ಬೆಂಗಳೂರು: ವಿಧಾನಮಂಡಲದಲ್ಲಿ ಸಿಎಂ ನೀಡಿದ ಭರವಸೆಯಂತೆ ಪ್ರವಾಹದಿಂದ ಮಳೆ ಹಾನಿ ಸಂಬಂಧ 5 ಲಕ್ಷ ರೂ. ಪರಿಹಾರ ನೀಡಲು ಅಧಿಕೃತ ಆದೇಶ ಹೊರಡಿಸಲಾಗಿದೆ.
ಶೇ.25 ರಿಂದ ಶೇ.75 ರಷ್ಟು ಹಾಗೂ ಸಂಪೂರ್ಣ ನಷ್ಟವಾಗಿರುವ ಎ ಮತ್ತು ಬಿ ವರ್ಗದಡಿಯ ಮನೆಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಶೇ.25ಕ್ಕಿಂತ ಕಡಿಮೆ ಹಾನಿಗೊಳಗಾದ ಸಿ ವರ್ಗದಡಿಯ ಮನೆಗಳ ಸಂಬಂಧ 50 ಸಾವಿರ ರೂ. ಪರಿಹಾರ ಕೊಡಲಾಗುತ್ತದೆ. ಈ ಪ್ರಸ್ತಾವನೆಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿಸರಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್ ಡಿಆರ್ ಎಫ್ ) ಕರ್ನಾಟಕಕ್ಕೆ 897 ಕೋಟಿ ರೂಪಾಯಿ ನೆರೆ ಪರಿಹಾರ ಬಿಡುಗಡೆ ಮಾಡಿದೆ. ಇನ್ನೂ 303 ಕೋಟಿ ರೂಪಾಯಿಯನ್ನು ಬಾಕಿ ಉಳಿಸಿಕೊಂಡಿದೆ.
ಗೃಹ ಸಚಿವಾಲಯದ ಆದೇಶದ ಮೇರೆಗೆ ಮೊದಲ ಹಂತದಲ್ಲಿ 897 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದು, ಬಾಕಿ 303 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಎನ್ಡಿಆರ್ ಎಫ್ ತಿಳಿಸಿದೆ. ಆದರೆ, ಬಾಕಿ ಹಣವನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎಂದು ತಿಳಿಸಿದೆ.