ಮೇಲುಕೋಟೆ ಹತ್ಯಾಕಾಂಡದ ಬಗ್ಗೆ ಯಾರೂ ಮರೆಯಬಾರದು-ಡಿಸಿಎಂ ಅಶ್ವಥ್‍ನಾರಾಯಣ

ಬೆಂಗಳೂರು,ಅ.28- 260 ವರ್ಷಗಳ ಹಿಂದೆ ಇದೇ ನರಕ ಚತುರ್ದಶಿಯ ದಿನ ಟಿಪ್ಪು ಸುಲ್ತಾನರಿಂದ ನಡೆದ ಕ್ರೌರ್ಯದ ಬಗ್ಗೆ ಪ್ರಸ್ತಾಪಿಸಿರುವ ಡಿಸಿಎಂ ಅಶ್ವಥ್‍ನಾರಾಯಣ, ಮೇಲುಕೋಟೆ ಹತ್ಯಾಕಾಂಡದ ಬಗ್ಗೆ ಯಾರೂ ಮರೆಯಬಾರದು ಎಂದಿದ್ದಾರೆ.

ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಅವರು, ಎರಡು ಶತಮಾನಗಳ ಹಿಂದೆ ಇದೇ ನರಕ ಚತುದರ್ಶಿಯ ದಿನ ಟಿಪ್ಪು ಅಟ್ಟಹಾಸಕ್ಕೆ ಅಸಹಾಯಕ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 800 ಮುಗ್ಧ ಜನರು ಬಲಿಯಾದರು ಎಂದು ಮೇಲುಕೋಟೆ ಹತ್ಯಾಕಾಂಡದ ಬಗ್ಗೆ  ಸ್ಮರಿಸಿಕೊಂಡಿದ್ದಾರೆ.

ದೇಶದೆಲ್ಲೆಡೆ ಈ ಬೆಳಕಿನ ಹಬ್ಬವನ್ನು ಆಚರಿಸುತ್ತಿದ್ದರೆ, ನಮ್ಮ ರಾಜ್ಯದ ಮೇಲುಕೋಟೆಯಲ್ಲಿ ದೀಪಾವಳಿಯ ಸಂಭ್ರಮವಿಲ್ಲದೇ ಕತ್ತಲು ಆವರಿಸಿರುತ್ತದೆ ಎಂದು ವಿಷಾದಿಸಿದ್ದಾರೆ.

ಈ ಹೃದಯವಿದ್ರಾವಕ ಘಟನೆಯು ಇತಿಹಾಸದ ಪುಟಗಳಿಗೆ ಮಾತ್ರ ಸೀಮಿತವಾಗಬಾರದು, ನಮ್ಮ ಸಾಮೂಹಿಕ ನೆನಪಿನಿಂದ ಮಾಸಬಾರದು. ಮೇಲುಕೋಟೆ ಹತ್ಯಾಕಾಂಡದ ಹುತಾತ್ಮರನ್ನು ಇಂದು ನಾವೆಲ್ಲರೂ ನೆನೆಯೋಣ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ