ಉತ್ತರ ಕರ್ನಾಟಕಕ್ಕೆ ಮತ್ತೆ ಜಲಘಾತ

ಒಂದು ತಿಂಗಳ ಹಿಂದೆಯಷ್ಟೆ ಇಡೀ ಉತ್ತರ ಕರ್ನಾಟಕ ಜನೆತೆ ವರುಣಮ ಆರ್ಭಟಕ್ಕೆ ತುತ್ತಾಗಿದೆ. ಹೀಗಾಗಿ ಉತ್ತರ ಕರ್ನಾಟಕ ಮತ್ತೆ ಜಲಘಾತಕ್ಕೆ ತುತ್ತಾಗುವ ಸಾಧ್ಯತೆ ದಟ್ಟವಾಗಿದೆ.
ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರೆದಿದೆ.ಒಂದು ತಿಂಗಳ ನಂತರ ಗ್ರಾಮಗಳಿಗೆ ಹಿಂತಿರುಗಿದ್ದ ಬೆಳಗಾವಿ ಜನರು ಈಗ ಮತ್ತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ರಾಮದುರ್ಗ ತಾಲೂಕಿನ 10 ಗ್ರಾಮಗಳು ಜಲಾವೃತವಾಗಿವೆ. ನವಿಲುತೀರ್ಥ ಡ್ಯಾಂನಿಂದ ನೀರು ಬಿಡುಗಡೆ ಮಾಡಿದ್ದರಿಂದ ಗ್ರಾಮಗಳು ಜಲಾವೃವಾಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬೆಳಗಾವಿ ಜನತೆ ಮತ್ತೆ ವರುಣನ ಆರ್ಭಟಕ್ಕೆ ಸಿಲುಕಿದ್ದು ಚಿಂತೆಗೀಡುಮಾಡಿದೆ.ಭಾರೀ ಮಳೆಗೆ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಗ್ರಾಮದ ಜನರು ಪ್ರಾಣದ ಹಂಗನ್ನ ತೊರೆದು ಸೇತುವೆಗಳನ್ನ ದಾಟುತ್ತಿದ್ದಾರೆ. ಹಲವು ಮನೆಗಳಿಗೆ ನೀರು ನುಗ್ಗಿದ್ದರಿಂದ ಗ್ರಾಮಸ್ಥರು ಕಂಗಾಲ್ ಆಗಿದ್ದಾರೆ. ಮುನವಳ್ಳಿ- ಬೈಲಹೊಂಗಲದಲ್ಲಿ ರಸ್ತ ಸಂಪರ್ಕ ಕಡಿತ ವಾಗಿದೆಸವದತ್ತಿಯ ಹೊಸರು ಗ್ರಾಮದ ಸೇತುವೆ ಮುಳುಗಡೆಯಾಗಿದೆ. ಯಾದವಾಡದಲ್ಲಿ ಸೇತುವೆ ದಾಟುವಾಗ ಟ್ರ್ಯಾಕ್ಟರ್ ಪಲ್ಟಿ ಹೊಡೆದಿದೆ.
ಕುಸಿದ ರಸ್ತೆ ಸಿಲುಕಿದ ಬಸ್
ಬೆಳಗಾವಿಯ ಹೊಸ ವೆಂಟಮೂರಿಯಲ್ಲಿ ಸರ್ಕಾರಿ ಬಸ್ ನೆಲದಲ್ಲಿ ಸಿಲುಕಿದೆ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ ಆಗಿದೆ.
ಬಾಗಲಕೋಟೆ ತಾಲೂಕಿನ ಜಮಖಂಡಿ ತಬುಚಿ, ಶೂರ್ಪಾಲಿ, ಜಂಬಗಿ ಕೆಡಿ ಗ್ರಾಮಗಳು ಮಳೆ ಅಬ್ಬರಕ್ಕೆ ಸಿಲುಕಿದೆ. ಸಾಕು ಪ್ರಾಣಿಗಳು ಸಾವನಪ್ಪಿವೆ. ಅಧಿಕಾರಿಗಳು ಸಂತ್ರಸ್ಥರನ್ನ ಸುರಕ್ಷಿತ ಸ್ಥಳಕ್ಕೆ ರವಾನಿಸುತ್ತಿದ್ದಾರೆ.

ಬೆಳಗಾವಿಯ ಚಿಕ್ಕೊಡಿ ತಾಲೂಕಿನಲ್ಲಿ ಎರಡು ಕಾರುಗಳು ಪ್ರವಾಕ್ಕೆ ಕೊಚ್ಚಿ ಹೋಗಿದೆ.  ಜಾನುವಾರಗಳನ್ನ ಹಗ್ಗದಲ್ಲಿ ಕಟ್ಟುವಂತೆ ಬೈಕ್ ಗಳನ್ನ  ಸವಾರರು ಕಟ್ಟಿಹಾಕಿದ್ದಾರೆ.

ಮುಧೋಳದಲ್ಲಿ ಕುಸಿದ ಎರಡು ಮನೆ
ಭಾರೀ ಮಳೆಗೆ ಮುಧೋಳದಲ್ಲಿ ಎರಡು ಮನೆ ಕುಸಿತ ಕಂಡಿದೆ. ಡಂಗಿ ಗಲ್ಲಿಯಲ್ಲಿ ಅದೃಷ್ಟವಶತ್ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ತಿಳಿದು ಬಂದಿಲ್ಲ.
ಧಾರವಾಡಲ್ಲೂ ಜೋರಾಗಿದೆ ಮಳೆ ಅಬ್ಬರ
ಧಾರವಾಡದಲ್ಲಿ ಉಪ್ಪಿನಬೆಟ್ಟಗೇರಿ –ಹಾರೋಬೆಳವಡಿ ಸೇತುವೆ ಜಲಾವೃತ ಆಗಿದೆ. ಘಟ್ಟ ಪ್ರಭಾದ ತೀರಲ್ಲಿ ಪ್ರವಾಹಭೀತಿ 8 ಮನೆಗಳು ಜಲಾವೃತವಾಗಿವೆ.ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಬಾಗಲಕೋಟೆಯ ಮುಧೋಳ ತಾಲೂಕಿ ಚನಾಳ ಗ್ರಾಮ ಜಲಾವೃತವಾಗಿದೆ. ಸ್ಥಳಕ್ಕೆ ಸಚಿವ ಜಗದೀಶ್ ಶೆಟ್ಟರ್ ಭೇಟಿಕೊಟ್ಟಿದ್ದಾರೆ.

ಧಾರವಾಡಲ್ಲಿ ತಹಶೀಲ್ದಾರ್ ಕಚೇರಿ ಜಲಾವೃತ 

ಭಾರೀ ಮಳೆಗೆ ಧಾರವಾಢದ ತಹಶೀಲ್ದಾರ್ ಕಚೇರಿ ಕೂಡ ಜಲಾವೃತವಾಗಿದೆ. ಮಲ್ಲಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದರಿಂದ ಗದಗ ಜಿಲ್ಲೆಯ ನರಗುಂದ ಲಖಮಾಪುರ ಗ್ರಾಮದಲ್ಲಿ ಪ್ರವಾಹಕ್ಕೆ ಎಮ್ಮೆಗಳು ಸಿಲುಕಿಕೊಂಡಿದ್ದವು ಹಗ್ಗಗಳ ಸಹಾಯದಿಂದ  ಎಮ್ಮೆಗಳನ್ನ ರಕ್ಷಣೆ ಮಾಡಲಾಗಿದೆ.ಲಖಮಾಪುರ ಗ್ರಾಮ ನಡುಗುಡ್ಡೆಯಾಗುವ ಭೀತಿ ಎದುರಿಸುತ್ತಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ