ಹಾವೇರಿ: ಕಾಲುವೆ ನೀರನ್ನ ನೋಡಲು ಹೋಗಿ ಕಾಲು ಜಾರಿ ಬಾಲಕನೊಬ್ಬ ಕೊಚ್ಚಿ ಹೋಗಿರುವ ಘಟನೆ ಹಾವೇರಿ ಜಿಲ್ಲೆಯ ಹರೆಕೆರೂರು ಗ್ರಾಮದಲ್ಲಿ ನಡೆದಿದೆ.
ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ ನಡೆದಿದೆ. ಬಾಲಕ ರಾಣೆಬೆನ್ನೂರಿನ ದುರ್ಗಾದೇವಿ ಕೆರೆಗೆ ಹೋಗುವಾಗ ಈ ದುರ್ಘಟನೆ ನಡೆದಿದೆ. ಕೊಚ್ಚಿಹೋಗಿರುವ ಬಾಲಕ ಸುಯೆಬ್ ಎಂದು ಗುರುತಿಸಲಾಗಿದ್ದು ಬಾಲಕನಿಗಾಗಿ ಶೋಧ ನಡೆಯುತ್ತಿದೆ.
ಅಗ್ನಿ ಶಾಮಕ ದಳದಿಂದ ದಂಪತಿ ರಕ್ಷಣೆ
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಜಾವುರು ಗ್ರಾಮದಲ್ಲಿ ಸಿಲುಕಿದ್ದ ದಂಪತಿಗಳನ್ನ ಅಗ್ನಿ ಶಾಮಕ ದಳ ರಕ್ಷಣೆ ಮಾಡಿದೆ. ಮಲ್ಲಾಪ್ರಭಾದಲ್ಲಿ ಭಾರಿ ನೀರು ಹರಿಯುತ್ತಿರೋದ್ರಿಂದ ತುಪ್ಪಾರಿ ಹಳದಲ್ಲಿ ಪ್ರವಾಹ ಉಂಟಾಗಿ ಹೊಲದಲ್ಲಿ ನೀರು ತುಂಬಿತ್ತು. ಬೆಳಗ್ಗೆ ಹೋಲಕ್ಕೆ ತೆರೆಳಿದ್ದ ದಂಪತಿ ಪ್ರಕಾಶ್ ಮತ್ತು ಸವಿತಾ ಹೊಲದಲ್ಲಿ ಸಿಲುಕಿಕೊಂಡ್ರು. ದಂಪತಿಯನ್ನ ರಕ್ಷಿಸಲು ಅಗ್ನಿ ಶಾಮಕ ದಳ ಬೋಟ್ ಮೂಲಕ ತೆರೆಳಿ ರಕ್ಷಣೆ ಮಾಡಿದೆ. ಅಗ್ನಿ ಶಾಮಕ ದಳದ ಸಾಹಸಕ್ಕೆ ಜಾವುರು ಗ್ರಮಸ್ಥರು ಧನ್ಯವಾದ ಹೇಳಿದ್ದಾರೆ.