ಇಂಧನ ಬಿಲ್ ಪಾವತಿಸುತ್ತೇವೆ : ಏರ್ ಇಂಡಿಯಾ

ನವದೆಹಲಿ, ಅ.18- ಬಾಕಿ ಉಳಿದಿರುವ 5,000 ಕೋಟಿ ರೂ. ಇಂಧನ ಬಿಲ್ ಪಾವತಿಸುವುದಾಗಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಭರವಸೆ ನೀಡಿದ ನಂತರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಮ್ಮ ಉದ್ದೇಶಿತ ಇಂಧನ ಪೂರೈಕೆ ಸ್ಥಗಿತ ನಿರ್ಧಾರವನ್ನು ಮುಂದೂಡಿವೆ.
ಇಂಧನ ಪೂರೈಕೆ ನಿಲುಗಡೆಯಿಂದ ವಿಮಾಹ ಸಂಚಾರ ಹಾರಾಟ ಸ್ಥಗಿತ ಆತಂಕದಲ್ಲಿದ್ದ ಏರ್ ಇಂಡಿಯಾ ಸಂಸ್ಥೆಗೆ ಇದರಿಂದ ಬಿಗ್ ರಿಲೀಫ್ ದೊರೆತಂತಾಗಿದೆ.
ಆರ್ಥಿಕ ಬಿಕ್ಕಟ್ಟು, ಪೈಲೆಟ್‍ಗಳ ಮುಷ್ಕರ ಬೆದರಿಕೆ ಇತ್ಯಾದಿ ಸಮಸ್ಯೆಗಳಿಂದ ಬಳಸುತ್ತಿರುವ ಏರ್ ಇಂಡಿಯಾ ಸಂಸ್ಥೆ ಬಹು ದಿನಗಳಿಂದಲೂ ಮೂರು ತೈಲ ಕಂಪನಿಗಳಿಂದ ಭಾರೀ ಮೊತ್ತದ ಇಂಧನ ಬಿಲ್‍ಗಳನ್ನು ಬಾಕಿ ಉಳಿಸಿಕೊಂಡಿತ್ತು.
ಇಂಡಿಯನ್ ಆಲಿಯಲ್ ಕಾರ್ಪೋರೇಷನ್ (ಐಒಸಿ), ಹಿಂದೂಸ್ತಾನ್ ಪೆಟ್ರೋಲಿಯಂ ಕಾಪೆರ್Çರೇಷನ್ (ಎಚ್‍ಪಿಸಿಎಲ್) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್)ಗೆ ಏರ್ ಇಂಡಿಯಾ 5,000 ಕೋಟಿ ರೂ.ಗಳ ಬಾಕಿ ಮೊತ್ತವನ್ನು ದೀರ್ಘಕಾಲದಿಂದಲೂ ಪಾವತಿಸಿರಲಿಲ್ಲ.
ಬಾಕಿ ಪಾವತಿ ವಿಳಂಬವಾದ ಹಿನ್ನೆಲೆಯಲ್ಲಿ ಆರು ಪ್ರಮುಖ ನಿಲ್ದಾಣಗಳಲ್ಲಿನ ಏರ್ ಇಂಡಿಯಾಗೆ ಏವಿಯೇಷನ್ ಟರ್ಬೈನ್ ಫ್ಯೂಲ್ (ಎಟಿಎಫ್) ಪೂರೈಕೆಯಲ್ಲಿ ಸ್ಥಗಿತಗೊಳಿಸುವುದಾಗಿ ಈ ಮೂರು ಸಂಸ್ಥೆಗಳು ಈ ತಿಂಗಳಾಂತ್ಯದಲ್ಲಿ ಎಚ್ಚರಿಕೆ ನೀಡಿದ್ದವು. ಇದರಿಂದ ಏರ್ ಇಂಡಿಯಾದ ವಿಮಾನಗಳ ಹಾರಾಟ ನಿಲುಗಡೆಯಾಗುವ ಆತಂಕ ಎದುರಾಗಿತ್ತು.
ಏರ್ ಇಂಡಿಯಾ ಈಗ ಲಿಖಿತ ಹೇಳಿಕೆ ಮೂಲಕ ಈ ಮೊತ್ತವನ್ನು ಪಾವತಿಸುವುದಾಗಿ ಭರವಸೆ ನಿಡಿದ ನಂತರ ಈ ಮೂರು ಸಂಸ್ಥೆಗಳು ಉದ್ದೇಶಿತ ಇಂಧನ ಪೂರೈಕೆ ಸ್ಥಗಿತ ನಿರ್ಧಾರವನ್ನು ಮುಂದೂಡಿವೆ. ಇದರಿಂದ ಏರ್ ಇಂಡಿಯಾ ಸಂಸ್ಥೆ ನಿರಾಳವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ