ಬೆಂಗಳೂರು, ಅ.14- ರಾಜ್ಯದ ಯುವಕರಿಗೋಸ್ಕರ ಯುವ ಕರ್ನಾಟಕ ಎಂಬ ಪಕ್ಷವನ್ನು ಸ್ಥಾಪಿಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ವೇಣುಗೋಪಾಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ನಮ್ಮ ಯುವ ಕರ್ನಾಟಕ ಪಕ್ಷದಿಂದ ಯುವಕರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.ಇದೇ ಡಿಸೆಂಬರ್ನಲ್ಲಿ ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸುವ ಯುವಕರು ತಮ್ಮನ್ನು ಸಂಪರ್ಕಿಸುವಂತೆ ಹೇಳಿದರು.
35 ವರ್ಷದೊಳಗಿನ ಯುವಕರು ನೋಂದಾಯಿಸಿಕೊಳ್ಳಲು 8904284123ಕ್ಕೆ ಸಂಪರ್ಕಿಸಬಹುದೆಂದು ಹೇಳಿದರು.
ಬೆಂಗಳೂರು, ಅ.14-ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಅಗ್ರಗಣ್ಯ ನಾಯಕರಾಗಿ ಪ್ರಾದೇಶಿಕ ಎಲ್ಲೆ ಮೀರಿ ಬೆಳೆದವರಾಗಿದ್ದು, ಅವರನ್ನುಹುಣಸೂರಿಗೆ ಸೀಮಿತ ಮಾಡುವುದು ಬೇಡ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ರಮೇಶ್ಬಾಬು ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಅರಸು ಅವರ ಹೆಸರಿನಲ್ಲಿ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಪೀಠ ಪ್ರಾರಂಭಿಸಬೇಕು, ಚುನಾವಣೆಗಾಗಿ ಅವರನ್ನು ಹುಣಸೂರಿಗೆ ಸೀಮಿತ ಮಾಡುವುದು ಬೇಡ ಎಂದಿದ್ದಾರೆ.
ಆಡಳಿತ ಕಾರಣಕ್ಕಾಗಿ ಸಣ್ಣ ಸಣ್ಣ ಜಿಲ್ಲೆಗಳ ರಚನೆಯಾಗಬೇಕು. ಹಾಗೆಯೇ ತುಮಕೂರು ಜಿಲ್ಲೆಯ ತಿಪಟೂರು ಕೂಡ ಒಂದಾಗಿದ್ದು, ಸರ್ಕಾರ ಸಣ್ಣ ಜಿಲ್ಲೆಯಾಗಿ ತಿಪಟೂರನ್ನು ಮಾಡಲಿ ಎಂದು ರಮೇಶ್ಬಾಬು ಎಂದು ಒತ್ತಾಯಿಸಿದ್ದಾರೆ.