಸ್ವೀಕರಿಸಿದ್ದು, 25, 03,582 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸೆ.26ರವರೆಗೆ 23,860 ಅರ್ಜಿಗಳು ಬಾಕಿ ಉಳಿದಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಶೇ.97.18ರಷ್ಟು ಅರ್ಜಿಗಳು ಕಾಲಮಿತಿಯಲ್ಲಿ ವಿಲೇವಾರಿಯಾಗಿವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಚಿಕ್ಕಬಳ್ಳಾಪುರ, ಹಾಸನ, ಶಿವಮೊಗ್ಗ, ಚಾಮರಾಜನಗರ, ಮಂಡ್ಯ ಜಿಲ್ಲೆಗಳು ಉತ್ತಮ  ಕಾರ್ಯ  ನಿರ್ವಹಿಸಿವೆ. ಚಿಕ್ಕಬಳ್ಳಾಪುರ ಪ್ರಥಮ, ಹಾಸನ ದ್ವಿತೀಯ, ಶಿವಮೊಗ್ಗ 3ನೇ ಸ್ಥಾನವನ್ನು  ಪಡೆದುಕೊಂಡಿದೆ.

ಬೆಂಗಳೂರು ಜಿಲ್ಲೆ 30, ಬಾಗಲಕೋಟೆ  29, ಬೀದರ್ 28ನೇ ಸ್ಥಾನವನ್ನು ಪಡೆದುಕೊಂಡಿವೆ ಎಂದು ವಿವರಿಸಿದರು.

ಚಿಕ್ಕಬಳ್ಳಾಪುರ, ಕಲಘಟಗಿ, ಶಿವಮೊಗ್ಗ, ಹೊಳೇನರಸೀಪುರ, ಹಾಸನ ತಾಲ್ಲೂಕುಗಳು ಉತ್ತಮ   ಕಾರ್ಯ  ನಿರ್ವಹಿಸಿದ್ದು, ಚಿಕ್ಕಬಳ್ಳಾಪುರ ತಾಲ್ಲೂಕು ಮೊದಲ, ಕಲಘಟಗಿ  ದ್ವಿತೀಯ, ಶಿವಮೊಗ್ಗ ತಾಲ್ಲೂಕು ತೃತೀಯ ಸ್ಥಾನವನ್ನು  ಪಡೆದುಕೊಂಡಿವೆ.

ಹರಪನಹಳ್ಳಿ ತಾಲ್ಲೂಕು 177ನೇ ಸ್ಥಾನವನ್ನು,ಹುಮ್ನಾಬಾದ್ 176 ಹಾಗೂ ಸಂಡೂರು 175ನೇ ಸ್ಥಾನವನ್ನು  ಪಡೆದುಕೊಂಡಿವೆ.  ಅವಧಿ ಮೀರಿ ಬಾಕಿ ಉಳಿದ ಅರ್ಜಿಗಳ ಸಂಖ್ಯೆ 19,457 ಆಗಿದ್ದು, ಬೆಂಗಳೂರು ನಗರದಲ್ಲಿ 1377, ಬೆಳಗಾವಿಯಲ್ಲಿ 1283 ಅರ್ಜಿಗಳು ಉಳಿದಿರುತ್ತವೆ.

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ವಿಳಂಬ ವಿಲೇವಾರಿ ಮಾಡಿದ ಅರ್ಜಿಗಳಿವೆ ಎಂದ ಅವರು, 14,004 ಅರ್ಜಿಗಳನ್ನು ವಿಳಂಬವಾಗಿ  ವಿಲೇವಾರಿ ಮಾಡಲಾಗಿದೆ.

ರಾಜ್ಯದಲ್ಲಿ ಶೇ.6ರಷ್ಟು ಅರ್ಜಿಗಳ ತಿರಸ್ಕøತ ಪ್ರಮಾಣವಿದೆ. ಬೀದರ್‍ನಲ್ಲಿ ಶೇ.18.16ರಷ್ಟು, ಕೊಪ್ಪಳದಲ್ಲಿ ಶೇ.13.169, ರಾಯಚೂರು ಜಿಲ್ಲೆಯಲ್ಲಿ ಶೇ.12.18ರಷ್ಟು ಅರ್ಜಿಗಳ ತಿರಸ್ಕøತ ಪ್ರಮಾಣವಿದೆ ಎಂದು ತಿಳಿಸಿದರು.

ಮಾಹಿತಿ ತಂತ್ರಜ್ಞಾನ, ವಿಜ್ಞಾನ, ಜೈವಿಕ ತಂತ್ರಜ್ಞಾನ, ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಶೇ.100ರಷ್ಟು, ಕೆಐಎಡಿಬಿ ಶೇ.44.03, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಶೇ.13.84, ಕೃಷಿ ಇಲಾಖೆ ಶೇ.26.86ರಷ್ಟು ತಿರಸ್ಕøತ ಪ್ರಮಾಣವನ್ನು ಹೊಂದಿದೆ.

ಸಕಾಲ ಕರೆ ಕೇಂದ್ರದಲ್ಲಿ ಸರಾಸರಿ ತಿಂಗಳಿಗೆ 60 ಸಾವಿರ ಕರೆಗಳನ್ನು, ದಿನಕ್ಕೆ 2000 ಕರೆಗಳನ್ನು ಸ್ವೀಕರಿಸಲಾಗುತ್ತಿದೆ.ಬೆಂಗಳೂರು ನಗರ ಅತಿಹೆಚ್ಚು ಕರೆಗಳನ್ನುಸ್ವೀಕರಿಸಿದ್ದರೆ ಕೊಡುಗು ಜಿಲ್ಲೆ ಅತಿ ಕಡಿಮೆ ಕರೆಗಳನ್ನು ಸ್ವೀಕರಿಸಿದೆ ಎಂದರು.

ಜಿಲ್ಲಾಧಿಕಾರಿಗಳು, ಜಿಪಂ ಕಾರ್ಯ ನಿರ್ವಹಣಾಧಿಕಾರಿಗಳು,  ಪೆÇಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ವಿಡಿಯೋ ಕಾನ್ಫರೆನ್ಸ್ ನಡೆಸಿ ಪ್ರತಿ ತಿಂಗಳು ಸಕಾಲ ನಿರ್ವಹಣೆಯ ಬಗ್ಗೆ ವಿಶ್ಲೇಷಿಸಲಾಗುತ್ತಿದೆ. ಅದೇ ರೀತಿ ತಾಲ್ಲೂಕು ಮಟ್ಟದಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ  ಸರ್ಕಾರಿ ಸೇವೆಗಳನ್ನು ಸಕಾಲ ಯೋಜನೆಯಡಿ ನೀಡುವ ಬದಲು ಬೈಪಾಸ್  ಮೂಲಕ ಹೆಚ್ಚು ನೀಡುತ್ತಿರುವುದು ಕಂಡುಬಂದಿದ್ದು, ಅದಕ್ಕೆ ಕಡಿವಾಣ ಹಾಕಲಾವುದು ಎಂದರು.

ಒಂದೇ ತಿಂಗಳಲ್ಲಿ 7 ಬಾರಿ ಅವಧಿ ಮೀರಿ ಸಕಾಲದಡಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ಮಾಡಿದವರಿಗೆ ದಂಡದ ಮೂಲಕ ಶಿಕ್ಷೆ ವಿಧಿಸಲಾಗುವುದು ಎಂದರು.

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಮಾತನಾಡಿ, ಸರ್ಕಾರದ ಸೇವೆಗಳನ್ನು ಚುರುಕುಗೊಳಿಸಲು ಸಕಾಲ ಸಹಕಾರಿಯಾಗಿದ್ದು, ಸಕಾಲದಲ್ಲಿ ಸಾರ್ವಜನಿಕರಿಗೆ ಸೇವೆಗಳು ದೊರೆಯುತ್ತಿವೆ. ಸಾರ್ವಜನಿಕ ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ   ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಮೊದಲ ಸ್ಥಾನವನ್ನು ಕಾಯ್ದುಕೊಳ್ಳಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಸ್ಥಾನ ಪಡೆದುದಕ್ಕಾಗಿ ಜಿಲ್ಲಾಧಿಕಾರಿ ಲತಾ ಅವರಿಗೆ ಪ್ರಶಂಸನಾ ಪತ್ರವನ್ನು ನೀಡಿದರು. ಅದೇ ರೀತಿ ಸಕಾಲ ಯೋಜನೆಯಡಿ ಉತ್ತಮ ಕಾರ್ಯ  ನಿರ್ವಹಿಸಿದ ತಹಸೀಲ್ದಾರ್ ಶಿವರಾಜ್ ಅವರಿಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಇದೇ ರೀತಿ ಉತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿಗಳಿಗೂ ಗೌರಿವಿಸಲಾಗಯಿತು.

ಸಕಾಲ ಯೋಜನೆಯಡಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳಿಗೆ ರಾಜ್ಯಮಟ್ಟದಲ್ಲಿ 50 ಸಾವಿರ ನಗದು, ಪ್ರಮಾಣ ಪತ್ರ ಹಾಗೂ ಜಿಲ್ಲಾ ಮಟ್ಟದಲ್ಲಿ 10 ಸಾವಿರ ನಗದು, ಪ್ರಮಾಣ ಪತ್ರ ನೀಡಲಾಗುವುದು. ತಿಂಗಳಿಗೊಮ್ಮೆ  ಇಂತಹ ಅಧಿಕಾರಿಗಳನ್ನು ಗುರುತಿಸಿ ಗೌರವಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎನ್.ವಿಜಯಭಾಸ್ಕರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ,  ಸಕಾಲ ಮಿಷನ್ ನಿರ್ದೇಶಕ ವರಪ್ರಸಾದ್ ರೆಡ್ಡಿ  ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ