ಬೆಂಗಳೂರು, ಅ.19-ದೀಪಾವಳಿ ಹಬ್ಬದ ಬಂಪರ್ ಕೊಡುಗೆ ಎಂಬಂತೆ ಪೆÇಲೀಸರ ಬಹುದಿನಗಳ ಬೇಡಿಕೆಯಾದ ವೇತನ ಹೆಚ್ಚಳ ಮಾಡುವ ಹಿರಿಯ ಪೆÇಲೀಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ವರದಿಗೆ ರಾಜ್ಯ ಸರ್ಕಾರ ಕೊನೆಗೂ ಅಸ್ತು ಎಂದಿದೆ.
ಪೆÇಲೀಸ್ ಹುತಾತ್ಮ ದಿನದ ಆಚರಣೆಯ ಮುನ್ನಾ ದಿನವೇ ತತ್ಕ್ಷಣದಿಂದ ಜಾರಿಗೆ ಬರುವಂತೆ ಪೆÇಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನ ಶ್ರೇಣಿಯನ್ನು ಪರಿಷ್ಕರಣೆ ಮಾಡುವ ರಾಘವೇಂದ್ರಔರಾದ್ಕರ್ ವರದಿಯನ್ನು ಆಗಸ್ಟ್ 1 ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ರಾಜ್ಯ ಸರ್ಕಾರವು ಪೆÇಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳ ಮತ್ತು ಅಧಿಕಾರಿಗಳ ವೇತನವನ್ನು ಪರಿಷ್ಕರಣೆ ಮಾಡುವ ಸಂಬಂಧ ರಚಿಸಲಾಗಿದ್ದ ರಾಘವೇಂದ್ರ ಔರಾದ್ಕರ್ ವರದಿಯಲ್ಲಿ ಶಿಫಾರಸು ಮಾಡಲಾಗಿದ್ದ ಬಹುತೇಕ ವರದಿಯನ್ನು ಸರ್ಕಾರ ಅಂಗೀಕಾರ ಮಾಡಿದೆ. ಜೊತೆಗೆ ಪೆÇಲೀಸ್ ಇಲಾಖೆಯ ಎಲ್ಲಾ ಶ್ರೇಣಿಯ ಈಗಿರುವ ಕಷ್ಟ ಪರಿಹಾರ ಭತ್ಯೆಯ ಹೆಚ್ಚುವರಿಯಾಗಿ ಒಂದು ಸಾವಿರ ರೂ. ಭತ್ಯೆಯನ್ನು ತಕ್ಷಣದಿಂದಲೇ ಅನ್ವಯವಾಗುವಂತೆ ಮಂಜೂರು ಮಾಡಲಾಗಿದೆ.
ರಾಜ್ಯ ಸರ್ಕಾರ ಕಷ್ಟ ಪರಿಹಾರ ಭತ್ಯೆ ಹೆಚ್ಚಳ ಮಾಡಿರುವ ಪರಿಣಾಮ ಮಾಸಿಕವಾಗಿ 10.70 ಕೋಟಿ ವಾರ್ಷಿಕವಾಗಿ 128.38 ಕೋಟಿ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಲಿದೆ. ರಾಜ್ಯ ಸರ್ಕಾರ ಏಕಕಾಲದಲ್ಲಿ ರಾಘವೇಂದ್ರ ಔರಾದ್ಕರ್ ಮತ್ತು ಕಷ್ಟ ಪರಿಹಾರ ಭತ್ಯೆ ಹೆಚ್ಚಳ ಮಾಡಿರುವ ಪರಿಣಾಮ ಹೊಸದಾಗಿ ಪೆÇಲೀಸ್ ಇಲಾಖೆ ಸೇರುವಪೇದೆಗಳಿಗೆ ಮಾಸಿಕ ವೇತನ 30,427 (ಎಲ್ಲಾ ಭತ್ಯೆಗಳು ಸೇರಿ) ಬದಲಿಗೆ 34,267 ವೇತನ ಶ್ರೇಣಿಯಾಗಿರುತ್ತದೆ. ಈ ಹಿಂದೆ ರಾಜ್ಯಸರ್ಕಾರ 6ನೇ ವೇತನ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಿದ ವೇಳೆ ರಾಘವೇಂದ್ರ ಔರಾದ್ಕರ್ ವರದಿಯಂತೆ ಪೆÇಲೀಸ್ ಸಿಬ್ಬಂದಿಯ ವೇತನವನ್ನು ಪರಿಷ್ಕರಣೆ ಮಾಡಲು ಹಾಗೂ ಜೈಲು ಸಿಬ್ಬಂದಿ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆ ಪಡೆಯ ಸಿಬ್ಬಂದಿಗಳಿಗೆ ವೇತನ ಪರಿಷ್ಕರಣೆ ಮಾಡಲು ವರದಿಯಲ್ಲಿ ಶಿಫಾರಸು ಮಾಡಿರಲಿಲ್ಲ. ಹೀಗಾಗಿ ಪೆÇಲೀಸ್ ಸಿಬ್ಬಂದಿಗೆ 6ನೇ ವೇತನ ಆಯೋಗದ ವರದಿಯನ್ವಯ ವೇತನ ಶ್ರೇಣಿ ಏರಿಕೆಯಾಗಿರಲಿಲ್ಲ. ಈ ಸಂಬಂಧ ಗೃಹ ಸಚಿವರೂ ಆಗಿರುವ ಬಸವರಾಜ್ ಬೊಮ್ಮಾಯಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದ್ದರು.
ಇದೀಗ ಸರ್ಕಾರ ಏಕಕಾಲದಲ್ಲಿ ಸಿಬ್ಬಂದಿಗೆ ಎರಡೂ ವೇತನ ಶ್ರೇಣಿಯನ್ನು ಹೆಚ್ಚಳ ಮಾಡಿದೆ.